ದುಬಾರಿ ಅಣಬೆ; ಅಲ್ಪೇಶ್ ಗೆ ತೈವಾನ್ ಮಹಿಳೆ ಕೊಟ್ಟ ಉತ್ತರ ಓದಿ!
Team Udayavani, Dec 13, 2017, 11:35 AM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತ್ವಚೆಯ ಬಣ್ಣ ಬಿಳಿಯಾಗುವುದಕ್ಕಾಗಿ ದಿನಂಪ್ರತಿ ನಾಲ್ಕು ಲಕ್ಷ ರೂ. ಬೆಲೆಯ ಐದು ತೈವಾನೀ ಅಣಬೆಗಳನ್ನು ತಿನ್ನುತ್ತಾರೆ ಎಂದು ಹೇಳಿದ್ದ ಗುಜರಾತ್ ಕಾಂಗ್ರೆಸ್ ಒಬಿಸಿ ನಾಯಕ ಅಲ್‌ಪೇಶ್ ಠಾಕೂರ್ ಅವರಿಗೆ ತೈವಾನೀ ಮಹಿಳೆಯೊಬ್ಬರು ಸಾಮಾಜಿಕ ಜಾಲ ತಾಣದಲ್ಲಿ ನೀಡಿರುವ ಉತ್ತರದಿಂದ ತೀವ್ರ ಮುಖಭಂಗವಾಗಿದೆ.
“ನನ್ನ ಹೆಸರು ಮೆಸೀ ಜೋ; ನಾನು ತೈವಾನ್ ದೇಶದವಳು; ನಾನಿಂದು ಭಾರತದ ಸುದ್ದಿಯೊಂದನ್ನು ಓದಿದೆ. ಅದರಲ್ಲಿ ಭಾರತೀಯ ನಾಯಕರೊಬ್ಬರು 1,200 ಡಾಲರ್ ಬೆಲೆಯ ತೈವಾನೀ ಅಣಬೆಯನ್ನು ತಿಂದರೆ ನಿಮ್ಮ ಮೈ ಬಣ್ಣ ಬಿಳಿಯಾಗುತ್ತದೆ ಎಂದು ಹೇಳಿದ್ದಾರೆ. ನನ್ನ ದೇಶದಲ್ಲಿ ಇಂತಹ ಯಾವುದೇ ವಿಷಯವನ್ನು ನಾನು ಈ ವರೆಗೂ ಕೇಳಿದ್ದಿಲ್ಲ; ಇದು ನಿಜಕ್ಕೂ ಅಸಾಧ್ಯ; ನಿಮ್ಮ ಚುನಾವಣಾ ಕದನದಲ್ಲಿ ನನ್ನ ದೇಶದ ಹೆಸರನ್ನು ಎಳೆದು ತರಬೇಡಿ’ ಎಂದು ಆಕೆ ಹೇಳಿದ್ದಾಳೆ.
ಮೆಸೀ ಜೋ ಎಂಬ ತೈವಾನೀ ಮಹಿಳೆಯ ಈ ಉತ್ತರವು ಕಾಂಗ್ರೆಸ್ ಓಬಿಸಿ ನಾಯಕ ಅಲ್‌ಪೇಶ್ ಠಾಕೂರ್‌ಗೆ ತಪರಾಕಿ ನೀಡಿದಂತಿದೆ. ಚುನಾವಣಾ ಪ್ರಚಾರದ ವೇಳೆ ಜನರನ್ನು ಮೂರ್ಖರನ್ನಾಗಿಸುವ ಸುಳ್ಳು ಸಂಗತಿಗಳನ್ನು ರಾಜಕಾರಣಿಗಳು ಸತ್ಯಸ್ಯ ಸತ್ಯ ಎಂಬಂತೆ ಬಿಂಬಿಸಲು ಯತ್ನಿಸುತ್ತಾರೆ ಎಂಬುದಕ್ಕೆ ಈ ಪ್ರಕರಣ ಜ್ವಲಂತ ಸಾಕ್ಷಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…