Delhi Polls: AAP 2ನೇ ಪಟ್ಟಿ ಬಿಡುಗಡೆ… ಕ್ಷೇತ್ರ ಬದಲಾಯಿಸಿದ ಸಿಸೋಡಿಯಾ
Team Udayavani, Dec 9, 2024, 1:35 PM IST
ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಇಪ್ಪತ್ತು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ(ಡಿ.9) ಬಿಡುಗಡೆ ಮಾಡಿದೆ.
ಎರಡನೇ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು ಅದರಂತೆ ಮೂರು ಬಾರಿ ಪತ್ಪರ್ಗಂಜ್ ಕ್ಷೇತ್ರದ ಶಾಸಕರಾದ ಮನೀಶ್ ಸಿಸೋಡಿಯಾ ಈ ಬಾರಿ ಜಂಗ್‌ಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಸೇರಿದ ಶಿಕ್ಷಣತಜ್ಞ ಅವಧ್ ಓಜಾ ಅವರು ಸಿಸೋಡಿಯಾ ಅವರ ಸ್ವ ಕ್ಷೇತ್ರವಾದ ಪತ್ಪರ್ಗಂಜ್ ನಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರು 2013 ಮತ್ತು 2015 ರಲ್ಲಿ ಪತ್ಪರ್ಗಂಜ್ ಕ್ಷೇತ್ರದಲ್ಲಿ ಪ್ರಬಲ ಗೆಲುವು ಸಾಧಿಸಿದ್ದರು, ಆದರೆ 2020 ರಲ್ಲಿ ಮಾತ್ರ ಕೆಲವು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು ಎನ್ನಲಾಗಿದೆ ಹಾಗಾಗಿ ಈ ಬಾರಿ ಅವರ ಕ್ಷೇತ್ರವನ್ನು ಬದಲಾಯಿಸಿ ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Phir Layenge Kejriwal🔥
Second List of candidates for Delhi Assembly Elections 2025 is here!
All the best to all the candidates ✌️🏻 pic.twitter.com/g0pymzlIaG
— AAP (@AamAadmiParty) December 9, 2024
ಎರಡನೇ ಪಟ್ಟಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಏನೆಂದರೆ ದೆಹಲಿ ವಿಧಾನಸಭೆಯ ಉಪ ಸ್ಪೀಕರ್ ರಾಖಿ ಬಿಡ್ಲಾನ್ ಮಾದಿಪುರದಿಂದ ಸ್ಪರ್ಧೆ ಮಾಡಿದರೆ, ರಾಕೇಶ್ ಜಾತವ್ ಧರ್ಮರಕ್ಷಕ್ ಅವರು ಮಂಗೋಲ್ಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಎರಡನೇ ಪಟ್ಟಿಯಲ್ಲಿರುವ ಉಳಿದ ಅಭ್ಯರ್ಥಿಗಳ ಹೆಸರು:
ದಿನೇಶ್ ಭಾರದ್ವಾಜ್ (ನರೇಲಾ), ಸುರೇಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್‌ಪುರ್), ಮುಖೇಶ್ ಗೋಯೆಲ್ (ಆದರ್ಶ ನಗರ), ಜಸ್ಬೀರ್ ಕರಾಲಾ (ಮುಂಡ್ಕಾ), ಪ್ರದೀಪ್ ಮಿತ್ತಲ್ (ರೋಹಿಣಿ), ಪುರಂದೀಪ್ ಸಿಂಗ್ ಸಾವ್ನಿ (ಚಾಂದಿನಿ ಚೌಕ್), ಪರ್ವೇಶ್ ರತನ್ (ಪಟೇಲ್ ನಗರ), ಪ್ರವೀಣ್ ಕುಮಾರ್ (ಜನಕಪುರಿ), ಸುರೇಂದರ್ ಭಾರದ್ವಾಜ್ (ಬಿಜಸ್ವಾನ್), ಜೋಗಿಂದರ್ ಸೋಲಂಕಿ (ಪಾಲಂ), ಪ್ರೇಮ್ ಕುಮಾರ್ ಚೌಹಾಣ್ (ಡಿಯೋಲಿ), ಅಂಜನಾ ಪರ್ಚಾ (ತ್ರಿಲೋಕಪುರಿ), ವಿಕಾಸ್ ಬಗ್ಗಾ (ಕೃಷ್ಣ ನಗರ), ನವೀನ್ ಚೌಧರಿ (ಗಾಂಧಿ ನಗರ), ಜಿತೇಂದರ್ ಸಿಂಗ್ ಶುಂಟಿ (ಶಹದಾರ), ಮತ್ತು ಆದಿಲ್ ಅಹ್ಮದ್ ಖಾನ್ (ಮುಸ್ತಫಾಬಾದ್).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.