ಕಾಂಗ್ರೆಸ್‌ಗೆ ಸಡ್ಡು ಹೊಡೆಯಲು ಹೊರಟ ಆಪ್‌, ಟಿಎಂಸಿ


Team Udayavani, Jan 3, 2022, 5:50 AM IST

ಕಾಂಗ್ರೆಸ್‌ಗೆ ಸಡ್ಡು ಹೊಡೆಯಲು ಹೊರಟ ಆಪ್‌, ಟಿಎಂಸಿ

ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲಿದೆ. ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬ ಬಗ್ಗೆ ಈಗಾಗಲೇ ಹಲವು ಹಂತಗಳಲ್ಲಿ ಲೆಕ್ಕಾಚಾರಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಬಿಜೆಪಿಯಂತೂ ಐದೂ ರಾಜ್ಯಗಳಲ್ಲಿನ ಚುನಾವಣೆಗಾಗಿ, ನಿರಂತರವಾಗಿ ಪ್ರಚಾರದಲ್ಲಿ ನಿರತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಂತೂ ಉತ್ತರ ಪ್ರದೇಶದಲ್ಲಿ ತಾವೇ ಖುದ್ದಾಗಿ ಪ್ರಚಾರಕ್ಕೆ ಇಳಿದು ಬಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ಇದ್ದಾರೆ. ನಮ್ಮ ದೇಶದ ಯಾವುದೇ ರಾಜಕೀಯ ಪಕ್ಷ ಅಥವಾ ಒಕ್ಕೂಟಕ್ಕೆ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುವ ಚುನಾವಣೆ ಹಾಗೂ ವರ್ಷಾಂತ್ಯಕ್ಕೆ ನಡೆಯುವ ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇ ಬೇಕು. ಏಕೆಂದರೆ ಟಾರ್ಗೆಟ್‌ 2024ರ ಲೋಕಸಭೆ ಚುನಾವಣೆ.

