ಸಂಸದರಿಗೆ “ಕಾಲ್ ಸೆಂಟರ್’
ಸಂಸತ್ ಭವನದಲ್ಲಿ "ಮಾಹಿತಿ ಮತ್ತು ಸಂವಹನ ಕೇಂದ್ರ'
Team Udayavani, Dec 29, 2019, 12:08 AM IST
ಹೊಸದಿಲ್ಲಿ: ದೇಶದ ಎಲ್ಲ ಸಂಸದರಿಗೆ ಆಡಳಿತಾತ್ಮಕವಾಗಿ ನೆರವಾಗುವ ಉದ್ದೇಶದೊಂದಿಗೆ ಸಂಸತ್ ಭವನದಲ್ಲಿ “ಮಾಹಿತಿ ಮತ್ತು ಸಂವಹನ ಕೇಂದ್ರ’ ಎಂಬ ಕಾಲ್ ಸೆಂಟರ್ ಅನ್ನು ಆರಂಭಿಸಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾರವರ ಆಸ್ಥೆಯಿಂದ ಆರಂಭವಾಗಿರುವ ಈ ಕೇಂದ್ರದಿಂದ ಸಂಸದರು, ಕಲಾಪಗಳಲ್ಲಿ ಯಾವುದೇ ವಿಷಯ ಮಂಡನೆ ಮಾಡ ಬೇಕಿದ್ದಲ್ಲಿ ಅದಕ್ಕೆ ಪೂರಕವಾದ ದಾಖಲೆಗಳನ್ನು ಈ ಕಾಲ್ ಸೆಂಟರ್‌ನ ಸಹಾಯದಿಂದ ಪಡೆಯಬಹುದು. ಜತೆಗೆ, ಸರಕಾರದಿಂದ ತಮಗೆ ಬರಬೇಕಿರುವ ಪ್ರಯಾಣ ಭತ್ಯೆಗಳ ಸ್ಥಿತಿಗಳನ್ನು ತಿಳಿಯಬಹುದು. ಹೀಗೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಹಲವಾರು ರೀತಿಗಳಲ್ಲಿ ಈ ಕೇಂದ್ರ ಸಂಸದರ ನೆರವಿಗೆ ಬರಲಿದೆ. ಕಳೆದ ತಿಂಗಳು, ಇದನ್ನು ಪ್ರಾಯೋಗಿಕ ವಾಗಿ ಆರಂಭಿಸಲಾಗಿದ್ದು ಅದು ಯಶಸ್ಸು ಕಂಡ ಹಿನ್ನೆಲೆಯಲ್ಲಿ ಈಗ ಪೂರ್ಣ ಪ್ರಮಾಣದಲ್ಲಿ ಇದನ್ನು ಚಾಲ್ತಿಗೆ ತರಲಾಗಿದೆ.
ಸ್ವರೂಪ ಹೇಗಿದೆ?: ಈ ಕಾಲ್ ಸೆಂಟರ್ ಸಂಸತ್ ಭವನದ 13ನೇ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರ ಜವಾಬ್ದಾರಿ ಯನ್ನು ಮೂವರು ಅಧಿಕಾರಿಗಳಿಗೆ ವಹಿಸಲಾಗಿದೆ. ಜತೆಗೆ, ಒಬ್ಬ ಮುಖ್ಯ ಸಂಯೋಜನಾಧಿಕಾರಿ, ಅವರ ಅಧೀನದಲ್ಲಿ ಕೆಲವಾರು ಸಹ-ಸಂಯೋಜನಾಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದಾರೆ. ಸಂಸದರು ಕಾಲ್ ಸೆಂಟರ್‌ನಲ್ಲಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯಲು ತಮ್ಮವರೇ ಆದ ವ್ಯಕ್ತಿಯೊಬ್ಬರನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಆ ವ್ಯಕ್ತಿ ಸಂಸದರ ಪರವಾಗಿ ಅಗತ್ಯ ಮಾಹಿತಿಯನ್ನು ಕಾಲ್‌ಸೆಂಟರ್ ಮೂಲಕ ಪಡೆಯಬಹುದು.
ಲೋಕಸಭಾ ಸ್ಪೀಕರ್
ಓಂ ಬಿರ್ಲಾರ ಆಶಯದಂತೆ ಕೇಂದ್ರ ಪ್ರಾರಂಭ
ಪ್ರಾಯೋಗಿಕವಾಗಿ ಯಶಸ್ಸು ಕಂಡಿದ್ದ ಕೇಂದ್ರವೀಗ ಪೂರ್ಣ ಪ್ರಮಾಣದಲ್ಲಿ ಆರಂಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.