Delhi: ಬೈಕ್ ನಲ್ಲಿದ್ದ ಪೊಲೀಸ್ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ
Team Udayavani, Sep 29, 2024, 12:10 PM IST
ಹೊಸದಿಲ್ಲಿ: ದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ಶನಿವಾರ (ಸೆ.28) ತಡರಾತ್ರಿ ಕಾರೊಂದು 30 ವರ್ಷದ ಪೊಲೀಸ್ ಪೇದೆಯೊಬ್ಬರಿಗೆ ಗುದ್ದಿ ಎಳೆದೊಯ್ದ ಪರಿಣಾಮ ಅವರು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ.
ಸಂದೀಪ್ ಎಂಬ ಪೊಲೀಸ್ ಸಿವಿಲ್ ಬಟ್ಟೆಯಲ್ಲಿದ್ದು, ಈ ಪ್ರದೇಶದಲ್ಲಿ ಕಳ್ಳತನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿರುವುದರ ಎಂದು ತನಿಖೆ ಮಾಡಲು ಕರ್ತವ್ಯದಲ್ಲಿದ್ದರು. ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ವ್ಯಾಗನಾರ್ ಕಾರು ಅವರನ್ನು ಹಿಂದಿಕ್ಕಲು ಪ್ರಯತ್ನಿಸಿತು. ಕಾರು ಅತಿವೇಗದಿಂದ ಓಡಿಸುತ್ತಿದ್ದು ಸಂದೀಪ್ ಅವರು ಚಾಲಕನಿಗೆ ನಿಧಾನಗೊಳಿಸುವಂತೆ ಹೇಳಿದರು. ಈ ವೇಳೆ ಏಕಾಏಕಿ ಕಾರಿನ ವೇಗ ಹೆಚ್ಚಿಸಿ ಹಿಂದಿನಿಂದ ಸಂದೀಪ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ.
ದ್ವಿಚಕ್ರವಾಹನ ಮತ್ತು ಸಂದೀಪ್ ಅವರನ್ನು ಕಾರು ಸುಮಾರು 10 ಮೀಟರ್ ಎಳೆದುಕೊಂಡು ಹೋಗಿದೆ. ಸಂದೀಪ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಬಳಿಕ ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. ನಂತರ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದೆ. ಪೋಲೀಸರು ಕಾರು ಚಾಲಕನಿಗೆ ನಿಧಾನಗೊಳಿಸುವಂತೆ ಸನ್ನೆ ಮಾಡುತ್ತಿರುವುದು ಕಂಡುಬರುತ್ತದೆ. ಆದರೆ ಕಾರು ವೇಗವಾಗಿ ಬಂದು ಅವರಿಗೆ ಡಿಕ್ಕಿ ಹೊಡೆದಿದೆ.
ಪೊಲೀಸರ ಪ್ರಕಾರ, ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಆರೋಪಿಗಳು ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ವಶಪಡಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ.
ಪೋಲೀಸ್ ಸಂದೀಪ್ ಅವರು ತಾಯಿ, ಪತ್ನಿ ಮತ್ತು ಐದು ವರ್ಷದ ಮಗನನ್ನು ಅಗಲಿದ್ದಾರೆ.
ಕಾರಿನಲ್ಲಿದ್ದವರೊಬ್ಬರು ಅಕ್ರಮ ಮದ್ಯದ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ, ಆದರೆ ಪೊಲೀಸರು ಇದನ್ನು ಖಚಿತಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಂಗೀತ ಕಾರ್ಯಕ್ರಮದ ನಡುವೆ ಧಿಡೀರ್ ಅರೋಗ್ಯ ಏರುಪೇರು… ಸೋನು ನಿಗಮ್ ಆಸ್ಪತ್ರೆಗೆ ದಾಖಲು
Grammys: ಎಲ್ಲರ ಮುಂದೆ ಖಾಸಗಿ ಅಂಗ ಕಾಣುವ ಬಟ್ಟೆ ಹಾಕಿಕೊಂಡು ಬಂದ ಖ್ಯಾತ ಮಾಡೆಲ್
Hunasuru: ಹುಲಿ ದಾಳಿಗೆ ಬಲಿಯಾದ ದೇವಸ್ಥಾನದ ಬಸವ… ಹುಲಿ ಸೆರೆಗೆ ಗ್ರಾಮಸ್ಥರ ಆಗ್ರಹ
Wedding: ಇದೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಲಗ್ನ!
Bribery Case: ದಾವಣಗೆರೆ ಪ್ರೊಫೆಸರ್ ಸೇರಿ 10 ಮಂದಿ ಸಿಬಿಐ ಬಲೆಗೆ