ಜುಲೈನಿಂದ ಎಲ್ಲದಕ್ಕೂ ಆಧಾರವೇ ಮೂಲ! ಜಿಎಸ್‌ಟಿ ಯುಗ ಆರಂಭ
Team Udayavani, Jun 29, 2017, 3:45 AM IST
ನವದೆಹಲಿ: ಜುಲೈ ಒಂದರಿಂದ ನಾವೆಲ್ಲರೂ ಎರಡು ಮಹತ್ತರ ಬದಲಾವಣೆಗೆ ಸಿದ್ಧವಾಗುತ್ತಿದ್ದೇವೆ. ಅಂದು ದೇಶದ ಹೊಸ ತೆರಿಗೆ ವ್ಯವಸ್ಥೆ ಜಿಎಸ್‌ಟಿ ಜಾರಿಯಾಗಲಿದ್ದರೆ,ಇದರ ಜತೆಗೆ ಆಧಾರ್ ಕೂಡ ಹಲವಾರು ಯೋಜನೆಗಳಿಗೆ ಕಡ್ಡಾಯವಾಗಲಿದೆ. ಐಟಿ ರಿಟರ್ನ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಿಎಫ್ ಖಾತೆ ಸೇರಿದಂತೆ ಹಲವಾರು
ಯೋಜನೆಗಳಿಗೆ ಆಧಾರ್ ಬೇಕೇ ಬೇಕು. ಅಲ್ಲದೆ ಕೆಲವು ರಾಜ್ಯಗಳಲ್ಲಿ ಪಡಿತರ ಧಾನ್ಯ ಪಡೆಯಲೂ ಆಧಾರ್
ಕಡ್ಡಾಯವಾಗಿದೆ.
ಆಧಾರ್ ಇಲ್ಲದೇ ಐಟಿ ರಿಟರ್ನ್ ಅಸಾಧ್ಯ: ಆದಾಯ ತೆರಿಗೆ ಮರುಪಾವತಿಗೆ ಆಧಾರ್ ದಾಖಲೆ ಕಡ್ಡಾಯ. ಆಧಾರ್ ಇಲ್ಲದೇ ಐಟಿ ರಿಟರ್ನ್ ಅಸಾಧ್ಯ.
ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯ: ಪ್ಯಾನ್ ಕಾರ್ಡ್ ಅಕ್ರಮ ತಡೆಗಾಗಿ ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ. ತೆರಿಗೆ ತಪ್ಪಿಸಿಕೊಳ್ಳಲು ಎರಡೆರಡು ಪ್ಯಾನ್ ಕಾರ್ಡ್ ಹೊಂದಿರುತ್ತಾರೆನ್ನುವ ಕಾರಣಕ್ಕಾಗಿ ಈ ಕ್ರಮ. ಒಂದೊಮ್ಮೆ ಲಿಂಕ್ ಮಾಡಿಕೊಳ್ಳದೇ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಅನ್ವಯ ರದ್ದುಗೊಳಿಸಬಹುದು.
ಆಧಾರ್ ಇಲ್ಲದೇ ಪ್ಯಾನ್ ಕಾರ್ಡ್ ಇಲ್ಲ: ಹೊಸ ಪ್ಯಾನ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದಿದ್ದಲ್ಲಿ ಪ್ಯಾನ್ ಕಾರ್ಡ್ ಹೊಂದಲು ಸಾಧ್ಯವೇ ಇಲ್ಲ.
ಪಾಸ್‌ಪೋರ್ಟ್‌ಗೂ ಬೇಕು ಆಧಾರ್: ಪಾಸ್‌ಪೋರ್ಟ್ ಪಡೆದುಕೊಳ್ಳಲಿಕ್ಕೂ ವಿದೇಶಾಂಗ ಸಚಿವಾಲಯ ಆಧಾರ್ ಕಡ್ಡಾಯಗೊಳಿಸಿದೆ.
