ಆಧಾರ್ ಮಾಹಿತಿ ಹ್ಯಾಕ್: ನಿರಾಕರಿಸಿದ ಪ್ರಾಧಿಕಾರ
Team Udayavani, Sep 12, 2018, 4:05 PM IST
ಹೊಸದಿಲ್ಲಿ: ಕೋಟ್ಯಂತರ ಭಾರತೀಯರ ಆಧಾರ್ ಮಾಹಿತಿಯನ್ನು ಕದಿಯಬಹುದೆಂದು “ಹಫಿಂಗ್ಟನ್ ಪೋಸ್ಟ್ ಇಂಡಿಯಾ’ ಮಾಡಿರುವ ವರದಿಯನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ನಿರಾಕರಿಸಿದೆ.
ಮಾರುಕಟ್ಟೆಗಳಲ್ಲಿ ಕೇವಲ 2,500 ರೂ.ಗಳ ಬೆಲೆಗೆ ಸಿಗುವ ಕೆಲವು ಸಾಫ್ಟ್ವೇರ್ಗಳಿಂದ ತಾನು ಆಧಾರ್ ಡೇಟಾಬೇಸ್ಗೆ ನೇರವಾಗಿ ಲಗ್ಗೆ ಹಾಕಿ ಅದರಲ್ಲಿದ್ದ ಕೋಟ್ಯಂತರ ಭಾರತೀ ಯರ ಬಯೋಮೆಟ್ರಿಕ್ ಮಾಹಿತಿಗಳನ್ನು ಕದ್ದಿದ್ದು, ಇದನ್ನು ಹಲವಾರು ತಜ್ಞರೂ ಅನೇಕ ಪರೀಕ್ಷೆಗಳ ಮೂಲಕ ದೃಢಪಡಿಸಿದ್ದಾರೆಂದು “ಹಫಿಂಗ್ಟನ್ ಪೋಸ್ಟ್ ಇಂಡಿಯಾ’ ಹೇಳಿತ್ತು.
ಈ ವರದಿಯನ್ನು ನಿರಾಕರಿಸಿರುವ ಯುಐಡಿಎಐ, ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿ ನಿಂದ ಇಂಥ ವರದಿ ತಯಾರಿಸಲಾಗಿದೆ. ಆಧಾರ್ ಮಾಹಿತಿ ಅತ್ಯಂತ ಸುರಕ್ಷಿತವಾಗಿದ್ದು, ಆ ಮಾಹಿತಿಗಳುಳ್ಳ ಡೇಟಾಬೇಸ್ ಅನ್ನು ಸಾಫ್ಟ್ ವೇರ್ ಪ್ಯಾಚ್ಗಳಿಂದ ಭೇದಿಸಬಹುದು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದಿದೆ.
ವೆಬ್ಸೈಟ್ ಹ್ಯಾಕ್: ಪ್ರತಿಷ್ಠಿತ ಐಎಎಸ್, ಐಪಿಎಸ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಅಧಿಕೃತ ವೆಬ್ಸೈಟ್ ಸೋಮವಾರ ಸಂಜೆ ವೇಳೆಗೆ ಹ್ಯಾಕ್ ಆಗಿದೆ. ವೆಬ್ಸೈಟ್ನ ಹೋಂ ಪೇಜ್ನಲ್ಲಿ ಪ್ರಖ್ಯಾತ ಡೋರಮನ್ ಕಾಟೂìನ್ ಅನ್ನು ಡಿಸ್ಪ್ಲೇ ಮಾಡಲಾಗಿದೆ. ಜತೆಗೆ ಪುಟ್ಟದೊಂದು ಹೃದಯದ ಸಾಂಕೇತಿಕ ಚಿತ್ರ, “”ಡೋರೆಮನ್, ಪಿಕಪ್ ದ ಕಾಲ್!!!” , “”ಐ ಆ್ಯಮ್ ಸ್ಟೆವ್ಪೀಡ್” ಎಂಬ ಬರಹವೂ ಕಾಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.