Lok Sabha Elections; ಸಿಎಂ ಯೋಗಿ ಅವರೊಂದಿಗೆ ವೇದಿಕೆಯಲ್ಲಿ ಬಾಲ ಯೋಗಿ ಪ್ರತ್ಯಕ್ಷ!
Team Udayavani, Apr 14, 2024, 4:46 PM IST
ರೂರ್ಕಿ : ಉತ್ತರಾಖಂಡದ ರೂರ್ಕಿಯಲ್ಲಿ ಲೋಕಸಭಾ ಚುನಾವಣ ಪ್ರಚಾರದ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಕಾವಿ ಧರಿಸಿದ್ದ ಬಾಲಕನೊಬ್ಬ ವೇದಿಕೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದ ಘಟನೆ ಭಾನುವಾರ ನಡೆದಿದೆ.
ಸಾರ್ವಜನಿಕ ಸಮಾವೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾಗಿಯಾಗಿದ್ದರು. ವೇದಿಕೆಯ ಮುಂಭಾಗದಲ್ಲಿ ಜ್ಯೂನಿಯರ್ ಯೋಗಿ ಯಾಗಿ ಬಾಲಕ ಆಸೀನನಾಗಿದ್ದ. ಸಿಎಂ ಯೋಗಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಬಾಲಕನೂ ಆಗಮಿಸಿ ಎಲ್ಲರ ಮುಖದಲ್ಲಿ ನಗು ತರಿಸಿದ್ದಾನೆ. ಭದ್ರತಾ ಪಡೆಗಳು ತಡೆಯಲು ಮುಂದಾದರೂ ಯೋಗಿ ಅವರು ಬಾಲಕನನ್ನು ನಗುನಗುತ್ತಾ ಚಕಿತರಾಗಿ ಹೂಗುಚ್ಛ ನೀಡಿ ಹರಸಿದ್ದಾರೆ. ಬಾಲಕ ಸಭಿಕರತ್ತ ಯೋಗಿ ಅವರೊಂದಿಗೆ ಕೈ ಬೀಸಿದ್ದಾನೆ. ವೇದಿಕೆಯಲ್ಲಿದ್ದ ಇತರ ಬಿಜೆಪಿ ನಾಯಕರೂ ಬಾಲಕನನ್ನು ಆತ್ಮೀಯವಾಗಿ ನೋಡಿಕೊಂಡರು.
ಚುನಾವಣ ಪ್ರಚಾರದಲ್ಲಿ ಮಕ್ಕಳನ್ನು ಬಳಸದಂತೆ ರಾಜಕೀಯ ಪಕ್ಷಗಳಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ನೀಡಿದ್ದು, ಮಕ್ಕಳು ಭಾಗಿಯಾಗುವ ವಿಚಾರದಲ್ಲಿ “ಶೂನ್ಯ ಸಹಿಷ್ಣುತೆ” ಹೊಂದಿದೆ ಎಂದು ಈಗಾಗಲೇ ಹೇಳಿದೆ. ಬಾಲಕ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಹಲವರು ಟೀಕೆಯನ್ನೂ ಮಾಡಿದ್ದು ಇಸಿಐ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
#WATCH | Lok Sabha Elections 2024 | Uttarakhand: A young boy dressed like Uttar Pradesh Chief Minister Yogi Adityanath meets him in Roorkee.
The CM addressed a public rally here. pic.twitter.com/DXTwRJhm52
— ANI (@ANI) April 14, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.