![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 2, 2020, 4:06 AM IST
ನೀರು ಸರಬರಾಜು, ಸೌರವಿದ್ಯುತ್, ಸ್ಮಾರ್ಟ್ ಯೋಜನೆಗಳು ಸೇರಿದಂತೆ ಸಾರಿಗೆಯೇತರ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದಲ್ಲದೆ, ರೈಲು, ವಿಮಾನ ನಿಲ್ದಾಣಗಳು, ರಸ್ತೆ ನಿರ್ಮಾಣದಂತಹ ಇ-ವಾಹನಗಳ ತಯಾರಿಕೆಗೆ ಒತ್ತು ಸೇರಿದಂತೆ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದ ಯೋಜನೆಗಳನ್ನೂ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದು, ಇದಕ್ಕಾಗಿ ಹಣ ಮೀಸಲಿಡಲಾಗಿದೆ. ಇದೆಲ್ಲದರಿಂದ ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿ ಕೂಡ ಆಗಲಿದೆ.
ಸ್ವಾತಂತ್ರ್ಯ ಬಂದು ಹಲವು ದಶಕಗಳು ಕಳೆದರೂ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಕೊರತೆ ಕಾಡುತ್ತಿತ್ತು. ಹಾಗೂ ಆಗಾಗ್ಗೆ ಒತ್ತು ನೀಡಿದ್ದರೂ ಅದು ಕೇವಲ ರಸ್ತೆ ನಿರ್ಮಾಣಕ್ಕೆ ಸೀಮಿತವಾಗಿತ್ತು. ಈಗ ಆ ಕೊರತೆ ನೀಗಿಸುವ ಪ್ರಯತ್ನ ಈ ಬಜೆಟ್‌ನಲ್ಲಿ ಆಗಿದೆ. ನೀರು ಸರಬರಾಜು, ಸೌರವಿದ್ಯುತ್, ಸ್ಮಾರ್ಟ್ ಯೋಜನೆಗಳು ಸೇರಿದಂತೆ ಸಾರಿಗೆಯೇತರ ಹಲವು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ.
ಇದಲ್ಲದೆ, ರೈಲು, ವಿಮಾನ ನಿಲ್ದಾಣಗಳು, ರಸ್ತೆ ನಿರ್ಮಾಣದಂತಹ ಇ-ವಾಹನಗಳ ತಯಾರಿಕೆಗೆ ಒತ್ತು ಸೇರಿದಂತೆ ಸಾರಿಗೆ ಸಂಪರ್ಕಕ್ಕೆ ಸಂಬಂಧಿಸಿದ ಯೋಜನೆಗಳನ್ನೂ ಕೈಗೆತ್ತಿಕೊಳ್ಳುವ ಭರವಸೆ ನೀಡಿದ್ದು, ಇದಕ್ಕಾಗಿ ಹಣ ಮೀಸಲಿಡಲಾಗಿದೆ. ಇದೆಲ್ಲದರಿಂದ ಪರೋಕ್ಷವಾಗಿ ಸಾವಿರಾರು ಉದ್ಯೋಗ ಸೃಷ್ಟಿ ಕೂಡ ಆಗಲಿದೆ. ಈ ನಿಟ್ಟಿನಲ್ಲಿ ಸ್ವಾಗತಾರ್ಹ ಕ್ರಮವಾಗಿದೆ.
ದೇಶಾದ್ಯಂತ ನೂರು ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಪ್ರಕಟಿಸಲಾಗಿದೆ. ಒಂದು ನಿಲ್ದಾಣದಿಂದ ನೂರಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಜತೆಗೆ ಹೊರರಾಜ್ಯ ಮತ್ತು ವಿದೇಶದಿಂದ ಬರುವ ಉದ್ಯಮಿಗಳಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಣೆ ಆಗಲಿದೆ. ಇದು ಭವಿಷ್ಯದಲ್ಲಿ ಎರಡು ಮತ್ತು ಮೂರನೇ ಹಂತದ ನಗರಗಳತ್ತ ಉದ್ಯಮಿಗಳು ಮುಖಮಾಡಲಿಕ್ಕೂ ನೆರವಾಗಲಿದೆ. ಪ್ರವಾಸೋದ್ಯಮ ಬೆಳವಣಿಗೆಗೂ ಪೂರಕವಾಗಲಿದೆ.
ವೇಗದ ರೈಲುಗಳು ಮತ್ತು ರೈಲು ಸಂಪರ್ಕ ಜಾಲ ವಿಸ್ತರಣೆ ಮಾಡಲಾಗಿದೆ. ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತುಕೊಟ್ಟಿದ್ದು ವಿಶೇಷ. ಉಪನಗರ ರೈಲು ಯೋಜನೆಗೆ 18,600 ಕೋಟಿ ರೂ. ಮೀಸಲಿಡಲಾಗಿದೆ. ಮೆಟ್ರೋ ಯೋಜನೆ ಪ್ರಸ್ತಾಪವೂ ಆಗಿದೆ. ಹಾಗಂತ, ಎಲ್ಲವೂ ಈ ಬಜೆಟ್‌ನಲ್ಲಿ ಆಗಿಬಿಟ್ಟಿದೆ ಎಂದೇನೂ ಅಲ್ಲ; ಒಮ್ಮೆಲೆ ಎಲ್ಲವನ್ನೂ ನಿರೀಕ್ಷಿಸಲಿಕ್ಕೂ ಆಗದು. ಒಟ್ಟಾರೆಯಾಗಿ ಹಿಂದಿನ ಬಜೆಟ್‌ಗಿಂತ ಈ ಸಲ ತುಸು ಆದ್ಯತೆ ನೀಡಿರುವುದು ತೃಪ್ತಿಕರ ಸಂಗತಿ.
* ಪ್ರೊ.ಎಂ.ಎನ್. ಶ್ರೀಹರಿ, ಮೂಲಸೌಕರ್ಯ ತಜ್ಞರು
You seem to have an Ad Blocker on.
To continue reading, please turn it off or whitelist Udayavani.