129 ವರ್ಷಗಳ ಬಳಿಕ ದೊರೆತ ಅಪರೂಪದ ಹಾವು
Team Udayavani, Jun 30, 2020, 9:16 AM IST
ಗುವಾಹಟಿ: ಸುಮಾರು 129 ವರ್ಷಗಳ ಹಿಂದೆ ಕಾಣಿಸಿಕೊಂಡು, ಬಳಿಕ ಕಾಣೆಯಾಗಿದ್ದ ಅಪರೂಪದ ಜಾತಿಯ ಹಾವನ್ನು ಭಾರತೀಯ ವನ್ಯಜೀವಿ ಸಂಸ್ಥೆಯ ತಂಡವೊಂದು ಪತ್ತೆಹಚ್ಚಿದೆ. ಹೆಬಿಯಸ್ ಪಿಯಾಲಿ ಎಂಬ ವೈಜ್ಞಾನಿಕ ಹೆಸರಿನ ಹಾಗೂ ಅಸ್ಸಾಂ ಕೀಲ್ ಬ್ಯಾಕ್ ಎಂದು ಕರೆಯಲ್ಪಡುವ ಈ ಹಾವು ಕಡೆಯದಾಗಿ ಕಾಣಿಸಿಕೊಂಡಿದ್ದು 1891ರಲ್ಲಿ. ಅಸ್ಸಾಂನ ಸಿಬ್ಸಗರ್ ಜಿಲ್ಲೆಯಲ್ಲಿ ಬ್ರಿಟಿಷ್ ಟೀ ಪ್ಲಾಂಟರ್ ಸ್ಯಾಮ್ಯುಯಲ್ ಎಡ್ವರ್ಡ್ ಪೀಲ್ ಎಂಬಾತನಿಗೆ ಈ ಜಾತಿಯ ಎರಡು ಗಂಡು ಹಾವುಗಳು ಸಿಕ್ಕಿದ್ದವು. 50ರಿಂದ 60 ಸೆ.ಮೀ ಉದ್ದ ಬೆಳೆಯುವ ಅಸ್ಸಾಂ ಕೀಲ್‌ಬ್ಯಾಕ್, ಒಂದು ವಿಷವಿಲ್ಲದ ಹಾವು. ವಿಶೇಷವೆಂದರೆ 1891ರಲ್ಲಿ ದೊರೆತಿದ್ದ, ಅಸ್ಸಾಂ-ಅರುಣಾಚಲ ಪ್ರದೇಶದ ಗಡಿಗೆ ಹೊಂದಿಕೊಂಡಿರುವ 118 ಕಿ.ಮೀ ವ್ಯಾಪ್ತಿ ಹೊಂದಿರುವ ಪೋಬಾ ಸಂರಕ್ಷಿತ ಅರಣ್ಯದಲ್ಲೇ ಈ ಹಾವು ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.