![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 3, 2022, 9:30 PM IST
ಚಂಡೀಗಡ: ಆನ್‌ಲೈನ್ ಮೂಲಕ ಮರುಳುಗೊಳಿಸಿ ಮತಾಂತರ ಮಾಡುವುದು, ಧಾರ್ಮಿಕ ಸಂಸ್ಥೆಗಳಿಂದ ನಡೆಸಲ್ಪಡುವ ಶಾಲೆಗಳಲ್ಲಿ ಮತಾಂತರಕ್ಕೆ ಪ್ರಚೋದನೆ ಮಾಡುವುದು ಇನ್ನು ಮುಂದೆ ಹರ್ಯಾಣದಲ್ಲಿ ಅಪರಾಧವಾಗಲಿದೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಲು ಉದ್ದೇಶಿಸಿರುವ “ಹರ್ಯಾಣ ಮತಾಂತರ ನಿಷೇಧ ವಿಧೇಯಕ 2022’ರಲ್ಲಿ ಈ ಅಂಶಗಳಿವೆ. ಸದ್ಯ ರಾಜ್ಯದ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಅದರಲ್ಲಿ ಉದ್ದೇಶಿತ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ. ವಿಧೇಯಕದಲ್ಲಿ ಉಲ್ಲೇಖೀಸಿರುವಂತೆ ಧಾರ್ಮಿಕ ಸಂಸ್ಥೆಗಳಿಂದ ನಡೆಸುವ ಶಾಲೆಗಳಲ್ಲಿ ಮರುಳು ಮಾಡಿ ಮತಾಂತರಗೊಳಿಸುವುದನ್ನೂ ನಿಷೇಧಿಸಲಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಮತಾಂತರಕ್ಕೆ ಪ್ರಯತ್ನ ಮತ್ತು ಒತ್ತಾಯ ಮಾಡುವುದೂ ಶಿಕ್ಷಾರ್ಹ ಅಪರಾಧವಾಗಲಿದೆ.
ವ್ಯಕ್ತಿಯ ಹೆತ್ತವರು ಅಥವಾ ಅವರ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದ ಧರ್ಮವನ್ನೇ ಮರಳಿ ಅನುಸರಿಸುವುದು ಮತಾಂತರ ಎಂಬ ವ್ಯಾಪ್ತಿಗೆ ಬರುವುದಿಲ್ಲ. ಒಂದು ವೇಳೆ ಯಾರೇ ಒಬ್ಬ ಧರ್ಮವನ್ನು ಮರೆಮಾಚಿ ಯುವತಿಯನ್ನು ವಿವಾಹವಾದರೆ ಅಂಥ ಮದುವೆಯನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ, ಆ ರೀತಿಯ ದಾಂಪತ್ಯದಿಂದ ಜನಿಸಿದ ಮಗುವಿಗೆ ಹೆತ್ತವರ ಆಸ್ತಿಯ ಹಕ್ಕು ವರ್ಗಾವಣೆಯಾಗುತ್ತದೆ. ಇದರ ಜತೆಗೆ ಧಾರ್ಮಿಕ ಅಂಶವನ್ನು ಮರೆ ಮಾಚಿದವರಿಗೆ 3 ರಿಂದ 10 ವರ್ಷದವರೆಗೆ ಜೈಲು ಮತ್ತು 3 ಲಕ್ಷ ರೂ. ದಂಡ, ಸಾಮೂಹಿಕ ಮತಾಂತರ ಪ್ರಕರಣಗಳಾಗಿದ್ದಲ್ಲಿ 5 ರಿಂದ 10 ವರ್ಷ ಜೈಲು ಮತ್ತು 4 ಲಕ್ಷ ರೂ. ದಂಡ, ಒಂದು ವೇಳೆ, ಸಂಸ್ಥೆಯೊಂದು ಇಂಥ ಕೃತ್ಯದಲ್ಲಿ ಶಾಮೀಲಾದದ್ದು ಸಾಬೀತಾದರೆ ಅದರ ನೋಂದಣಿ ರದ್ದು ಮಾಡಲಾಗುತ್ತದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.