ಗೋವಾ ಚುನಾವಣೆ ಖರ್ಚಿಗೆ ಆಮ್ ಆದ್ಮಿ ಪಕ್ಷದಿಂದ ಅಬಕಾರಿ ಹಗರಣದ ಹಣ ಬಳಕೆ: ಇ.ಡಿ ವರದಿ
Team Udayavani, Feb 2, 2023, 4:56 PM IST
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷವು (ಆಪ್) ದಿಲ್ಲಿ ಅಬಕಾರಿ ಹಗರಣದಿಂದ ಬಂದ ಹಣವನ್ನು ಗೋವಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಬಳಸಿತ್ತು ಎಂದು ಜಾರಿ ನಿರ್ದೇಶನಾಲಯವು ತಿಳಿಸಿದೆ.
ಈ ಬಗ್ಗೆ ಚಾರ್ಜ್ ಶೀಟ್ ಸಲ್ಲಿಸಿರುವ ಇ.ಡಿ, ಈ ಹಗರಣದ ಒಂದು ಭಾಗದಷ್ಟು ಹಣವನ್ನು ಗೋವಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಬಳಸಿತ್ತು ಎಂದು ತಿಳಿಸಿದೆ.
ಗೋವಾ ವಿಧಾನಸಭೆ ಚುನಾವಣೆಯು 2022 ಫೆಬ್ರವರಿಯಲ್ಲಿ ನಡೆದಿದ್ದು, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷವು ಎರಡು ಸ್ಥಾನ ಗಳಿಸಿತ್ತು.
ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ʼಶೇರ್ ಷಾʼ ಜೋಡಿ ಸಿದ್ಧಾರ್ಥ್ – ಕಿಯಾರಾ: ಫೆ.6 ಕ್ಕೆ ಅದ್ಧೂರಿ ವಿವಾಹ
ಆಪ್ ಸಮೀಕ್ಷಾ ತಂಡದಲ್ಲಿದ್ದ ಕೆಲ ಕಾರ್ಯಕರ್ತರಿಗೆ ನಗದು ರೂಪದಲ್ಲಿ ಸುಮಾರು 70 ಲಕ್ಷ ರೂ ನಷ್ಟು ವ್ಯವಹಾರ ನಡೆಸಲಾಗಿತ್ತು. ಅಲ್ಲದೆ ಸಮೀಕ್ಷಾ ಕೆಲಸದಲ್ಲಿ ತೊಡಗಿದ್ದವರು ನಗದು ರೂಪದಲ್ಲೇ ಹಣ ಪಡೆಯಬೇಕು ಎಂದು ಸೂಚಿಸಲಾಗಿತ್ತು ಎಂದು ಇ.ಡಿ ತಿಳಿಸಿದೆ.
ಜಾರಿ ನಿರ್ದೇಶನಾಲಯದ ಜಾರ್ಜ್ ಶೀಟ್ ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ‘ಇದೊಂದು ಸಂಪೂರ್ಣ ಕಲ್ಪಿತ’ ಎಂದಿದ್ದಾರೆ.
ದೆಹಲಿಯ ಎಲ್-ಜಿ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.