ಕರೆಂಟ್ ಕಳ್ಳರಿಗೆ ಈ ಅಧಿಕಾರಿ ಶಾಕ್
Team Udayavani, Sep 13, 2017, 8:05 AM IST
ಲಕ್ನೊ: ದೇಶದಲ್ಲಿ ವಿದ್ಯುತ್ ಕಳವಿನಿಂದ ಉಂಟಾಗುತ್ತಿರುವ ನಷ್ಟವೆಷ್ಟು? ಸುಮಾರು 10 ಸಾವಿರ ಕೋಟಿ ರೂ.? ಉತ್ತರ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ರಿತು ಮಾಹೇಶ್ವರಿ ಪ್ರಕಾರ ಪ್ರತಿ ವರ್ಷ ದೇಶದಲ್ಲಿ ವಿದ್ಯುತ್ ಕಳವಿನಿಂದ ಉಂಟಾಗುವ ನಷ್ಟ 60 ಸಾವಿರ ಕೋಟಿ ರೂ. ಅದನ್ನು ತಡೆಯಲು ಅವರು ಈಗ ಹೋರಾಟವನ್ನೇ ಆರಂಭಿಸಿದ್ದಾರೆ. ಕಾನ್ಪುರ ವಿದ್ಯುತ್ ಸರಬರಾಜು ಕಂಪನಿಯ ಮುಖ್ಯಾಧಿಕಾರಿಯಾಗಿ 2011ರಲ್ಲಿ ನೇಮಕಗೊಂಡ ಅವರು ಗ್ರಾಹಕರ ಮತ್ತು ಕೈಗಾರಿಕಾ ಘಟಕಗಳಿಗೆ ಮೀಟರ್ ಅಳವಡಿಸಿದ್ದರು. ವಿದ್ಯುತ್ ಸೋರಿಕೆ ಪತ್ತೆ ಹಚ್ಚುತ್ತಿದ್ದಂತೆ ಅವರನ್ನು ಅಲ್ಲಿಂದ ವರ್ಗಾಯಿಸಲಾಯಿತು. ಈ ಸಂದರ್ಭದಲ್ಲಿ ಅವರು ಉತ್ತರ ಪ್ರದೇಶದಲ್ಲಿ ಮನೆ ಮಾತಾಗಿದ್ದರು.
ಆದರೂ ಅವರು ಹೋರಾಟ ಕೈಬಿಡಲಿಲ್ಲ. ಇದೀಗ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉದಯ್ ಯೋಜನೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾರೆ. ವಿವಿಧ ರಾಜ್ಯಗಳ ವಿದ್ಯುತ್ ಸುಧಾರಣಾ ಕಂಪನಿಗಳು ಹೊಂದುತ್ತಿರುವ ನಷ್ಟ ಮತ್ತು ಅವುಗಳಿಂದ ಪಾರು ಮಾಡುವ ಬಗ್ಗೆ ಅವರು ಈಗ ಪ್ರಧಾನ ಪಾತ್ರ ವಹಿಸಲಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಶೇ.22ರಷ್ಟು ವಿದ್ಯುತ್ ಕಳವನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ 1,60,000 ಇದ್ದ ಮೀಟರ್‌ಗಳನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದಿದ್ದಾರೆ. ಇಂಥ ಕಠಿಣ ಕ್ರಮದಿಂದ ಹಾಲಿ ವರ್ಷ ವಿದ್ಯುತ್ ಕಳವಿನ ಪ್ರಮಾಣದಲ್ಲಿ ತಗ್ಗಲಿದೆ ಎಂಬ ವಿಶ್ವಾಸ ಅವರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.