ಸ್ವಚ್ಛ ಭಾರತ್‌ ಬಳಿಕ ಪ್ಲಾಸ್ಟಿಕ್‌ ತ್ಯಜಿಸಿ ಆಂದೋಲನ

ಪ್ಲಾಸ್ಟಿಕ್‌ ತ್ಯಜಿಸಲು ಇದೇ ಸಕಾಲ

Team Udayavani, Oct 2, 2019, 5:45 AM IST

c-20

ಮಣಿಪಾಲ: ಪರಿಸರಕ್ಕೆ ಹಾನಿಕರವಾಗುತ್ತಿರುವ ಪ್ಲಾಸ್ಟಿಕ್‌ನ ಬದಲು ಪರಿಸರ ಸ್ನೇಹಿ ಜೀವನಶೈಲಿ ರೂಢಿಸಿಕೊಳ್ಳುವ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಅನ್ನು ತ್ಯಜಿಸುವಂತೆ ಆ. 15ರಂದು ಕರೆ ನೀಡಿದ್ದರು. ಅ. 2 ಗಾಂಧಿ ಜಯಂತಿ ದಿನದಿಂದ ಜನತೆ ಪ್ಲಾಸ್ಟಿಕ್‌ ಬಳಕೆಯನ್ನು ಮಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್‌ನ್ನು ನಿಧಾನವಾಗಿ ಬದಿಗೆ ಸರಿಸ ಬೇಕೆಂಬುದು ಆಂದೋಲನದ ಉದ್ದೇಶ. ಇದೇ ಸಂದರ್ಭದಲ್ಲಿ ಉದಯವಾಣಿಯು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ನ್ನು ತ್ಯಜಿಸಿ ಹೇಗೆ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಪಿಸಿಕೊಳ್ಳಬಹು ದೆಂಬುದನ್ನು ಹೇಳಲು ಪ್ರಯತ್ನಿಸಿದೆ. ಪ್ಲಾಸ್ಟಿಕ್‌ ಅಗತ್ಯವಷ್ಟೇ; ಅನಿವಾರ್ಯವಲ್ಲ ಎನ್ನುವ ಪರಿಸ್ಥಿತಿ ಯನ್ನು ನಾವು ಪುನರ್‌ ರೂಪಿಸಬೇಕಿದೆ.

2022ರೊಳಗೆ ಇಡೀ ದೇಶವನ್ನು ಪ್ಲಾಸ್ಟಿಕ್‌ ಮುಕ್ತ ಗೊಳಿಸಬೇಕೆಂಬುದು ಕೇಂದ್ರ ಸರಕಾರ ತನಗೆ ತಾನು ನಿಗದಿಪಡಿಸಿಕೊಂಡಿರುವ ಗುರಿ. ಬನ್ನಿ, ನಮ್ಮ ನಮ್ಮ ನೆಲೆಯಲ್ಲಿ ಆಂದೋಲನದಲ್ಲಿ ಭಾಗಿಯಾಗೋಣ, ಪರಿಸರ ಸ್ನೇಹಿ ಜೀವನಶೈಲಿ ರೂಪಿಸಿಕೊಳ್ಳೋಣ.

ಬದಲಿ ವಸ್ತುಗಳೇನು ? ನಾವೇನು ಬಳಸಬಹುದು ?
ಯಾವುದೆಲ್ಲ ಪ್ಲಾಸ್ಟಿಕ್‌
ಪಾಲಿ ಪ್ರೊಪೈಲಿನ್‌ (ಪಿಪಿ), ನಾನ್‌-ಓವೆನ್‌ ಪಾಲಿ ಪ್ರೊಪೈಲಿನ್‌, ಮಲ್ಟಿ ಲೇಯರ್ಡ್‌ ಕೊ-ಎಕ್ಸ್‌ಟ್ರೂಡರ್‌ ಪಾಲಿ ಪ್ರೊಪೈಲಿನ್‌, ಪಾಲಿ ಇಥಲಿನ್‌ (ಪಿಇ), ಪಾಲಿ ವಿನೈಲ್‌ ಕ್ಲೋರೈಡ್‌ (ಪಿವಿಸಿ), ಹೈ ಮತ್ತು ಲೋ ಡೆನ್ಸಿಟಿ ಪಾಲಿ ಇಥಲಿನ್‌ (HDPE, LDPE), ಥರ್ಮಾಕೋಲ್‌ ಎಂದು ಕರೆಯಲಾಗುವ ಪಾಲಿ ಸ್ಪಿರಿನ್‌ (PS), ಪಾಲಿ ಅಮೈಡ್ಸ್‌ (ನೈಲಾನ್‌), ಪಾಲಿ ಟೆರೆಫೈಲೇಟ್‌ (PT)), ಪಾಲಿ ಮೀಥೈಲ್‌ ಮೆಥಕ್ರಿಲೇಟ್‌ (PMM) ಮತ್ತು ಪ್ಲಾಸ್ಟಿಕ್‌ ಮೈಕ್ರೋಬೀಡ್ಸ್‌ಗಳಿಂದ ತಯಾರಿತ ವಸ್ತುಗಳು ಎಲ್ಲವೂ ಪ್ಲಾಸ್ಟಿಕ್‌ಗಳೇ.

