ನನ್ನ ಖಾಸಗಿ ಫೋಟೋ ಬಿಡುಗಡೆ ಮಾಡಲು ಆಪ್‌ನಲ್ಲಿ ಸಂಚು ನಡೆಯುತ್ತಿದೆ: ಸ್ವಾತಿ ಮಲಿವಾಲ್
Team Udayavani, May 22, 2024, 10:05 PM IST
ನವದೆಹಲಿ: “ನನ್ನ ಪರವಾಗಿ ಮಾತನಾಡುತ್ತಿರುವ ಎಲ್ಲರಿಗೂ ಆಮ್ ಆದ್ಮಿ ಪಕ್ಷ ಬೆದರಿಕೆ ಹಾಕುತ್ತಿದೆ. ಜತೆಗೆ ನನ್ನ ಖಾಸಗಿ ಫೋಟೋಗಳನ್ನು ಸೋರಿಕೆ ಮಾಡುವುದಕ್ಕೂ ಸಂಚು ರೂಪಿಸಲಾಗಿದೆ ಎಂದು ಆಪ್ ಸಂಸದೆ ಸ್ವಾತಿ ಮಲಿವಾಲ್ ಬುಧವಾರ ಪಕ್ಷದ ವಿರುದ್ಧ ಮತ್ತೂಂದು ಹೊಸ ಆರೋಪ ಮಾಡಿದ್ದಾರೆ.
ಬುಧವಾರ ಈ ಬಗ್ಗೆ ಟ್ವೀಟ್ ಮಾಡಿರುವ ಸ್ವಾತಿ ” ಪಕ್ಷದ ಹಿರಿಯರೊಬ್ಬರು ನನಗೆ ಕರೆ ಮಾಡಿದ್ದರು. ಪಕ್ಷದಲ್ಲಿ ನನ್ನ ವಿರುದ್ಧ ಮಾತನಾಡುವಂತೆ ಹಾಗೂ ನನ್ನ ಖಾಸಗಿ ಫೋಟೋಗಳನ್ನು ಹರಿಬಿಟ್ಟು ನನ್ನನ್ನು ಕುಗ್ಗಿಸುವಂತೆ ಕೆಲವರ ಮೇಲೆ ಒತ್ತಡ ಹೇರಲಾಗುತ್ತಿದೆ. ಜತೆಗೆ ನನ್ನನ್ನು ಬೆಂಬಲಿಸಿದವರನ್ನು ಪಕ್ಷದಿಂದ ಹೊರಹಾಕುವುದಾಗಿಯೂ ಬೆದರಿಕೆ ನೀಡಲಾಗಿದೆ. ಬಂಧಿತರಾಗಿರುವ ಬಿಭವ್ ಕುಮಾರ್‌ಗೆ ಆಪ್ತರಾದ ಕೆಲವು ವರದಿಗಾರರು ಕೂಡ ನನ್ನ ವಿರುದ್ಧ ನಕಲಿ ರಹಸ್ಯ ಕಾರ್ಯಾಚರಣೆಗೆ ಇಳಿದಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ ಸತ್ಯ ನನ್ನ ಪರವಾಗಿದೆ ನಾನೊಬ್ಬಳೇ ಹೋರಾಡುತ್ತೇನೆ ಎಂದಿದ್ದಾರೆ.
ಏತನ್ಮಧ್ಯೆ ಎಎಪಿ (ಆಪ್) ಅಂದರೆ ಆ್ಯಂಟಿ-ದಿಲ್ಲಿ, ಆ್ಯಂಟಿ-ವುಮೆನ್ ಪಾರ್ಟಿ ಎಂಬುದಾಗಿದೆ. ಸ್ವಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿ ಸಿಎಂ ನಿವಾಸದಿಂದ ಸಿಸಿಟಿವಿ ದೃಶ್ಯಾವಳಿ ಕಾಣೆಯಾಗಿರುವುದು ಪ್ರಕರಣದಲ್ಲಿ ಸಿಎಂ ತಮ್ಮ ಆಪ್ತನನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿು ವಕ್ತಾರ ಸುಧಾಂಶು ತ್ರಿವೇದಿ ಬುಧವಾರ ಆರೋಪಿಸಿದ್ದಾರೆ.
ಇದನ್ನೂ ಓದಿ: Shah Rukh Khan: ಬಾಲಿವುಡ್ ನಟ ಶಾರುಖ್ ಆಸ್ಪತ್ರೆಗೆ ದಾಖಲು, ಡಿಸಾcರ್ಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.