ಪ್ರಧಾನಿ ಸಮ್ಮುಖದಲ್ಲಿ ಇಂದು ಕಾರ್ಯಕ್ರಮನೀಡಲಿದೆ ಬುಡಕಟ್ಟು ಮಕ್ಕಳ ತಂಡ
Team Udayavani, Oct 31, 2022, 7:30 AM IST
ಅಹಮದಾಬಾದ್: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಅಂಬಾಜಿ ಪಟ್ಟಣದ ಬುಡಕಟ್ಟು ಮಕ್ಕಳ ಸಂಗೀತ ತಂಡ ಅ.31ರಂದು ಕೆವಾಡಿಯಾದಲ್ಲಿ ಪ್ರಧಾನ ಮಂತ್ರಿಯವರ ಮುಂದೆ ಕಾರ್ಯಕ್ರಮ ನೀಡಲಿದೆ.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲಭಭಾಯ್ ಪಟೇಲ್ ಅವರ 147ನೇ ಜನ್ಮದಿನ ಪ್ರಯುಕ್ತ ಏಕತಾ ಪ್ರತಿಮೆ ಬಳಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆದರಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. ಪ್ರಧಾನಿಗಳು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ.
ಸೆ.30ರಂದು ಪ್ರಧಾನಮಂತ್ರಿಯವರು ಗುಜರಾತ್‌ನ ಅಂಬಾಜಿಗೆ ಭೇಟಿ ನೀಡಿದಾಗ ಇದೇ ತಂಡ ಕಾರ್ಯಕ್ರಮ ನೀಡಿ, ಅವರ ಮೆಚ್ಚುಗೆ ಗಳಿಸಿಕೊಂಡಿತ್ತು. ಸಂತೋಷಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ತಂಡದ ಸದಸ್ಯರ ಜತೆಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ ಫೋಟೋ ತೆಗೆಸಿಕೊಂಡಿದ್ದರು.
ಅಸಾಧಾರಣ ಸಂಗೀತ ಕೌಶಲ್ಯಗಳನ್ನು ಕಲಿತ ಈ ಬುಡಕಟ್ಟು ಮಕ್ಕಳ ಯಶೋಗಾಥೆ ಅದ್ಭುತವಾಗಿದೆ. ಈ ಮಕ್ಕಳು ಮೂಲಭೂತ ಅಗತ್ಯಗಳಿಗಾಗಿ, ಶಿಕ್ಷಣ ಪಡೆಯುವ ಅವಕಾಶಕ್ಕಾಗಿ ಹೋರಾಡುತ್ತಿದ್ದರು. ಅವರು ಆಗಾಗ್ಗೆ ಅಂಬಾಜಿ ದೇವಾಲಯದ ಬಳಿ ಕಾಣಿಸಿಕೊಂಡು ಭಿಕ್ಷೆ ಬೇಡುತ್ತಿದ್ದರು. ಅಂಬಾಜಿಯಲ್ಲಿರುವ ಶ್ರೀ ಶಕ್ತಿ ಸೇವಾ ಕೇಂದ್ರ ಎಂಬ ಸ್ಥಳೀಯ ಎನ್‌ಜಿಒ ಈ ಮಕ್ಕಳಿಗಾಗಿ ಕೆಲಸ ಮಾಡಿತು. ಅವರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೆ ಅವರಲ್ಲಿರುವ ಉತ್ತಮ ಕೌಶಲ್ಯಗಳನ್ನು ಗುರುತಿಸಲು ಸಹ ನೆರವು ನೀಡಿತು. ಸಂಗೀತ ತಂಡದ ಬುಡಕಟ್ಟು ಮಕ್ಕಳಿಗೆ ಶ್ರೀ ಶಕ್ತಿ ಸೇವಾ ಕೇಂದ್ರ ಎನ್‌ಜಿಒ ಕೌಶಲ್ಯವನ್ನು ಸಹ ಒದಗಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.