ಇವೆಲ್ಲದರ ನಡುವೆ ಬಹಳಷ್ಟು ಕುತೂಹಲದ ವಿಷಯ ವೆಂದರೆ ಕಾಂಗ್ರೆಸ್‌ನ ಭವಿಷ್ಯದ ಬಗೆಗಿನ ಚರ್ಚೆ. ಐದೂ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಥಿತಿ ಏನಾಗಲಿದೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ದಿಲ್ಲಿಗೆ ಸೀಮಿತವಾಗಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಲಕ್ಕೆ ಕೇಂದ್ರೀಕೃತಗೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹೆಚ್ಚು ಆಕ್ರಮಣಶೀಲವಾಗಿರುವುದು. ಕಾಂಗ್ರೆಸ್‌ಗೆ ಪರ್ಯಾಯವಾಗಿ ಏನಾದರೂ ಹೆಜ್ಜೆ ಇಡಲು ಸಾಧ್ಯವೇ ಎಂದು ಲೆಕ್ಕಾಚಾರದಲ್ಲಿದೆ. ಸದ್ಯ ಪ್ರಾದೇಶಿಕ ಪಕ್ಷಗಳಾಗಿರುವ ಈ ಎರಡೂ ಪಕ್ಷಗಳಿಗೆ ರಾಷ್ಟ್ರ ವ್ಯಾಪಿಯಾಗಿ ಬೆಳೆಯಬೇಕು ಎಂಬ ಹುಮ್ಮಸ್ಸು ಇದೆ. ಶಕ್ತಿ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಪರ್ಯಾಯವಾಗಿ ಕೇಜ್ರಿವಾಲ್‌ ಮತ್ತು ಮಮತಾ ಅವರ ಪಕ್ಷಗಳು 2024ರ ಲೋಕಸಭೆ ಚುನಾವಣೆ ಒಳಗಾಗಿ ಬೆಳೆಯಲು ಸಾಧ್ಯವೇ ಎಂಬ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಅದಕ್ಕೆ ಪೂರಕವಾಗಿರುವ ಒಂದೊಂದು ಅಂಶಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಳೆದ ವರ್ಷದ ವಿಧಾನಸಭೆ ಚುನಾವಣೆ ಬಳಿಕ ದೇಶದ ಇತರ ಭಾಗಗಳಲ್ಲಿ ರೆಕ್ಕೆ ಬಿಚ್ಚುವ ಪ್ರಯತ್ನ ಮಾಡಿದೆ. ಅದಕ್ಕೆ ಮೊದಲ ಪರೀಕ್ಷೆ ಎದುರಾಗುವುದು ಗೋವಾದಲ್ಲಿ. 2021ರ ನವೆಂಬರ್‌, ಡಿಸೆಂಬರ್‌ನಲ್ಲಿ ಖುದ್ದು ಮಮತಾ ಬ್ಯಾನರ್ಜಿಯವರೇ ಗೋವಾಕ್ಕೆ ಬಂದು ಆರಂಭಿಕ ಹಂತದಲ್ಲಿ ಪ್ರಚಾರಕ್ಕೆ ಶ್ರೀಕಾರ ನಡೆಸಿದ್ದರು. ಬೀಚ್‌ಗಳ ರಾಜ್ಯದಲ್ಲಿ ಸದ್ಯ ವಿಪಕ್ಷವಾಗಿರುವ ಕಾಂಗ್ರೆಸ್‌ನಿಂದ ತೊರೆದವರೆಲ್ಲ, ಟಿಎಂಸಿಗೆ ಸೇರ್ಪಡೆಯಾಗಿ ದ್ದಾರೆ. ಮಾಜಿ ಮುಖ್ಯಮಂತ್ರಿ ಲೂಯಿಝಿನೋ ಫೆಲೇರೋ (70) ಈಗ ಟಿಎಂಸಿಯ ನಾಯಕರಾಗಿದ್ದಾರೆ. ಟೆನಿಸ್‌ ಪಟು ಲಿಯಾಂಡರ್‌ ಪೇಸ್‌ ಕೂಡ ಟಿಎಂಸಿಗೆ ಸೇರ್ಪಡೆ ಯಾಗಿದ್ದಾರೆ. ಗೋವಾದಲ್ಲಿ ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿವೆ.

ಆಗೊಮ್ಮೆ-ಈಗೊಮ್ಮೆ ಕೇಳಿ ಬರುವ ಪಕ್ಷಗಳೆಂದರೆ ವಿಜಯ ಸರ್ದೇಸಾಯಿ ನೇತೃತ್ವದ ಗೋವಾ ಫಾರ್ವರ್ಡ್‌ ಪಾರ್ಟಿ, ಸುಧಿನ್‌ ಧಳ್ವಿàಕರ್‌ ನೇತೃತ್ವದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಮಾಜಿ ಮುಖ್ಯಮಂತ್ರಿ ಚರ್ಚಿಲ್‌ ಅಲೆಮಾವೋ ನೇತೃತ್ವದ ಯುನೈಟೆಡ್‌ ಗೋವನ್ಸ್‌ ಡೆಮಾಕ್ರಾಟಿಕ್‌ ಪಾರ್ಟಿ, ಸುಭಾಷ್‌ ವೆಲಿಂಗ್‌ಕರ್‌ ನೇತೃತ್ವದ ಗೋವಾ ಸುರಕ್ಷಾ ಮಂಚ್‌, ಉತ್ತರ ಗೋವಾದ ಬೈಕೋಲಿಂ ಕ್ಷೇತ್ರದ ಶಾಸಕ ಪಾಡುರಂಗ ರಾವತ್‌ ನೇತೃತ್ವದ ಗೋವಾ ಪ್ರಜಾ ಪಾರ್ಟಿ, ಲಿಂಡನ್‌ ಮೊಂತೇರೋ ನೇತೃತ್ವದ ಗೋವಾ ವಿಕಾಸ್‌ ಪಾರ್ಟಿ, ದಯಾನಂದ ನರ್ವೇಕರ್‌ ನೇತೃತ್ವದ ಗೋವಾ ಡೆಮಾಕ್ರಾಟಿಕ್‌ ಫ್ರಂಟ್‌ ಇವೆ. ಬಿಜೆಪಿ ಮತ್ತು ಕಾಂಗ್ರೆಸ್‌ನಂಥ ರಾಷ್ಟ್ರೀಯ ಪಕ್ಷಗಳಿಗೆ ಈ ಸಣ್ಣಪುಟ್ಟ ಪಕ್ಷಗಳ ಬೆಂಬಲ ಬೇಕೇಬೇಕಾಗುತ್ತದೆ. ಈಗ ಟಿಎಂಪಿ ಮತ್ತು ಆಪ್‌ಗ್ಳು ಇಲ್ಲಿ ಹೆಜ್ಜೆ ಇಡಲು ಹೊರಟಿರುವುದು ಕುತೂಹಲಕಾರಿ.

