ಆಧಾರ್ ಅರ್ಜಿ ಸಂವಿಧಾನ ಪೀಠಕ್ಕೆ?
Team Udayavani, Jul 8, 2017, 9:37 AM IST
ಹೊಸದಿಲ್ಲಿ: ಆಧಾರ್ ಜೋಡಣೆಗೆ ಸಂಬಂಧಿಸಿದ ಎಲ್ಲ ಅರ್ಜಿಗಳ ವಿಚಾರಣೆಯು ಸಂವಿಧಾನ ಪೀಠಕ್ಕೆ ವರ್ಗವಾಗುವ ನಿರೀಕ್ಷೆಯಿದೆ. ಆಧಾರ್ ಕುರಿತು ಯಾವುದೇ ಸಮಸ್ಯೆ ಎದುರಾದರೂ ಅದನ್ನು ಅಂತಿಮವಾಗಿ ಸಂವಿಧಾನ ಪೀಠ ನಿರ್ಧರಿಸಬೇಕು ಎಂದು ಸ್ವತಃ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಧಾರ್ ಕುರಿತ ಗೊಂದಲಗಳನ್ನು ಪರಿಹರಿ ಸುವಂತೆ ಹಲವರು ಸುಪ್ರೀಂಗೆ ಮನವಿ ಸಲ್ಲಿಸಿ ದ್ದರು. ಈ ಅರ್ಜಿಗಳನ್ನು ಪರಿಶೀಲಿಸಿದ ತ್ರಿಸದಸ್ಯ ಪೀಠ, “ಅರ್ಜಿದಾರರು ಮತ್ತು ಸರಕಾರ ಆಧಾರ್ ಕುರಿತ ಸಮಸ್ಯೆಗಳನ್ನು ಬಗೆಹರಿಸಲು ಸಂವಿಧಾನ ಪೀಠ ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಗಳಿಗೆ ಮನವಿ ಮಾಡಿ’ ಎಂದು ಸಲಹೆ ನೀಡಿದೆ. ಇದಕ್ಕೆ ಅರ್ಜಿದಾರರ ಪರ ವಕೀಲರು ಹಾಗೂ ಕೇಂದ್ರದ ಅಟಾರ್ನಿ ಜನರಲ್ ಸಮ್ಮತಿಸಿದರು.
ಸುಪ್ರೀಂನಲ್ಲಿ “ನಿರಂಕುಶ’ ಸಮರ: ಇದಕ್ಕೂ ಮುನ್ನ ಆಧಾರ್ ಕುರಿತ ವಿಚಾರಣೆ ವೇಳೆ ಅರ್ಜಿದಾರರು ಕೇಂದ್ರ ಸರಕಾರದ ಆಧಾರ್ ಯೋಜನೆಯನ್ನು “ನಿರಂಕುಶ’ ಎಂದು ಕರೆದಿದ್ದು, ಇದಕ್ಕೆ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು, “ನಿರಂಕುಶ ಸರಕಾರ’ ಎಂಬ ಪದ ಬಳಸುತ್ತಿದ್ದಂತೆ, ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಸಿಡಿದೆದ್ದರು. “ದಯವಿಟ್ಟು ಇಂಥ ಪದ ಬಳಕೆ ಮಾಡಬೇಡಿ. ಆಧಾರ್‌ನಿಂದಾಗಿ ಎಷ್ಟೋ ಬಡವರು ಯೋಜನೆಗಳ ಲಾಭ ಪಡೆಯಲಿದ್ದಾರೆ. ನೀವಿಂದು ಸರ್ಕಾ ರವನ್ನು ನಿರಂಕುಶ ಎಂದರೆ ನಾಳೆ ಮಾಧ್ಯಮಗಳೂ ನಿರಂಕುಶ ಸರಕಾರವೆಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸುತ್ತದೆ’ ಎಂದು ಹೇಳಿದರು. ಆದರೆ, ಇದಕ್ಕೆ ಒಪ್ಪದ ನ್ಯಾ| ದಿವಾನ್ ಅವರು, “ನಾನು ಅಫಿದವಿಟ್‌ನಲ್ಲೂ ಇದನ್ನೇ ಹೇಳಿದ್ದೇನೆ. ಮುಂದೆಯೂ ಹೇಳುತ್ತೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
ಪಿಎಂ ವಿದ್ಯಾಲಕ್ಷ್ಮೀ ಸ್ಕೀಂಗೆ ಕೇಂದ್ರ ಸಮ್ಮತಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಲ!
PM: ವಿದ್ಯಾಲಕ್ಷ್ಮೀ ಯೋಜನೆಗೆ ಕೇಂದ್ರ ಸಮ್ಮತಿ: ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಲ!
African Elephants: ವಂಟಾರಕ್ಕೆ ಆಗಮಿಸಲಿವೆ ಆಫ್ರಿಕಾದ 3 ಆನೆಗಳು
MUST WATCH
ಹೊಸ ಸೇರ್ಪಡೆ
LMV ಲೈಸನ್ಸ್ ಇದ್ದರೆ ಸರಕು ವಾಹನ ಚಲಾಯಿಸಿ… 7.5 ಟನ್‌ವರೆಗಿನ ವಾಹನ ಓಡಿಸಲು ಅನುಮತಿ
Jammu and Kashmir Assembly: ಕಾಶ್ಮೀರ ವಿಶೇಷ ಸ್ಥಾನಮಾನ ಕೋರಿ ಅಸೆಂಬ್ಲಿಯಲ್ಲಿ ಗಲಾಟೆ
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.