ಅನರ್ಹತೆ: ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ 20 ಮಂದಿ ಆಪ್ ಶಾಸಕರು
Team Udayavani, Jan 23, 2018, 11:40 AM IST
ಹೊಸದಿಲ್ಲಿ : ಲಾಭದಾಯಕ ಹುದ್ದೆ ಹೊಂದಿದ ಕಾರಣಕ್ಕೆ ಚುನಾವಣಾ ಆಯೋಗದಿಂದ ಶಾಸಕತ್ವದ ಅನರ್ಹತೆಗೆ ಗುರಿಯಾಗಿರುವ 20 ಮಂದಿ ಆಪ್ ಶಾಸಕರು ದಿಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದಾರೆ.
20 ಆಪ್ ಶಾಸಕರನ್ನು ಅನರ್ಹಗೊಳಿಸುವ ಚುನಾವಣಾ ಆಯೋಗದ ಶಿಫಾರಸಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಈ ಮೊದಲು ಸಲ್ಲಿಸಲಾಗಿದ್ದ ಅರ್ಜಿಯನ್ನು ನಿನ್ನೆ ಸೋಮವಾರ ಹಿಂದೆಗೆದುಕೊಳ್ಳಲಾಗಿತ್ತು.
ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಅನುಮತಿ ನೀಡಿದ ಪರಿಣಾಮವಾಗಿ ಶಾಸಕತ್ವ ಕಳೆದುಕೊಂಡಿರುವ 20 ಆಮ್ ಆದ್ಮಿ ಶಾಸಕರೆಂದರೆ : ಅಲ್ಕಾ ಲಾಂಬಾ, ಆದರ್ಶ್ ಶಾಸ್ತ್ರೀ , ಸಂಜೀವ್ ಝಾ, ರಾಜೇಶ್ ಗುಪ್ತಾ, ಕೈಲಾಶ್ ಗೆಹಲೋತ್, ಪ್ರವೀಣ್ ಕುಮಾರ್ , ಶರತ್ ಕುಮಾರ್, ಮದನ್ ಲಾಲ್ ಖುಫಿಯಾ, ಶಿವ ಚರಣ್ ಗೋಯಲ್, ಸರಿತಾ ಸಿಂಗ್, ನರೇಶ್ ಯಾದವ್, ರಾಜೇಶ್ ರಿಷಿ, ಅನಿಲ್ ಕುಮಾರ್, ಸೋಮ ದತ್, ಅವತಾರ್ ಸಿಂಗ್, ಸುಖವೀರ್ ಸಿಂಗ್ ದಾಲಾ, ಮನೋಜ್ ಕುಮಾರ್, ನಿತಿನ್ ತ್ಯಾಗಿ ಮತ್ತು ಜರ್ನೇಲ್ ಸಿಂಗ್.
ಪ್ರಜಾಸತ್ತೆಗೇ ಅಪಾಯಕಾರಿಯಾಗಿರುವ ಶಾಸಕರ ಅನರ್ಹತೆ ಕ್ರಮವನ್ನು ಖಂಡಿಸಿರುವ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರು ಬರೆದಿರುವ ಬಹಿರಂಪ ಪತ್ರದಲ್ಲಿ ಪಕ್ಷಕ್ಕೆ ಜನರ ಬೆಂಬಲವನ್ನು ಯಾಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.