2017ರ ವರ್ಷದ ಪದ “ಆಧಾರ್’
Team Udayavani, Jan 28, 2018, 11:22 AM IST
ಜೈಪುರ: “ಆಧಾರ್’ ಎಂಬ ಪದ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನೀಡುವ “ಆಧಾರ್ ಕಾರ್ಡ್ ‘ ನಿಂದ ಎಲ್ಲರಿಗೂ ಈಗ ಪರಿಚಿತವೇ. 2017ರಲ್ಲಿ ಅದು ಆಕ್ಸ್‌ಫರ್ಡ್ ಶಬ್ದಕೋಶದ “ವರ್ಷದ ಪದ’ ಎಂದು ಆಯ್ಕೆಯಾಗಿದೆ.
ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯೋತ್ಸವದಲ್ಲಿ ಲೇಖಕ ಪಂಕಜ್ ದುಬೆ ಈ ಮಾಹಿತಿ ನೀಡಿದ್ದಾರೆ. ಅದರ ಜತೆಗೆ “ಮಿತ್ರೋಂ’, “ನೋಟ್ ಬಂದಿ’,” ಗೋ ರಕ್ಷಕ್’ ಶಬ್ದಗಳನ್ನು ಆಯ್ಕೆ ಮಾಡಿ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ಬಗ್ಗೆ ಎಲ್ಲರೂ ಮಾತನಾಡುತ್ತಿರುವುದರಿಂದ ಮತ್ತು ಬಹುವಾಗಿ ಚರ್ಚೆಗೆ ಒಳಗಾಗಿದ್ದರಿಂದ ಅದನ್ನು “ವರ್ಷದ ಪದ’ ಎಂದು ಆಯ್ಕೆ ಮಾಡಲಾಯಿತು ಎಂದು ದುಬೆ ವಿವರಿಸಿದರು. “ಸ್ಲಿàಪ್‌ಅವಸ್ತಾ’ (ನಿದ್ರಾವಸ್ಥೆ), “ಮೌಕತಾರಿಯನ್’ (ಅವಕಾಶವಾದಿ) ಎಂಬ ಹೊಸ ಶಬ್ದಗಳನ್ನು ರಚಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ದುಬೆ ಪ್ರತಿಪಾದಿಸಿದರು. ಆದರೆ ಮತ್ತೂಬ್ಬ ಬರಹಗಾರ್ತಿ ಚಿತ್ರಾ ಮುದ್ಗಲ್ ಅದಕ್ಕೆ ಆಕ್ಷೇಪಿಸಿ, ಸರಿಯಾದ ರೀತಿಯಲ್ಲೇ ಶಬ್ದಗಳ ಉಚ್ಚಾರಣೆ ನಡೆಯಬೇಕು ಎಂದರು. ಕವಿ ಮತ್ತು ಲೇಖಕ ಅಶೋಕ್ ವಾಜಪೇಯಿ, ರಾಜಕಾರಣಿಗಳು ಬಳಕೆ ಮಾಡುವ “ಮಿತ್ರೋಂ’ ಎಂಬ ಶಬ್ದ ವ್ಯಾಕರಣ ಪ್ರಕಾರ ಸರಿಯಾದುದಲ್ಲ ಎಂದರು. ಈ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಯವರು ಬಳಸುವ ಪದಕ್ಕೆ ಆಕ್ಷೇಪಿಸಿದ್ದಾರೆ.
ದೂರವುಳಿದ ಪ್ರಸೂನ್: ಮತ್ತೂಂದು ಬೆಳವಣಿಗೆಯಲ್ಲಿ ಸೆನ್ಸಾರ್ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ ಸಾಹಿತ್ಯೋತ್ಸವದಿಂದ ದೂರ ಉಳಿದಿದ್ದಾರೆ.”ಪದ್ಮಾವತ್’ ವಿವಾದದ ಹಿನ್ನೆಲೆ ಕರ್ಣಿ ಸೇನೆಯ ಬೆದರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.