ಪೇಪರ್‌ ಪ್ಯಾಕ್‌
ದಿನಸಿ ಅಂಗಡಿಗಳಿಗೆ ತೆರಳಿದರೆ ಪ್ಲಾಸ್ಟಿಕ್‌ ಬಳಸುವಲ್ಲೆಲ್ಲ ಪೇಪರ್‌ ಪ್ಯಾಕ್‌ ಬಳಸಲು ಅಥವಾ ಪೇಪರ್‌ ಬ್ಯಾಗ್‌ ಕೊಡುವಂತೆ ಹೇಳಿ. ಸಾಮಗ್ರಿ ಖರೀದಿ ವೇಳೆ ಪೇಪರ್‌ನಲ್ಲಿ ಪ್ಯಾಕ್‌ ಮಾಡುವಂತೆ ಹೇಳಿ. ಇದರಿಂದಲೂ ಪ್ಲಾಸ್ಟಿಕ್‌ ತಡೆಯಬಹುದು. ಈ ಬಗ್ಗೆ ಅಂಗಡಿಯಾತನಿಗೆ ಹೇಳಿದರೆ, ಮತ್ತೆ ಆತನೂ ನಮ್ಮನ್ನು ಅನುಸರಿಸುತ್ತಾನೆ. ಭವಿಷ್ಯದ ದೃಷ್ಟಿ ಯಿಂದ ಪೇಪರ್‌ ಅತ್ಯುತ್ತಮ ಆಯ್ಕೆ.

ಮನೆಯಿಂದಲೇ ಶುರುವಾಗಲಿ
ಪ್ಲಾಸ್ಟಿಕ್‌ ದೂರವಿಡುವ ಅಭಿಯಾನ ನಮ್ಮ ಮನೆಗಳಿಂದಲೇ ಶುರುವಾಗಲಿ. ಅಂಗಡಿಯಿಂದ ದಿನಸಿ ತರುವಲ್ಲಿಂದ ಹಿಡಿದು, ಸಣ್ಣ ಪುಟ್ಟದ್ದಕ್ಕೂ ಪ್ಲಾಸ್ಟಿಕ್‌ ವಿಪರೀತವಾಗಿ ಬಳಸುತ್ತಿದ್ದೇವೆ. ಒಮ್ಮೆ ಇವುಗಳನ್ನು ಬಳಸಿ ಬಳಿಕ ಎಸೆಯುತ್ತೇವೆ. ಇದರಿಂದ ಭೂಮಿಯ ಮೇಲಾಗುವ ಪರಿಣಾಮ ಊಹಿಸಲಸಾಧ್ಯ.ಹಾಗಾಗಿ ಪ್ಲಾಸ್ಟಿಕ್‌ ದೂರವಿಡಲು ಕ್ರಿಯಾ ಶೀಲ ವಾಗಬೇಕು.ಸಣ್ಣ ಸಣ್ಣ ಬದಲಾವಣೆ ಗಳು ದೊಡ್ಡ ಪರಿವರ್ತನೆಗೆ ಕಾರಣ ವಾದೀತು. ಇದಕ್ಕಾಗಿ ನಾವು ನಮ್ಮ ಮನೆಯಿಂದಲೇ ಅಭಿಯಾನ ಆರಂಭಿಸೋಣ.