ತೀರಾ ಇತ್ತೀಚಿನ ಬೆಳವಣಿಗೆ ಎಂದರೆ ಚುನಾವಣೆಯ ಪೂರ್ವದ ಮೊದಲ ಹಂತದಲ್ಲಿ ಮಮತಾ ಬ್ಯಾನರ್ಜಿ ಅವರು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಜತೆಗೆ ಚುನಾವಣ ಮೈತ್ರಿ ಪ್ರಕಟಿಸಿದ್ದಾರೆ. ದೀದಿಯವರ ಈ ಹಿಂದಿನ ಹೇಳಿಕೆ ಪ್ರಕಾರ ಗೋವಾದ 40 ಕ್ಷೇತ್ರಗಳಲ್ಲಿ ಅವರ ಪಕ್ಷ ಸ್ಪರ್ಧಿಸಲಿದೆಯಂತೆ. 1960 ಮತ್ತು 1970ರ ದಶಕದಲ್ಲಿ ಎಂಜಿಪಿಯ ದಯಾಂದ ಬಂದೋಡ್ಕರ್‌ ಮತ್ತು ಶಶಿಕಲಾ ಕಾಕೋಡ್ಕರ್‌ಬೀಚ್‌ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು.

ಇದನ್ನೂ ಓದಿ:ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಪಾಕ್‌ ಸೈನಿಕನ ಹೊಡೆದುರುಳಿಸಿದ ಸೇನೆ

