Jaipur; ರಾಷ್ಟ್ರೀಯ ಉದ್ಯಾನವನದಿಂದ ಭಾರೀ ಸಂಖ್ಯೆಯ ಹುಲಿಗಳು ನಾಪತ್ತೆ!
Team Udayavani, Nov 6, 2024, 12:50 PM IST
ಜೈಪುರ: ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ (RNP) ಇರುವ 75 ಹುಲಿಗಳ ಪೈಕಿ 25 ಹುಲಿಗಳು ಕಳೆದ ವರ್ಷ ನಾಪತ್ತೆಯಾಗಿವೆ ಎಂದು ರಾಜಸ್ಥಾನದ ಮುಖ್ಯ ವನ್ಯಜೀವಿ ವಾರ್ಡನ್ ಪವನ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.
ಒಂದು ವರ್ಷದಲ್ಲಿ ಇಷ್ಟೊಂದು ಅಧಿಕ ಸಂಖ್ಯೆಯ ಹುಲಿಗಳು ನಾಪತ್ತೆಯಾಗಿರುವ ಬಗ್ಗೆ ಅಧಿಕೃತವಾಗಿ ವರದಿಯಾಗಿರುವುದು ಇದೇ ಮೊದಲು. ಈ ಹಿಂದೆ, ಜನವರಿ 2019 ಮತ್ತು ಜನವರಿ 2022 ರ ನಡುವೆ ರಣಥಂಬೋರ್‌ನಿಂದ 13 ಹುಲಿಗಳು ನಾಪತ್ತೆಯಾಗಿದ್ದವು.
ಸೋಮವಾರ(ನ3), ವನ್ಯಜೀವಿ ಇಲಾಖೆಯು ನಾಪತ್ತೆಯಾದ ಹುಲಿಗಳ ಕುರಿತು ತನಿಖೆಗಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿದೆ. ತಂಡವು ಮೇಲ್ವಿಚಾರಣಾ ದಾಖಲೆಗಳನ್ನು ಪರಿಶೀಲಿಸಿ ಉದ್ಯಾನವನದ ಅಧಿಕಾರಿಗಳಿಂದ ಯಾವುದೇ ಲೋಪ ಕಂಡುಬಂದಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಿದೆ. ಈ ವರ್ಷದ ಮೇ 17 ರಿಂದ ಸೆಪ್ಟೆಂಬರ್ 30 ರ ನಡುವೆ ಕಾಣಿಸಿಕೊಂಡಿರದ 14 ಹುಲಿಗಳ ಪತ್ತೆಗೆ ವಿಶೇಷ ಗಮನಹರಿಸಲಾಗಿದೆ.
ನವೆಂಬರ್ 4 ರಂದು ಹೊರಡಿಸಲಾದ ಅಧಿಕೃತ ಆದೇಶವು ರಣಥಂಬೋರ್‌ನ ಮೇಲ್ವಿಚಾರಣ ಮೌಲ್ಯಮಾಪನಗಳಿಂದ ನಾಪತ್ತೆಯಾದ ಹುಲಿಗಳ ವರದಿಗಳು ಪದೇ ಪದೇ ಹೊರಹೊಮ್ಮುತ್ತಿವೆ ಎಂದು ಹೇಳಿದೆ. ಉದ್ಯಾನದ ಕ್ಷೇತ್ರ ನಿರ್ದೇಶಕರಿಗೆ ಹಲವಾರು ಸೂಚನೆಗಳನ್ನು ಕಳುಹಿಸಿದ್ದರೂ, ಯಾವುದೇ ಗಮನಾರ್ಹ ಸುಧಾರಣೆಗಳನ್ನು ಗಮನಿಸಲು ಸಾಧ್ಯವಾಗಿಲ್ಲ. 2024 ರ ಅಕ್ಟೋಬರ್ 14ರ ವರದಿಯ ಪ್ರಕಾರ, 11 ಹುಲಿಗಳು ಒಂದು ವರ್ಷದಿಂದ ಪತ್ತೆಯಾಗಿಲ್ಲ.
ಹುಲಿಗಳು ಮಿತಿಮೀರಿದ ಕಾರಣ ರಣಥಂಬೋರ್ ಪಾರ್ಕ್ ಸವಾಲುಗಳನ್ನು ಎದುರಿಸುತ್ತಿದೆ ಎಂದು ಉದ್ಯಾನದ ಅಧಿಕಾರಿಗಳು ಹೇಳಿದ್ದಾರೆ, ಇದು ಹುಲಿಗಳ ನಡುವಿನ ಕಾದಾಟಗಳಿಗೆ ಕಾರಣವಾಗುತ್ತದೆ. 75 ಹುಲಿಗಳೊಂದಿಗೆ ಮರಿ ಹುಲಿಗಲೂ ಒಳಗೊಂಡಿದ್ದು ಉದ್ಯಾನದ 900 ಚದರ ಕಿಲೋಮೀಟರ್ ಅವುಗಳ ಸ್ವಚ್ಛಂದ ಬೆಳವಣಿಗೆಗೆ ಸಾಕಾಗುವುದಿಲ್ಲ. ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (2006-2014) ಅಧ್ಯಯನದ ಪ್ರಕಾರ, ಉದ್ಯಾನವನ ಸುಮಾರು 40 ವಯಸ್ಕ ಹುಲಿಗಳನ್ನು ಸುರಕ್ಷಿತವಾಗಿ ಇರಿಸಳಷ್ಟೇ ಶಕ್ತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್.ಕೆ.ಪಾಟೀಲ್
ಮಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ
Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.