ವಧುವಿಲ್ಲದೆ ವರನಿಗೆ ಮದುವೆ
Team Udayavani, May 14, 2019, 5:50 AM IST
ಹಿಮ್ಮತ್‌ನಗರ: ಎಲ್ಲರಂತೆ ತಾನೂ ಕೂಡ ತನ್ನ ಮದುವೆಯನ್ನು ವಿಜೃಂಭಣೆಯಿಂದ ನೆರವೇರಿಸಿಕೊಳ್ಳಬೇಕು ಎಂಬ ಆಸೆ, ಗುಜರಾತ್‌ನ ಅಜಯ್ ಬಾರೋತ್ (27) ಎಂಬಾತನದ್ದು. ಇತ್ತೀಚೆಗೆ, ಆತನ ಸಂಬಂಧಿಕನ ಮದುವೆಯೂ ಅದ್ಧೂರಿಯಾಗಿಯೇ ನಡೆ ದಿದ್ದರಿಂದ ಈತನ ಆಸೆಯೂ ಇಮ್ಮಡಿಯಾಗಿತ್ತು. ಈತನ ಆಸೆಯನ್ನು ಅರ್ಥ ಮಾಡಿಕೊಂಡಿದ್ದ ಆತನ ಮನೆಯವರು ಇತ್ತೀಚೆಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ದೊಡ್ಡ ಛತ್ರದಲ್ಲಿ ಸಂಬಂಧಿಕರೂ ಸೇರಿ ಧಾಂ… ಧೂಂ ಅಂತ ವೈಭವೋಪೇತವಾಗಿ ಮದುವೆ ಮಾಡಿದ್ದಾರೆ. ಆದರೆ, ವಧು ಯಾರು ಎಂದರೆ ಬರುವ ಉತ್ತರ ‘ಯಾರೂ ಇಲ್ಲ’ ಅಂತ! ಅಚ್ಚರಿಯಾದರೂ ಇದು ಸತ್ಯ. ಅಜಯ್‌ನನ್ನು ಮದುವೆಯಾಗಲು ಯಾವ ಯುವತಿಯೂ ಮುಂದೆ ಬಾರದ್ದಕ್ಕೆ ಆತನ ಮನೆಯವರು ಕೊನೆಗೂ ವಧುವಿಲ್ಲದೆಯೇ ಮದುವೆ ಮಾಡಿ ಮುಗಿಸಿದ್ದಾರೆ. ಮದುಮಗ ಅಜಯ್, ಬುದ್ಧಿಮಾಂದ್ಯ. ಹಾಗಾಗಿ, ಆತನನ್ನು ಮದುವೆಯಾಗಲು ಯಾರೂ ಮುಂದೆ ಬರಲಿಲ್ಲ. ಆದರೆ, ಆತನ ಮನೆಯವರು ಧೃತಿಗೆಡಲಿಲ್ಲ. 800 ಜನರು ಸೇರಬಹುದಾದ ಛತ್ರ ಬುಕ್ ಮಾಡಿ, ಲಕ್ಷಾಂತರ ರೂ. ಖರ್ಚು ಮಾಡಿ ಈ ಅದ್ದೂರಿ ಮದುವೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.