ಪಿಎಫ್ ಖಾತೆಗೂ ಬೇಕು ಆಧಾರ್: ಜುಲೈ 1ರಿಂದ ಆಧಾರ್ ಇಲ್ಲದೇ ಪಿಎಫ್ ಖಾತೆ ತೆರೆಯಲು ಸಾಧ್ಯವಿಲ್ಲ. ಭವಿಷ್ಯ ನಿಧಿ ಖಾತೆಯೂ ಆಧಾರ್ ಲಿಂಕ್ ಹೊಂದಿರಬೇಕೆಂದು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ ಹೇಳಿದೆ. ನಿವೃತ್ತಿ ಪಿಂಚಿಣಿದಾರರು ಆಧಾರ್ ಹೊಂದಿರಬೇಕು. ಅಲ್ಲದೆ, ವಿತ್‌ಡ್ರಾ ಮತ್ತು ಸೆಟಲ್‌ಮೆಂಟ್ ಅವಧಿಯನ್ನೂ 20ರಿಂದ 10ದಿಗಳಿಗೆ ಕಡಿತಗೊಳಿಸುವ ನಿರೀಕ್ಷೆ ಇದೆ.
ರೈಲ್ವೆ ಟಿಕೆಟ್ ರಿಯಾಯಿತಿಗೂ ಬೇಕು ಆಧಾರ್: ರೈಲ್ವೆ ಟಿಕೆಟ್ ರಿಯಾಯಿತಿ ಯೋಜನೆಯ ಲಾಭ ಪಡೆಯಲು ಇನ್ನು ಆಧಾರ್ ಕಡ್ಡಾಯ. ವ್ಯವಸ್ಥೆ ದುರುಪಯೋಗ ತಡೆಗಟ್ಟಲಿಕ್ಕಾಗಿ ಈ ಕ್ರಮ ಎಂದಿದೆ ಭಾರತೀಯ ರೈಲ್ವೆ ಇಲಾಖೆ.
ಇನ್ಮುಂದೆ ಬೇಕಾಗಿಲ್ಲ ಡಿಪಾರ್ಚರ್ ಕಾರ್ಡ್: ಜುಲೈ 1ರಿಂದ ವಿಮಾನಯಾನದ ವೇಳೆ ಭಾರತೀಯರು ಡಿಪಾರ್ಚರ್ ಕಾರ್ಡ್ (ನಿರ್ಗಮನ ಕಾರ್ಡ್) ಹೊಂದಿರಬೇಕಾಗಿಲ್ಲ. ಅಲ್ಲದೆ, ಪ್ರಯಾಣಕ್ಕೂ ಮೊದಲ ಔಪಚಾರಿಕ ಪ್ರಕ್ರಿಯೆಗಳ ಅವಧಿಗೂ ಕಡಿತ ಬೀಳಲಿದೆ.
ಸೌದಿ ಅರೇಬಿಯಾದಲ್ಲಿ ಎಕ್ಸ್‌ಪ್ಯಾಟ್ ತೆರಿಗೆ: ಸೌದಿ ಅರೇಬಿಯಾ ಸರ್ಕಾರ ಮಾಸಿಕ ವಲಸೆ ಸುಂಕ (ಎಕ್ಸ್‌ಪ್ಯಾಟ್) ಪರಿಚಯಿಸಿದ್ದು, ಜುಲೈ 1ರಿಂದ ಜಾರಿಗೆ ಬರಲಿದೆ. ಭಾರತೀಯರೂ ಸೇರಿ ವಿದೇಶಿಗರಿಗೆ ಹೊರೆಯಾಗಿ ಪರಿಣಮಿಸಲಿದೆ. ಈ ವರ್ಷ ತಲಾ 100 ರಿಯಲ್ ಪಾವತಿಸಬೇಕು. 100 ರಿಯಲ್ ಅಂದರೆ 1,721 ರೂ. ಇದು 2018ಕ್ಕೆ ದುಪ್ಪಟ್ಟಾಗಲಿದೆ. 2019ಕ್ಕೆ ಮೂರು ಪಟ್ಟು, 2020ಕ್ಕೆ ನಾಲ್ಕು ಪಟ್ಟಾಗಲಿದೆ.
