ಕಚೇರಿಯಲ್ಲೇ ಗೋಡ್ಸೆ ಪ್ರತಿಮೆ ಸ್ಥಾಪಿಸಿದ ಹಿಂದೂ ಮಹಾಸಭಾ
Team Udayavani, Nov 16, 2017, 11:05 AM IST
ಭೋಪಾಲ್ : ಬಲಪಂಥೀಯ ಸಂಘಟನೆ ಎನಿಸಿರುವ ಅಖೀಲ ಭಾರತೀಯ ಹಿಂದೂ ಮಹಾಸಭಾ ಗ್ವಾಲಿಯರ್‌ನಲ್ಲಿನ ತನ್ನ ಕಾರ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಹಂತಕ ನತ್ತೂರಾಮ್ ಗೋಡ್ಸೆ ಯ ಎದೆಮಟ್ಟದ ಪ್ರತಿಮೆಯನ್ನು ಸ್ಥಾಪಿಸಿದೆ.
ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸಿದ ಬಳಿಕ ಸಂಘಟನೆಯ ನಾಯಕರು ಗೋಡ್ಸೆಯ ಪುಣ್ಯ ತಿಥಿಯನ್ನು ಆಚರಿಸಿದರು ಎಂದು ಎಎನ್‌ಐ ವರದಿ ಮಾಡಿದೆ.
ನತ್ತೂರಾಮ್ ಗೋಡ್ಸೆ ಹೆಸರಿನಲ್ಲಿ ದೇವಸ್ಥಾನವೊಂದನ್ನು ನಿರ್ಮಿಸುವ ಹಿಂದೂ ಮಹಾಸಭಾ ಪ್ರಸ್ತಾವಕ್ಕೆ ಈ ಹಿಂದೆ ಗ್ವಾಲಿಯರ್ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.
ಗೋಡ್ಸೆಯ 32 ಇಂಚು ಎತ್ತರದ ಎದೆಮಟ್ಟದ ಮೂರ್ತಿಯನ್ನು ಕಾರ್ಯಾಲಯದಲ್ಲಿ ಸ್ಥಾಪಿಸಿದ ಬಳಿಕ ಮಾತನಾಡಿದ ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರಧ್ವಾಜ್, “ನ.9ರಂದು ನಾವು ಗೋಡ್ಸೆ ದೇವಳವನ್ನು ನಿರ್ಮಿಸಲು ಅನುಮತಿ ಕೋರಿದ್ದೆವು; ಆದರೆ ಜಿಲ್ಲಾಡಳಿತ ನಮ್ಮ ಮನವಿಯನ್ನು ತಿರಸ್ಕರಿಸಿತು’ ಎಂದು ಹೇಳಿದರು.
ಈಗ ನಮ್ಮ ಕಾರ್ಯಾಲಯದಲ್ಲೇ ನಾವು ಗೋಡ್ಸೆ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಆತನಿಗೆ ದೇವಳವನ್ನು ನಿರ್ಮಿಸಿದಂತಾಗಿದೆ ಎಂದು ಜೈವೀರ್ ಭಾರದ್ವಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.