Parliament ಬೆಂಕಿ ಹಚ್ಚಿಕೊಳ್ಳಲು ಸಂಚು ಹೂಡಿದ್ದ ಹೊಗೆ ಬಾಂಬ್ ಗ್ಯಾಂಗ್
ಅಸಲಿ ಯೋಜನೆ ಕಾರ್ಯಸಾಧ್ಯವಾಗದೆ ಪ್ಲ್ಯಾನ್ ಬಿ ಜಾರಿ
Team Udayavani, Dec 17, 2023, 1:01 AM IST
ಹೊಸದಿಲ್ಲಿ: ಸಂಸತ್ತಿನೊಳಗೆ ದುಷ್ಕೃತ್ಯ ಎಸಗುವ ಯೋಜನೆಗೆ ಮುನ್ನ ಆರೋಪಿಗಳು ಸದನದೊಳಗೆ ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಅವಾಂತರ ಸೃಷ್ಟಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪ್ರಧಾನ ಆರೋಪಿ ಲಲಿತ್ ಮೋಹನ್ ಝಾ ಬಹಿರಂಗ ಪಡಿಸಿದ್ದಾನೆ.
ಸಂಸತ್ತಿನ ಒಳಗೆ – ಹೊರಗೆ ಬೆಂಕಿ ಹಚ್ಚಿಕೊಳ್ಳುವ ಮೂಲಕ ಗಮನ ಸೆಳೆಯುವ ಯೋಜನೆ ಹಾಕಿಕೊಂಡಿದ್ದೆವು. ಇದರಿಂದ ಸರಕಾರಕ್ಕೆ ಸಂದೇಶ ನೀಡಿದಂತಾ ಗುತ್ತದೆ ಎಂಬ ಲೆಕ್ಕಾಚಾರವಿತ್ತು ಎಂದು ಝಾ ತಿಳಿಸಿದ್ದಾಗಿ ಪೊಲೀ ಸರು ಹೇಳಿದ್ದಾರೆ.
“ಬೆಂಕಿ ಹಚ್ಚಿಕೊಳ್ಳುವುದಕ್ಕೆ ಮುನ್ನ ಶರೀರಕ್ಕೆ ಹೆಚ್ಚು ಹಾನಿಯಾಗದಂತೆ ನೋಡಿಕೊಳ್ಳಲು ದೇಹ ಪೂರ್ತಿ ಅಗ್ನಿ ನಿರೋಧಕ ಜೆಲ್ ಹಚ್ಚಿಕೊಳ್ಳಲು ನಿರ್ಧರಿಸಿದ್ದೆವು. ಆದರೆ ಸಾಕಷ್ಟು ಜೆಲ್ ಸಿಗದ ಕಾರಣ ಈ ಯೋಜನೆಯನ್ನು ಕೈಬಿಟ್ಟೆವು. ಅನಂತರ ಸಂಸತ್ತಿನೊಳಗೆ ನುಗ್ಗಿ ಜನಪ್ರತಿನಿಧಿಗಳಿಗೆ ಕರಪತ್ರಗಳನ್ನು ಹಂಚುವುದನ್ನೂ ಪರಿಗಣಿಸಿದ್ದೆವು. ಕೊನೆಗೆ, ಪ್ಲ್ಯಾನ್ ಬಿ ಪ್ರಕಾರ, ಸಂಸತ್ತಿನೊಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳ ಮೂಲಕ ಹೊಗೆ ಬಾಂಬ್ ಸಿಡಿಸುವ ಯೋಜನೆಯನ್ನು ಅಂತಿಮಗೊಳಿಸಿದೆವು ಎಂದು ಬಂಧಿತ ಲಲಿತ್ ಝಾ ಪೊಲೀಸರಿಗೆ ತಿಳಿಸಿದ್ದಾನೆ.
ರಾಜಕೀಯ ಪಕ್ಷ ಸ್ಥಾಪನೆ ಗುರಿ
ನಾವೆಲ್ಲರೂ ಭಗತ್ ಸಿಂಗ್ ಮತ್ತು ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದವರು. ದೇಶದ ಸಮಸ್ಯೆಗಳನ್ನು “ಕಿವುಡಾಗಿರುವ ಕಿವಿಗಳಿಗೆ’ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು. ಜತೆಗೆ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸುವ ಗುರಿಯನ್ನೂ ಹಾಕಿಕೊಂಡಿದ್ದೆವು ಎಂದು ಆರೋಪಿಗಳು ಹೇಳಿ ದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ದರಷ್ಟೇ ನಮ್ಮೆಲ್ಲ ಅಭಿಪ್ರಾಯಗಳನ್ನು ಜನರಿಗೆ ತಲುಪಿಸಲು ಸಾಧ್ಯ ಎಂದು ನಂಬಿದ್ದರು. ಪ್ರಸ್ತುತ ಇರುವ ಯಾವ ರಾಜಕೀಯ ಪಕ್ಷಗಳ ಸಿದ್ಧಾಂತ ಗಳೂ ನಮಗೆ ಒಪ್ಪಿಗೆಯಾಗುತ್ತಿಲ್ಲ. ಹೀಗಾಗಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳಲು ಇಚ್ಛಿಸಲಿಲ್ಲ ಎಂದು ಸಾಗರ್ ಶರ್ಮಾ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.