ಫೇಸ್ಬುಕ್ ಖಾತೆಗೂ ಬೇಕು ಇನ್ನು ಆಧಾರ್?
Team Udayavani, Dec 28, 2017, 6:55 AM IST
ನವದೆಹಲಿ: ಬ್ಯಾಂಕ್ ಖಾತೆ, ಹೊಸ ಮೊಬೈಲ್ ಸಂಪರ್ಕ ಸೇರಿದಂತೆ ಎಲ್ಲದಕ್ಕೂ ಆಧಾರ್ ಈಗ ಅತ್ಯಗತ್ಯ. ಇದೀಗ ಈ ಪಟ್ಟಿಗೆ ಫೇಸ್ಬುಕ್ ಖಾತೆಯೂ ಸೇರಿಕೊಂಡಿದೆ. ಸದ್ಯ ಈ ವಿಚಾರ ಕಡ್ಡಾಯ ಮಾಡದಿದ್ದರೂ, ಫೇಸ್ಬುಕ್ನಲ್ಲಿ ಆಧಾರ್ ಕಾರ್ಡ್ನಲ್ಲಿ ಇರುವ ರೀತಿಯಲ್ಲಿಯೇ ಹೆಸರು ನಮೂದಿಸುವಂತೆ ಹೊಸ ಖಾತೆದಾರರಿಗೆ ಸೂಚಿಸಲಾಗುತ್ತಿದೆ.
ಖಾತೆದಾರರನ್ನು ಸುಲಭವಾಗಿ ಗುರುತು ಹಿಡಿಯಲು ಸಾಧ್ಯ ಎನ್ನುವುದು ಇದರ ಆಶಯ. ಇದು ಹೊಸ ಫೀಚರ್ ಆಗಿದ್ದು, ಕೆಲ ಬಳಕೆದಾರರು ಮಾತ್ರ ಅದನ್ನು ನೋಡಲು ಸಾಧ್ಯ. ಖಾತೆ ತೆರೆಯುವ ವೇಳೆ ಆಧಾರ್ನಲ್ಲಿರುವಂತೆಯೇ ಹೆಸರು ಟೈಪ್ ಮಾಡಬೇಕಾದ್ದು ಕಡ್ಡಾಯವಲ್ಲ ಎಂದು ಫೇಸ್ಬುಕ್ ಹೇಳಿಕೊಂಡಿದೆ.
ಆಧಾರ್ ಕಾರ್ಡ್ ನೀಡಬೇಕು ಎನ್ನುವುದನ್ನು ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ಗಳೂ ಸೂಚಿಸುತ್ತಿವೆ. ಗ್ರಾಹಕರಿಗೆ ಪೂರೈಕೆ ಮಾಡುವ ವಸ್ತುಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಈ ಕ್ರಮ ನೆರವಾಗುತ್ತದೆ ಎನ್ನುವುದು ಅವುಗಳ ವಾದ. ಬೆಂಗಳೂರಿನ ಝೂಮ್ ಕಾರ್ ಕಂಪನಿ ಕೂಡ ಈಗ ಬುಕಿಂಗ್ಗೆ ಆಧಾರ್ ಬೇಕು ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.