ಪೇಪರ್‌ ಸ್ಟ್ರಾ ಬಳಸಿ
ಪ್ಲಾಸ್ಟಿಕ್‌ನಿಂದ ರಚಿಸಲಾದ ಸ್ಟ್ರಾಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರವನ್ನು ಸೇರುತ್ತಿವೆ. ಇವು ಪರಿಸರಕ್ಕೆ ಅತ್ಯಂತ ಹಾನಿಕರ. ಜ್ಯೂಸ್‌ ಕುಡಿಯುವ 3 ನಿಮಿಷಕ್ಕೆ ಅದೆಷ್ಟೋ ಪ್ಲಾಸ್ಟಿಕ್‌ ಸ್ಟ್ರಾಗಳು ಇಂದು ಬಳಸಲ್ಪಡುತ್ತವೆ. ಇದರ ಬದಲು ನಾವು ಸ್ಟೀಲ್‌ ಸ್ಟ್ರಾಗಳು, ಪೇಪರ್‌ ಸ್ಟ್ರಾಗಳನ್ನು ಬಳಸಬಹುದು. ಸ್ಟೀಲ್‌ ಸ್ಟ್ರಾಗಳನ್ನಾದರೆ ಮತ್ತೆ ಮತ್ತೆ ಬಳಸಬಹುದು. ರೋಗಿಗಳಿಗೆ ಸ್ಟ್ರಾದ ಅಗತ್ಯವಿದ್ದಾಗ ಸ್ಟೀಲ್‌ ಸ್ಟ್ರಾಗಳನ್ನು ನೀಡುವುದರಿಂದ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾದೀತು. ವಿದೇಶಗಳಲ್ಲಿ ಪಾಸ್ತಾ ಸ್ಟ್ರಾಗಳು, ಸಸ್ಯಜನ್ಯ ಸ್ಟ್ರಾಗಳು ಬಳಕೆಯಲ್ಲಿವೆ.

ಬಟ್ಟೆ ಚೀಲ
ಖರೀದಿಗೆ ಹೋಗುವಾಗ ಬಟ್ಟೆ ಚೀಲ ಕೊಂಡೊಯ್ದರೆ ದೊಡ್ಡ ಮಟ್ಟದ ಹಾನಿ ತಡೆಯಬಹುದು. ಅದು ನಿತ್ಯವೂ ಒಂದೆರಡು ಪ್ಲಾಸ್ಟಿಕ್‌ ಚೀಲ ಮನೆಗೆ ಬಾರದಂತೆ ತಡೆಯುತ್ತದೆ.. ಬಟ್ಟೆಯ ಚೀಲಕ್ಕೆ ಬಾಳಿಕೆ ದೀರ್ಘ‌ವಾಗಿದ್ದು, ಪರಿಸರಕ್ಕೆ ಹಾನಿಯಿಲ್ಲ. ಒಂದು ಪ್ಲಾಸ್ಟಿಕ್‌ ಕರಗಲು ಸಾವಿರ ವರ್ಷಗಳು ಬೇಕು. ಬಟ್ಟೆ ಹಾಗಲ್ಲ. ಆದ್ದರಿಂದ ನಾವು ಬಳಸುವ ಬಟ್ಟೆ ಚೀಲ ಜೀವಜಾಲಕ್ಕೆ ಪ್ರಯೋಜನ ಮಾಡಬಲ್ಲದು.

ಕಾಫಿ ಕಪ್‌ಗಳು
ಸಭೆ, ಸಮಾರಂಭಗಳಲ್ಲಿ ಭೋಜನ ಮತ್ತು ಲಘು ಉಪಾಹಾರಕ್ಕಾಗಿ ಅದೆಷ್ಟೋ ಪ್ಲಾಸ್ಟಿಕ್‌ ತಟ್ಟೆಗಳು ಮತ್ತು ಲೋಟಗಳನ್ನು ಬಳಸುತ್ತೇವೆ. ಇವೆಲ್ಲವೂ “ಯೂಸ್‌ ಆ್ಯಂಡ್‌ ತ್ರೋ’ ವಸ್ತುಗಳು. ಇವುಗಳ ಬದಲಿಗೆ ನಾವು ಹಾಳೆ ತಟ್ಟೆಗಳು ಅಥವಾ ಸ್ಟೀಲ್‌ ತಟ್ಟೆಗಳನ್ನು ಬಳಸಬೇಕು. ಪೇಪರ್‌ ಲೋಟಗಳತ್ತ ನಾವು ಮನಸ್ಸು ಮಾಡಬೇಕು.