ಬಿಜೆಪಿ ಪ್ರವರ್ಧಮಾನಕ್ಕೆ ಬರುವ ಮೊದಲು ಗೋವಾ ರಾಜಕೀಯದಲ್ಲಿ ಛಾಪು ಮೂಡಿಸಿದ್ದ ಪಕ್ಷ. ಇದೀಗ ಟಿಎಂಸಿ ಜತೆಗೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಟಿಎಂಸಿ ಕಾಂಗ್ರೆಸ್‌ನ ಅತೃಪ್ತ ಮುಖಂಡರಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದೆ. ಶೀಘ್ರವೇ ಚುನಾವಣೆ ನಡೆಯುವ ಉತ್ತರ ಪ್ರದೇಶದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿಲ್ಲ. ಆದರೆ 2023ರಲ್ಲಿ ಮೇಘಾಲಯ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ. ಅದಕ್ಕಾಗಿ ಅದು, ಕಾಂಗ್ರೆಸ್‌ನ ಮಾಜಿ ಸದಸ್ಯ, ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಸೇರಿ 15 ಮಂದಿ ಹಾಲಿ ಶಾಸಕರನ್ನೇ ಪಕ್ಷ ಸೇರುವಂತೆ ಮಾಡಿದೆ. ಈಶಾನ್ಯ ಭಾರತದಲ್ಲಿ ಮೊದಲ ಬಾರಿಗೆ ಟಿಎಂಸಿಗೆ ಗೆಲುವಿನ ರುಚಿ ಸಿಕ್ಕಿದ್ದು, 2001ರಲ್ಲಿ ಅಸ್ಸಾಂನ ಬದಾರ್ಪುರ್‌ ಕ್ಷೇತ್ರದಿಂದ ಜಮಾಲ್‌ ಉದ್ದೀನ್‌ ಅಹ್ಮದ್‌ ಗೆಲ್ಲುವ ಮೂಲಕ ದೀದಿ ಪಕ್ಷಕ್ಕೆ ಈಶಾನ್ಯ ಭಾರತ ಪ್ರವೇಶ ಮಾಡಿತ್ತು. 2012ರಲ್ಲಿ ಮಣಿಪುರದಲ್ಲಿ 60 ಕ್ಷೇತ್ರಗಳ ಪೈಕಿ 7, 2017ರಲ್ಲಿ 1ರಲ್ಲಿ ಗೆದ್ದಿತ್ತು. ಇತ್ತೀಚೆಗಷ್ಟೇ ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕಿ ಸುಷ್ಮಿತಾ ದೇವ್‌ರನ್ನೂ ಸೆಳೆದುಕೊಂಡಿದೆ. ಹೀಗಾಗಿ ಅದು ಕಾಂಗ್ರೆಸ್‌ನಲ್ಲಿರುವ ಅತೃಪ್ತರನ್ನು ಸೆಳೆದು, ಇನ್ನೊಂದು “ರೂಪಾಂತರಿ ಕಾಂಗ್ರೆಸ್‌’ ಆಗಲಿದೆ.

ಆಮ್‌ ಆದ್ಮಿ ಪಾರ್ಟಿ ಕೂಡ ಇತ್ತೀಚಿನ ದಿನಗಳಲ್ಲಿ ವಿಸ್ತಾರಗೊಳ್ಳಲು ಯತ್ನಿಸುತ್ತಿದೆ. ಏಕೆಂದರೆ, ಕೇಜ್ರಿವಾಲ್‌ ಅವರಿಗೆ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಉತ್ತಮ ಪ್ರಭುತ್ವ ಇದೆ. ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್‌ ರಾಜಧಾನಿ ಚಂಡೀಗಢ ಮಹಾನಗರ ಪಾಲಿಕೆಯ 35 ವಾರ್ಡ್‌ ಗಳ ಪೈಕಿ ಕೇಜ್ರಿವಾಲ್‌ರ ಪಕ್ಷ 14ರಲ್ಲಿ ಗೆದ್ದಿದೆ. ಈ ಅಂಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಪ್‌ಗೆ ಧನಾತ್ಮಕವಾಗಿ ಪರಿಣಾಮ ಆಗುವುದು ಖಚಿತ. ಮಮತಾ ಬ್ಯಾನರ್ಜಿಯವರ ಋಣಾತ್ಮಕ ಅಂಶವೆಂದರೆ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸ್ಥಳೀಯ ಶೈಲಿಯ ಛಾಯೆ ಉಂಟು. ಈ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್‌ನ ಸೂರತ್‌ನಲ್ಲಿ 2021ರ ಫೆಬ್ರವರಿಯಲ್ಲಿ ನಡೆದಿದ್ದ ಮಹಾನಗರ ಪಾಲಿಕೆ ಚುನಾವಣೆಯ 120 ವಾರ್ಡ್‌ಗಳ ಪೈಕಿ 27 ವಾರ್ಡ್‌ಗಳಲ್ಲಿ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಹೀಗಾಗಿ ಗುಜರಾತ್‌ನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ಗಿಂತ ಆಮ್‌ ಆದ್ಮಿ ಪಕ್ಷ ಹೆಚ್ಚಿನ ಸವಾಲು ಒಡ್ಡಿದರೂ ಅಚ್ಚರಿ ಏನಿಲ್ಲ. ಏಕೆಂದರೆ ಸೂರತ್‌ ಪಾಲಿಕೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ನ ಕ್ಷೀಣತೆಯನ್ನೇ ಬಂಡವಾಳ ಮಾಡಿಕೊಂಡಿದೆ. 2021ರ ಜನವರಿಯಲ್ಲಿ ಕೇಜ್ರಿವಾಲ್‌ ಅವರು “ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಆರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಸ್ಪರ್ಧಿಸಲಿದೆ’ ಎಂದಿದ್ದರು. ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಪಂಜಾಬ್‌, ಉತ್ತರಾಖಂಡ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಹೇಳಿಕೊಂಡಿದ್ದರು. ಅದರಂತೆ ಪಂಜಾಬ್‌, ಗೋವಾಗಳಲ್ಲಿ ಕೇಜ್ರಿವಾಲ್‌ ಪಕ್ಷ ಒಂದೂವರೆ ವರ್ಷದಿಂದ ಸಿದ್ಧತೆ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ 403 ಸ್ಥಾನಗಳ ಪೈಕಿ ಎಷ್ಟು ಕ್ಷೇತ್ರಗಳಲ್ಲಿ ಆಪ್‌ ಸ್ಪರ್ಧಿಸಲಿದೆ ಎಂಬ ಬಗ್ಗೆ ಹೇಳಿಲ್ಲ. ಉತ್ತರಾಖಂಡ ಚುನಾವಣೆಗಾಗಿ ಸೋಮವಾರ ಅರವಿಂದ ಕೇಜ್ರಿವಾಲ್‌ ಪ್ರಚಾರ ಶುರು ಮಾಡಲಿದ್ದಾರೆ.

