ಉಳಿಯಿತು 8ನೇ ಶತಮಾನದ ಬಾವಿ!ಬಾವಿಗೆ ಕಸ ಎಸೆಯುವುದರ ವಿರುದ್ಧ ಪ್ರತಿಭಟಿಸಿದ್ದ ನಾಗರಿಕರು
ಕೇರಳದ ರಾಜಮನೆತನಕ್ಕೆ ಸೇರಿದ ಬಾವಿಯನ್ನು ರಕ್ಷಿಸಿದ ಪುರಾತತ್ವ ಇಲಾಖೆ
Team Udayavani, Jul 18, 2022, 7:00 AM IST
ಮಲಪ್ಪುರಂ: ಕೇರಳದ ಹಳೆಯ ರಾಜಮನೆತನಗಳಲ್ಲಿ ಒಂದಾದ ಕೊಚ್ಚಿಯ ಪೆರುಂಬದಪ್ಪು ಸ್ವರೂಪಮ್‌ಗೆ ಸೇರಿದ 8ನೇ ಶತಮಾನದ ಬಾವಿಯೊಂದನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಿಸಿದೆ.
ಪೆರಂಬುದಪ್ಪು ಸ್ವರೂಪಮ್ ರಾಜಮನೆತನಕ್ಕೆ ಸಂಬಂಧಿಸಿದಂತೆ ಉಳಿದ ಒಂದೇ ಒಂದು ಸ್ಮಾರಕವೆಂದರೆ ಈ ಬಾವಿ ಮಾತ್ರ. ಇದನ್ನು “ಪೆರುಂಬದಪ್ಪು ವೆಲಿಯೆಕಿನಾರ್’ ಎಂದೂ ಕರೆಯುತ್ತಾರೆ. ಇದಕ್ಕೆ ಕಸ ತುಂಬಲು ಹೊರಟ ಕೆಲವರ ವಿರುದ್ಧ ಸ್ಥಳೀಯರು ಹೋರಾಟ ನಡೆಸಿದ್ದರು. ಇದರ ಫಲವೆಂಬಂತೆ, ಮಲಪ್ಪುರಂ ಜಿಲ್ಲೆಯ ವನ್ನೇರಿ ಸನಿಹದ ಈ ಬಾವಿ ಉಳಿದುಕೊಂಡಿದೆ. ಇದನ್ನು ಮೂಲಸ್ವರೂಪದಲ್ಲೇ ಉಳಿಸಲು ಭಾರತೀಯ ಪುರಾತತ್ವ ಇಲಾಖೆ 4 ವರ್ಷ, 4 ತಿಂಗಳುಗಳ ಕಾಲ ಶ್ರಮಿಸಿದೆ.
ಈ ಬಾವಿಯನ್ನು ಮೂಲಸ್ವರೂಪಕ್ಕೆ ತರಲು ತಮಿಳುನಾಡಿನ ನಿಪುಣ ಕೆಲಸಗಾರರನ್ನು ಕರೆಸಿ, ಉತ್ಖನನ ಮಾಡಿಸಲಾಗಿದೆ. ಬಾವಿಯ ಪ್ರಾಚೀನತೆಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ಜೆಸಿಬಿ, ಕ್ರೇನ್‌ಗಳನ್ನು ಬಳಸಿಲ್ಲ. ಉತ್ಖನನದ ವೇಳೆ ರಾಜಮನೆತನಕ್ಕೆ ಸೇರಿದ ಮಹತ್ವದ ವಸ್ತುಗಳೇನೂ ದೊರಕಿಲ್ಲ.
ವಸ್ತುಸ್ಥಿತಿಯಲ್ಲಿ ಈ ಬಾವಿಯಿಂದ ಜನರು ನೀರು ತೆಗೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಬಾವಿಗೆ ಸನಿಹದಲ್ಲಿ ಜಮೀನಿನ ಮಾಲಿಕರೊಬ್ಬರು ಇದಕ್ಕೆ ಕಸ ತುಂಬಲು ಯತ್ನಿಸಿದ್ದರು. ತಕ್ಷಣ ಜನ ಪ್ರತಿಭಟಿಸಿದರು. ಇದರ ಫಲವಾಗಿ 2015ರಲ್ಲಿ ಬಾವಿಯನ್ನು ಪ್ರಾಚೀನ ಸ್ಮಾರಕವೆಂದು ಪುರಾತತ್ವ ಇಲಾಖೆ ಘೋಷಿಸಿತು. 2018ರಿಂದ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.