ದೇಶದಲ್ಲಿವೆ 21 ಕೋಟಿ ದ್ವಿಚಕ್ರ ವಾಹನ
Team Udayavani, Aug 5, 2022, 6:50 AM IST
ನವದೆಹಲಿ: ನಮ್ಮ ದೇಶದಲ್ಲಿ ಇರಬಹುದಾದ ದ್ವಿಚಕ್ರ ವಾಹನಗಳ ಸಂಖ್ಯೆ ಎಷ್ಟು? ಬರೋಬ್ಬರಿ 21 ಕೋಟಿ. ನಾಲ್ಕು ಚಕ್ರ ವಾಹನಗಳ ಸಂಖ್ಯೆ 7 ಕೋಟಿ. ಈ ಬಗ್ಗೆ ಕೇಂದ್ರ ಸರ್ಕಾರವೇ ಲೋಕಸಭೆಗೆ ಗುರುವಾರ ಮಾಹಿತಿ ನೀಡಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿದ ಲಿಖೀತ ಉತ್ತರದ ಪ್ರಕಾರ ಒಟ್ಟು ವಾಹನಗಳ ಪೈಕಿ 5,44,643 ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು. 54, 252 ವಿದ್ಯುತ್ ಚಾಲಿತ ನಾಲ್ಕು ಚಕ್ರಗಳ ವಾಹನಗಳು ಎಂದು ಅವರು ತಿಳಿಸಿದ್ದಾರೆ. ವಾಹನಗಳ ನೋಂದಣಿಗೆ ಸಂಬಂಧಿಸಿದ ವೆಬ್ಸೈಟ್ “ವಾಹನ್’ನಲ್ಲಿ ಆ.3ಕ್ಕೆ ಮುಕ್ತಾಯವಾದಂತೆ ಈ ಮಾಹಿತಿಗಳು ಇವೆ ಎಂದಿದ್ದಾರೆ.
ಸಿಎನ್ಜಿ, ಇಥೆನಾಲ್, ಫ್ಯೂಯೆಲ್ ಸೆಲ್ ಹೈಡ್ರೋಜನ್, ಎಲ್ಎನ್ಜಿ, ಎಲ್ಪಿಜಿ, ಸೌರ ಇಂಧನ, ಮೆಥನಾಲ್ಗಳಿಂದ ಚಲಿಸುವ ದ್ವಿಚಕ್ರವಾಹನಗಳ ಸಂಖ್ಯೆ 2,95,245 ಮತ್ತು 18,47,539 ನಾಲ್ಕು ಚಕ್ರದ ವಾಹನಗಳು ಇವೆ ಎಂದು ಗಡ್ಕರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.