ಹೀಗಾಗಿ ಸದ್ಯ ನಡೆಯುತ್ತಿರುವ ವಿಶ್ಲೇಷಣೆ ಏನೆಂದರೆ ಆರು ರಾಜ್ಯಗಳಲ್ಲಿ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದರೂ, ಸಣ್ಣ ರಾಜ್ಯಗಳಾಗಿರುವ ಪಂಜಾಬ್‌ ಮತ್ತು ಗೋವಾಗಳಲ್ಲಿ ಸ್ಪರ್ಧೆ ಮಾಡಿ ಉತ್ತಮ ಫ‌ಲಿತಾಂಶ ಬಂದರೆ ಅನಂತರ ಮುಂದಿನ ರಾಜ್ಯಗಳಲ್ಲಿ ಒಂದು ಕೈ ನೋಡೋಣ ಎಂಬ ಇರಾದೆಯಲ್ಲಿ ಇದ್ದರೂ ಇರಬಹುದೇನೋ?

ಹೀಗಾಗಿ, ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕಿಂತ ಹೆಚ್ಚಾಗಿ, ಕಾಂಗ್ರೆಸ್‌ ಸ್ಥಾನದಲ್ಲಿ ಪ್ರಬಲ ವಿಪಕ್ಷ ಸ್ಥಾನಕ್ಕೆ ಯಾರು ಬರಬಹುದು ಎಂಬ ಪ್ರಶ್ನೆ ಉಂಟಾಗಿದೆ. ಆಪ್‌ ಮತ್ತು ಟಿಎಂಸಿ ಬಿಜೆಪಿಗೋ- ಕಾಂಗ್ರೆಸ್‌ಗೊà ಪ್ರಬಲ ಪಕ್ಷವಾಗಿ ಮುಂದಿನ ಐದಾರು ವರ್ಷ ಗಳಲ್ಲಿ ಬೆಳೆಯಲಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್‌-ಬಿಜೆಪಿಗೆ ಪೆಟ್ಟನ್ನಂತೂ ನೀಡಬಹುದು.

-ಸದಾಶಿವ ಕೆ.

ಟಾಪ್ ನ್ಯೂಸ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

voter

Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು

stalin

DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್‌ ವಿರುದ್ಧ ಸ್ಟಾಲಿನ್‌ ಕಿಡಿ

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

1

Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.