ಐಡಿ ಕಾರ್ಡ್‌ಗಳಿಗೆ ಪ್ಲಾಸ್ಟಿಕ್‌ ಬೇಡ
ಸಭೆ-ಸಮಾರಂಭಗಳು, ಧಾರ್ಮಿಕ ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರಗಳು ಸೇರಿದಂತೆ ಸಮಾವೇಶಗಳಲ್ಲಿ ತಾತ್ಕಾಲಿಕ ಐಡಿಕಾರ್ಡ್‌ಗಳನ್ನು ಬಳಸಲಾಗುತ್ತದೆ. ಇವುಗಳು ಕಾರ್ಯಕ್ರಮ ಬಳಿಕ ವ್ಯರ್ಥ. ಇದರ ಬದಲಾಗಿ ಪ್ಲಾಸ್ಟಿಕ್‌ನಿಂದ ಕವರ್‌ ಮಾಡದೆ, ಬರೀ ಐಡಿ ಕಾರ್ಡ್‌ ಗಳನ್ನು ಬಳಸಬೇಕು.

ಸ್ಟೀಲ್‌ ಬಾಟಲ್‌
ತತ್‌ಕ್ಷಣದ ಅಗತ್ಯಕ್ಕೆಂದು ಅಂಗಡಿಗಳಿಂದ ನೀರಿನ ಬಾಟಲ್‌ ಖರೀದಿಸುತ್ತೇವೆ. ಅದರಲ್ಲಿನ ನೀರು ಬಳಸಿದ ಬಳಿಕ ಅದನ್ನು ಎಸೆಯುತ್ತೇವೆ ಅಥವಾ ಕಸದ ಬುಟ್ಟಿಗೆ ಹಾಕುತ್ತೇವೆ. ನಾವು ಪ್ರವಾಸ ಹೋದ ಕಡೆ, ಬಸ್‌, ರೈಲು ಪ್ರಯಾಣದಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ತಡೆಗಟ್ಟಲು ಮನೆಯಿಂದಲೇ ಹೊರಡುವಾಗ ಸ್ಟೀಲ್‌ ಬಾಟಲ್‌ಗ‌ಳಲ್ಲಿ ನೀರು ಕೊಂಡೊಯ್ಯಬೇಕು. ಒಂದು ವೇಳೆ ನೀರು ಖಾಲಿಯಾದರೂ, ಬಸ್‌, ರೈಲು, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ “ಶುದ್ಧ ನೀರಿನ ಘಟಕ’ಗಳಿಂದ ತುಂಬಿಸಿಕೊಳ್ಳಬೇಕು. ಇನ್ನು ಕಚೇರಿ ಕೆಲಸದವರೂ ಸ್ಟೀಲ್‌ ಬಾಟಲ್‌/ಮಣ್ಣಿನ ಹೂಜಿ/ ಬಾಟಲಿಗಳನ್ನು ಬಳಸಬಹುದು.

ರಬ್ಬರ್‌ ಗ್ಲೌಸ್‌ಗಳು
ವೈದ್ಯಕೀಯ ಕ್ಷೇತ್ರದಲ್ಲಿ ಸುಧಾರಿತ ಗ್ಲೌಸ್‌ ಬಳಸ
ಲಾಗುತ್ತಿದ್ದರೂ ಇತರ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್‌ ಗ್ಲೌಸ್‌ಗಳ ಬಳಕೆ ಇದೆ. ಕೆಲವು ಬೇಕರಿ ಅಂಗಡಿಗಳು, ಮಾಂಸದ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಗ್ಲೌಸ್‌ ಬಳಸಲಾಗುತ್ತದೆ. ಇವುಗಳನ್ನು ರಬ್ಬರ್‌ ಅಥವಾ ತೆಳು ಬಟ್ಟೆಯ ಮೂಲಕ ಬದಲಾಯಿಸಿಕೊಳ್ಳಬಹುದು.

ಅಡುಗೆ ಮನೆಯಿಂದ ಪ್ಲಾಸ್ಟಿಕ್‌ ಹೊರಹಾಕಿ
ಅಡುಗೆ ಮನೆಯಲ್ಲಿ ಹೆಚ್ಚು ಪ್ಲಾಸ್ಟಿಕ್‌ಗಳನ್ನು ಬಳಸುತ್ತೇವೆ. ಸಾಸಿವೆ, ಕೊತ್ತಂಬರಿ ಹಾಕಲೂ ಪ್ಲಾಸ್ಟಿಕ್‌ ಬಳಕೆ. ತೆಂಗಿನಎಣ್ಣೆ ಕೊಳ್ಳಲೂ ಪ್ಲಾಸ್ಟಿಕ್‌. ಇಂಥ ಸಂದರ್ಭಗಳಲ್ಲಿ ಸ್ಟೀಲ್‌ ಅಥವ ಅಲ್ಯುಮಿನಿಯಂ ಡಬ್ಬ
ಗಳನ್ನು ಬಳಸಬಹದು. ಸಂಬಾರ ಪದಾರ್ಥಗಳಿರುವ ಡಬ್ಬಗಳ ಬದಲು ಗಾಜಿನ ಡಬ್ಬಗಳು, ತರಕಾರಿ ಕಟ್‌ ಮಾಡಲು ಫೈಬರ್‌ ಪ್ಲೇಟ್‌ಗಳಿದ್ದರೆ ಅದರ ಬದಲು ಮರದ ಹಲಗೆಗಳನ್ನು ಬಳಸಬಹುದು.