“ಸಿಎ’ಗೆ ಹೊಸ ಸಿಲೆಬಸ್: ಚಾರ್ಟೆಡ್ ಅಕೌಂಟೆಂಟ್ ಅಧ್ಯಯನದ ಸಿಲೆಬಸ್ ಬದಲಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಜುಲೈ 1ರಂದು ಚಾಲನೆ ನೀಡಲಿದ್ದಾರೆ. ಜಿಎಸ್‌ಟಿ ಪ್ರಕಾರ ಹೊಸ ತೆರಿಗೆ ನೀತಿ ಹಾಗೂ ಅಂತಾರಾಷ್ಟ್ರೀಯ ಅಕೌಂಟೆಂಟ್‌ಗಳ ಫೆಡರೇಷನ್ ಗುಣಮಟ್ಟದಲ್ಲಿ ಸಿಲೆಬಸ್ ಸಿದ್ಧಗೊಂಡಿದೆ.
ಆಸೀಸ್‌ಗೆ ಆನ್‌ಲೈನ್‌ನಲ್ಲೇ ವೀಸಾ: ಭಾರತೀಯ ಪ್ರವಾಸಿಗರಿಗೆಂದೇ ಆಸ್ಟ್ರೇಲಿಯಾ ಸರ್ಕಾರ ಆನ್‌ಲೈನ್ ವೀಸಾ ಪರಿಚಯಿಸಿದ್ದು, ಜುಲೈ 1ರಿಂದಲೇ ಈ ವ್ಯವಸ್ಥೆಗೆ ಚಾಲನೆ ಸಿಗಲಿದೆ. ಮಾನ್ಯತಾ ಪ್ರಕ್ರಿಯೆ ಬೇಗ ಆಗುತ್ತದೆಂದು ನಿರೀಕ್ಷಿಸಲಾಗುತ್ತಿದೆ.
ಆಧಾರ್ ಲಿಂಕ್ ಈಗ ಅಧಿಕೃತ
ಜು.1ರಿಂದ ಪ್ಯಾನ್‌ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಪ್ಯಾನ್ ಕಾರ್ಡ್ ಬಳಕೆಯ ಸಂದರ್ಭದಲ್ಲಿ ಮತ್ತೆ 12 ಅಂಕಿಗಳ ಬಯೋಮೆಟ್ರಿಕ್ ಆಧಾರ್ ಸಂಖ್ಯೆಯನ್ನು ಲಗತ್ತಿಸಬೇಕಾದ ಅಗತ್ಯವಿರುವುದಿಲ್ಲ. ಆಧಾರ್ ನಂಬರ್ ಮೂಲಕ ವ್ಯಕ್ತಿಯ ಬಹುತೇಕ ವೈಯಕ್ತಿಕ ದಾಖಲೆಗಳು ಲಭ್ಯವಾಗಲಿದೆ ಎನ್ನುವುದು ಇನ್ನೊಂದು ಉದ್ದೇಶವಾಗಿದೆ. ಅಲ್ಲದೆ, ತೆರಿಗೆ ರಿಟರ್ನ್ ವೇಳೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದ್ದರಿಂದ ಆ ಮೂಲಕವೇ ಆಧಾರ್ ಮಾಹಿತಿಯೂ ಲಭ್ಯ ಎನ್ನುವ ಲೆಕ್ಕಾಚಾರದ ಜತೆಗೆ, ಬ್ಯಾಂಕ್ ವಹಿವಾಟಿಗೂ ಆಧಾರ್, ಪ್ಯಾನ್ ಕಡ್ಡಾಯವಾಗಿದೆ. ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2.07 ಕೋಟಿ ತೆರಿಗೆದಾರರು ಈಗಾಗಲೇ ಪ್ಯಾನ್ ಕಾರ್ಡ್ ಜತೆ ಆಧಾರ್ ಲಿಂಕ್ ಮಾಡಿಕೊಂಡಿದ್ದಾರೆ.
– 25 ಕೋಟಿ: ದೇಶದಲ್ಲಿ ಪ್ಯಾನ್ ಹೊಂದಿರುವವರು
– 115 ಕೋಟಿ: ದೇಶದಲ್ಲಿ ಆಧಾರ್ ಹೊಂದಿರುವವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು
Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.