Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ
ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾ ರೀತಿಯಲ್ಲಿ ಪರೀಕ್ಷೆ ಬರೆಯಲು ಪ್ಲಾನ್
Team Udayavani, Jan 12, 2025, 1:27 PM IST
ಮುಂಬೈ: ಸಂಜಯ್ ದತ್ ಅಭಿನಯದ ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾದಲ್ಲಿ ಪರೀಕ್ಷೆ ಬರೆದ ರೀತಿಯಲ್ಲೇ ಇಲ್ಲೊಬ್ಬ ಯುವಕ ಪೊಲೀಸ್ ಪರೀಕ್ಷೆ ಬರೆಯಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಮುಂಬೈ ನ ಒಶಿವಾರದಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಕುಷ್ನಾ ದಳವಿ(22) ಎನ್ನಲಾಗಿದೆ.
ಪೊಲೀಸ್ ಚಾಲಕ, ಕಾನ್ಸ್ಟೇಬಲ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು ಅದರಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು ಅದರಂತೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿತ್ತು ಹಾಗೆಯೇ ಓಶಿವಾರದ ರಾಯಗಢ ಮಿಲಿಟರಿ ಶಾಲೆಯಲ್ಲೂ ಪರೀಕ್ಷೆ ನಡೆಯುತ್ತಿತ್ತು ಈ ನಡುವೆ ಅಭ್ಯರ್ಥಿಯೋರ್ವ ಪರೀಕ್ಷೆ ಬರೆಯುವ ವೇಳೆ ಕಿವಿಗೆ ಕೈ ಹಿಡಿದುಕೊಂಡು ಪರೀಕ್ಷೆ ಬರೆಯುವುದು ಕಂಡು ಬಂದಿದೆ ಇದರಿಂದ ಅನುಮಾನಗೊಂಡ ಪರೀಕ್ಷಾ ಕೇಂದ್ರದಲ್ಲಿದ್ದ ಅಧಿಕಾರಿ ಅಭ್ಯರ್ಥಿಯ ಬಳಿ ತೆರಳಿ ಆತನನ್ನು ಪರಿಶೀಲನೆ ನಡೆಸಿದ್ದಾರೆ ಆಗ ಆತನ ಕಿವಿಯೊಳಗೆ ಏನೋ ಸಣ್ಣ ಸಾಧನ ಇದ್ದಂತೆ ಕಂಡುಬಂದಿದೆ ಬಳಿಕ ಆತನ ಕಿವಿಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದ ವೇಳೆ ಕಿವಿಯೊಳವೆ ಸಣ್ಣ ಬ್ಲೂ ಟೂತ್ ಸಾಧನ ಇರುವುದು ಬೆಳಕಿಗೆ ಬಂದಿದೆ.
ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರ ವಶಕ್ಕೆ ನೀಡಲಾಗಿದೆ ಅಲ್ಲದೆ ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪೊಲೀಸರು ಆರೋಪಿಯಿಂದ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಲೂ ಟೂತ್ ಸಾಧನವನ್ನು ವಶಪಡಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
Noida: ಜೀವ ತೆಗೆದ ಚೋಲೆ; ಸ್ಟವ್ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು
MUST WATCH
ಹೊಸ ಸೇರ್ಪಡೆ
Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು
Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು
BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
INDWvsIREW: ಜೆಮಿಮಾ ಚೊಚ್ಚಲ ಶತಕ: ದಾಖಲೆಯ ರನ್ ಪೇರಿಸಿದ ಭಾರತ ವನಿತೆಯರು
Manipal: ಮಣ್ಣಪಳ್ಳ ಸ್ವಚ್ಛತೆಗಿಳಿದ ಸಾರ್ವಜನಿಕರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.