ಉಪ ಕ್ರಮಗಳು ಟಾಪ್‌ 15


ಫೈಬರ್‌ ಡ್ರಾವರ್‌           ಬಿದಿರಿನ ಡ್ರಾವರ್‌
ಐಸ್‌ ಕ್ಯೂಬ್‌ ಟ್ರೇ           ಸಿಲಿಕಾನ್‌ ಟ್ರೇಗಳು
ಪ್ಲಾಸ್ಟಿಕ್‌ ಡಬ್ಬ                ಸ್ಟೀಲ್‌ ಡಬ್ಬ
ಬಾಚಣಿಕೆ                       ಬಿದಿರಿನ ಬಾಚಣಿಕೆ
ಜ್ಯೂಸರ್‌ ಮೆಟರ್‌            ಜ್ಯೂಸರ್‌
ಕಟ್ಟಿಂಗ್‌ ಬೋರ್ಡ್‌            ಬಿದಿರು/ಮರದ ಬೋರ್ಡ್‌
ಕಸ ತುಂಬಿಸುವ ಚೀಲ       ಪೇಪರ್‌ ಮಿಶ್ರಿತ ಚೀಲ
ಪ್ಲಾಸ್ಟಿಕ್‌ ಕಪ್‌                   ಗಾಜು/ಸ್ಟೀಲ್‌ ಕಪ್‌
ಹ್ಯಾಂಗ್ಲರ್‌                        ಬಿದಿರಿನ ಹ್ಯಾಂಗ್ಲರ್‌
ಸ್ಟ್ರಾಗಳು                          ಮೆಟಲ್‌/ಪೇಪರ್‌ ಸ್ಟ್ರಾಗಳು
ಫೈಬರ್‌                            ಬುತ್ತಿ ಸ್ಟೀಲ್‌/ಗಾಜಿನ ಬುತ್ತಿ
ಪ್ಲಾಸ್ಟಿಕ್‌  ಸ್ಪೂನ್‌                ಮರದ/ಸ್ಟೀಲ್‌ ಸ್ಪೂನ್‌
ಪ್ಲಾಸ್ಟಿಕ್‌  ಬಾಟಲಿ                 ಸ್ಟೀಲ್‌ ಬಾಟಲಿ
ಪ್ಲಾಸ್ಟಿಕ್‌ ಚೀಲ                       ಬಟ್ಟೆಯ ಚೀಲ
ಪ್ಲಾಸ್ಟಿಕ್‌ ಗ್ಲೌಸ್‌                      ರಬ್ಬರ್‌ ಗ್ಲೌಸ್‌

ಟಾಪ್ ನ್ಯೂಸ್

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

Afzalpur: ಹುಂಡಿ ನೋಟಿನಲ್ಲಿ “ನಮ್ಮ ಅತ್ತೆ ಬೇಗ ಸಾಯಬೇಕು’ ಬರಹ ಪತ್ತೆ!

1-NASA

NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!

BUS driver

RTO; ಫಿಟ್‌ನೆಸ್‌ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ

Pro Kabaddi: ಹರಿಯಾಣ- ಪಾಟ್ನಾ ಫೈನಲ್‌ ಹಣಾಹಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-mn

Dr. Manmohan Singh; ನಾಳೆ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ಮಾಜಿ ಪ್ರಧಾನಿ ಅಂತ್ಯಕ್ರಿಯೆ

Video: ಮನಮೋಹನ್ ಸಿಂಗ್ ನಿಧನ ಹೇಳುವ ಬದಲು ಮೋದಿ ನಿಧನರಾಗಿದ್ದಾರೆ ಎಂದ ನ್ಯೂಸ್ ಆ್ಯಂಕರ್

Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Central government approves land for Manmohan Singh memorial

Memorial: ಮನಮೋಹನ್‌ ಸಿಂಗ್‌ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

courts

Kasaragod: ಯೂತ್‌ ಕಾಂಗ್ರೆಸ್‌ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು

11

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು

1-horoscope

Daily Horoscope: ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.