ಗುಜರಾತ್ ನ ಬರುವ ವಿಧಾನ ಸಭಾ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಂದ ಎಎಪಿ ಸ್ಪರ್ಧೆ : ಕೇಜ್ರಿವಾಲ್
Team Udayavani, Jun 14, 2021, 4:09 PM IST
ಗುಜರಾತ್ : ಬರುವ ವರ್ಷ ನಡೆಯಲಿಕ್ಕಿರುವ ಗುಜರಾತ್ ನ 182 ಕ್ಷೇತ್ರಗಳ ವಿಧಾನ ಸಭಾ ಚುನಾವಣೆಗೆ ನಮ್ಮ ಪಕ್ಷದಿಂದ 182 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯ ಮಂತ್ರಿ ಇಂದು(ಸೋಮವಾರ, ಜೂನ್ 14) ಹೇಳಿದ್ದಾರೆ.
ಈ ಬಗ್ಗೆ ಗುಜರಾತ್ ನ ಭೇಟಿಯ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮೇಲೆ ಗುಜರಾತ್ ನ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಅಲ್ಲಿನ ಜನ ಹೊಸ ಆಡಳಿತವನ್ನು ನೋಡಲು ಬಯಸುತ್ತಾರೆ. ಗುಜರಾತ್ ನಲ್ಲಿ ನಾವು ಎಲ್ಲಾ ಕ್ಷೇತ್ರಗಳಿಂದ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ : ಸಿಎಂ ಬದಲಾವಣೆ ವಿಚಾರದಲ್ಲಿ ಎಚ್ ಡಿ ಡಿ ಕುಟುಂಬ ಎಳೆಯುವುದು ಬೇಡ : ಕುಮಾರಸ್ವಾಮಿ
ಇನ್ನು, ಗುಜರಾತಿನ ಮಾಜಿ ನ್ಯೂಸ್ ಚಾನೆಲ್ ಆ್ಯಂಕರ್ ಇಸುದಾನ್ ಗಧ್ವಿಯವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಲ್ಲದೇ ಅವರನ್ನು, ಗುಜರಾತ್ ನ ಕೇಜ್ರಿವಾಲ್ ಎಂದು ಸಂಭೋಧಿಸಿದ್ದಾರೆ.
ದೆಹಲಿಯ ಮಾದಿರಿಯನ್ನು ಗುಜರಾತ್ ಗೆ ತರುವುದಿಲ್ಲ :
ಆಡಳಿತದ ರೂಪುರೇಷೆಗಳು ಗುಜರಾತ್ ನಲ್ಲಿ ಹೇಗಿರಲಿವೆ ಎಂದು ಕೇಳಿದ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯ ಆಡಳಿತ ಮಾದರಿಯನ್ನು ಗುಜರಾತ್ ಗೆ ತರಲು ಸಾಧ್ಯವಿಲ್ಲ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಮಾದರಿಯಿದೆ. ಗುಜರಾತ್ ನ ಆಡಳಿತ ಮಾದರಿಯನ್ನು ಗುಜರಾತ್ ನ ಜನರು ನಿರ್ಧರಿಸುತ್ತಾರೆ ಎಂದಿದ್ದಾರೆ.
ಇನ್ನು, ನವರಂಗಪುರ ಪ್ರದೇಶದಲ್ಲಿರುವ ರಾಜ್ಯ ಆಮ್ ಆದ್ಮಿ ಪಕ್ಷದ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ನಲ್ಲಿ ನಮ್ಮ ಪಕ್ಷ ಸಂಘಟನೆಗಾಗಿ ನಾವು ಕಾರ್ಯೋನ್ಮುಖವಾಗಿದ್ದೇವೆ. ಬರುವ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ. ಗುಜರಾತ್ ನಲ್ಲಿನ ನಿರುದ್ಯೋಗ, ರೈತರ ಸಮಸ್ಯೆ, ಆತ್ಮ ಹತ್ಯೆ ಪ್ರಕರಣಗಳನ್ನು ನಿವಾರಿಸುವಲ್ಲಿ ನಮ್ಮ ಪಕ್ಷ ಕಾರ್ಯ ನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಬಂಟ್ವಾಳ : ಮಳೆಯಿಂದ ಹಲವೆಡೆ ಹಾನಿ, ಪೆರಾಜೆ ಗ್ರಾಮದಲ್ಲಿ 2 ಮನೆಗಳಿಗೆ ನುಗ್ಗಿದ ನೀರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.