ಫೋಟೋಶಾಪ್‌ನಲ್ಲೇ ಎವರೆಸ್ಟ್ ಏರಿದ ಪೊಲೀಸ್ ದಂಪತಿ ವಜಾ
Team Udayavani, Aug 11, 2017, 6:15 AM IST
ಹೊಸದಿಲ್ಲಿ: ಮೊಸರನ್ನ ತಿಂದ ಕೋತಿ, ಮೇಕೆ ಮೂತಿಗೆ ಕೈ ಒರೆಸಿದ ಕಥೆಯನ್ನ ನೀವು ಕೇಳಿರ ಬಹುದು. ಈಗ ಇದಕ್ಕೆ ತದ್ವಿರುದ್ಧವಾಗಿರುವ ಇಂಥದ್ದೇ ಒಂದು ಕಥೆ ಎವರೆಸ್ಟ್ ಶಿಖರದ ತುತ್ತ ತುದಿಯಿಂದ ಬಂದಿದೆ. ಈ ಕಥೆಯಲ್ಲಿ ಸಾಧನೆ ಮಾಡಿದವರು ಯಾರೋ ಆದರೆ, ಇನ್ನಾರೋ ಬಂದು ತಾವೇ ಸಾಧನೆ ಮಾಡಿದಂತೆ ಪೋಸು ನೀಡಿದ್ದಾರೆ.
ಮಹಾರಾಷ್ಟ್ರ ಮೂಲದ ಪೊಲೀಸ್ ಅಧಿಕಾರಿ ದಂಪತಿ, ತಾವು ಜಗತ್ತಿನ ಅತಿ ಎತ್ತರದ ಶಿಖರ ಎವರೆಸ್ಟ್‌ನ ತುದಿ ತಲುಪಿರುವುದಾಗಿ ನಕಲಿ ಫೋಟೋ (ಫೋಟೋಶಾಪ್ ಮಾಡಿದ ಚಿತ್ರ) ತೋರಿಸಿ ಸಾಧನೆ ಮಾಡಿದವರಂತೆ ಬೀಗಿದ್ದರು. ಆದರೆ ಆ ನಕಲಿ ಫೋಟೋದಲ್ಲಿ ಇದ್ದ ಅಸಲಿ ಸಾಧಕ ಈ ದಂಪತಿಯ ವಂಚನೆ ಬಯಲಿಗೆಳೆದಿದ್ದಾರೆ. ದಂಪತಿ “ತಪ್ಪು ಮಾಹಿತಿ ನೀಡಿ ಇಲಾಖೆಯ ಹಾದಿತಪ್ಪಿಸಿ ದ್ದಾರೆ’ ಎಂದು ಪರಿಗಣಿಸಿದ ಮಹಾರಾಷ್ಟ್ರ ಪೊಲೀಸ್ ಇಲಾಖೆ ಅವರನ್ನು ಕೆಲಸದಿಂದ ವಜಾ ಮಾಡಿದೆ.
ಬಯಲಾದ ವಂಚನೆ: ಆರಂಭದಲ್ಲಿ ಇವರು ಮಹಾನ್ ಸಾಧನೆ ಮಾಡಿದ್ದಾರೆ ಎಂದೇ ಎಲ್ಲರೂ ನಂಬಿದ್ದರು. ಆದರೆ ಇವರೊಟ್ಟಿಗೆ ಪರ್ವತಾ ರೋ ಹಣ ಶಿಬಿರದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸತ್ಯರೂಪ್ ಸಿದ್ಧಾಂತ್ ಸಾಕ್ಷಿ ಸಮೇತ ದಂಪತಿಯ ವಂಚನೆ ಬಯಲಿಗೆಳೆದಾಗ ಅಧಿಕಾರಿಗಳಾದಿ ಯಾಗಿ ಎಲ್ಲರೂ ಹೌದಾ ಎಂದು ಹೌಹಾರಿದ್ದಾರೆ.
“ನಾನು ಎವರೆಸ್ಟ್ ಏರಿದಾಗ ತೆಗೆಸಿಕೊಂಡ ಫೋಟೋ ವನ್ನೇ ಈ ದಂಪತಿ ಫೋಟೋಶಾಪ್‌ನಲ್ಲಿ ಎಡಿಟ್ ಮಾಡಿ ತಮ್ಮ ಮುಖ ಅಂಟಿಸಿದ್ದಾರೆ,’ ಎಂದು ಹೇಳಿದ ಸಿದ್ಧಾಂತ್, ಆನ್‌ಲೈನ್‌ನಲ್ಲಿ ತಾವು ಅಪ್‌ಲೋಡ್ ಮಾಡಿದ್ದ ಚಿತ್ರವನ್ನು ನೇಪಾಲ ಆಡಳಿತದ ಮುಂದಿರಿಸಿದರು. ವಂಚನೆ ಖಚಿತಪಡಿಸಿಕೊಂಡ ನೇಪಾಲ ಆಡಳಿತ ಅವರಿಬ್ಬರೂ 10 ವರ್ಷ ಪರ್ವತಾರೋಹಣ ಮಾಡದಂತೆ ನಿಷೇಧ ಹೇರಿದೆ.
ಏನಿದು ಪ್ರಕರಣ?
ಪರ್ವತಾರೋಹಣ ಹವ್ಯಾಸ ಹೊಂದಿರುವ ಮಹಾರಾಷ್ಟ್ರದ ದಿನೇಶ್ ಹಾಗೂ ತಾರಕೇ ಶ್ವರಿ ರಾಥೋಡ್ ದಂಪತಿ, ತಾವು 2016ರ ಮೇ 23ರಂದು ಮೌಂಟ್ ಎವರೆಸ್ಟ್ ಏರಿದ್ದಾಗಿ ಹೇಳಿ, ಪರ್ವತದ ತುತ್ತ ತುದಿ ಯಲ್ಲಿ ನಿಂತು, ಭಾರತದ ಧ್ವಜ ಹಿಡಿದು ತೆಗೆಸಿಕೊಂಡ ಚಿತ್ರವೊಂದನ್ನು ಸಂಬಂಧಿ ಸಿದ ಇಲಾಖೆಗೆ ನೀಡಿದ್ದರು. ಇದನ್ನು ಸತ್ಯ ಎಂದು ನಂಬಿದ ನೇಪಾಲ ಆಡಳಿತ ಇವರಿಗೆ ಪ್ರಮಾಣಪತ್ರವನ್ನೂ ದಯಪಾಲಿ ಸಿತ್ತು. ಅಲ್ಲದೆ ಎವರೆಸ್ಟ್ ಏರಿದ ಮೊದಲ ದಂಪತಿ ಎಂಬ ಪುಕ್ಕಟೆ ಪ್ರಚಾರವೂ ಸಿಕ್ಕಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.