Pune: ಮೂರು ಕಾಲಿನ ಹಸುವಿಗೆ ಕೃತಕ ಕಾಲು ತೊಡಿಸಿದ ಪುಣೆ ಆಸ್ಪತ್ರೆ!
Team Udayavani, Sep 18, 2024, 6:27 AM IST
ಪುಣೆ: ನಡೆಯಲಾಗದೇ ಕಷ್ಟಪಡುತ್ತಿದ್ದ ಪುಣೆಯ ಗ್ರಾಮವೊಂದರ 3 ಕಾಲಿನ ಹಸುವಿಗೆ ಮರು ಜನ್ಮ ಸಿಕ್ಕಿದೆ. ನಗರದ ಸಂಚೇತಿ ಆಸ್ಪತ್ರೆ ವೈದ್ಯರ ತಂಡವು ಈ ಹಸುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಕೃತಕ ಕಾಲನ್ನು ಉಚಿತವಾಗಿ ಅಳವಡಿಸುವ ಮೂಲಕ ನೆರವಾಗಿದೆ.
ಆ.2ರಂದು ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಮೊದಲೇ ದುರ್ಬಲವಾಗಿದ್ದ ಬೀದಿ ಹಸುವನ್ನು ಚೌಫುಲಾದಲ್ಲಿನ ಪ್ರಾಣಿಗಳ ಆಶ್ರಯ ತಾಣದಿಂದ ರಕ್ಷಣೆ ಮಾಡಲಾಗಿತ್ತು. ಬಳಿಕ ಆಸ್ಪತ್ರೆಯ ಪ್ರಾಸ್ಥೆಟಿಕ್ ಮತ್ತು ಆಥೋìಟಿಕ್ಸ್ ವಿಭಾಗವನ್ನು ಸಂಪರ್ಕಿಸಿ ಗಮನಕ್ಕೆ ತರಲಾಯಿತು. ಇಲ್ಲಿ ಮನುಷ್ಯರಿಗೆ ಕೃತಕ ಕಾಲುಗಳನ್ನು ತಯಾರಿಸಲಾಗುತ್ತದೆಯಾದರೂ ಆಸ್ಪತ್ರೆಯು ಮಾನವೀಯತೆ ಮೆರೆದು ಈ ಹಸುವಿಗೂ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿ ನೆರವಿಗೆ ಬಂದಿದೆ.
ನಮ್ಮ ವೈದ್ಯರ ತಂಡ ಹಸುವಿನ ಅಂಗರಚನಾಶಾಸ್ತ್ರವನ್ನು ಅಧ್ಯಯನ ಮಾಡಿ, ಕಾಲಿನ ವಿನ್ಯಾಸ ಸಿದ್ಧಪಡಿಸಿತು. ಈಗ ಹಸು ನಿಲ್ಲಲು ಸಮರ್ಥವಾಗಿರುವುದಲ್ಲದೆ, ನಿಧಾನವಾಗಿ ನಡೆಯುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.