ಗರ್ಭಪಾತದ ಮಿತಿ 24 ವಾರಗಳಿಗೆ ಹೆಚ್ಚಳ: ಕೇಂದ್ರ ಸಂಪುಟ ನಿರ್ಧಾರ
ಬುದ್ಧಿಮಾಂದ್ಯರು, ಅತ್ಯಾಚಾರ ಸಂತ್ರಸ್ತರಿಗೆ ಅನುಕೂಲ
Team Udayavani, Jan 30, 2020, 6:45 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ವೈದ್ಯಕೀಯ ಕಾರಣಗಳಿಂದ ಅಥವಾ ಬೇಡದಿರುವ ಗರ್ಭಪಾತಕ್ಕೆ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸುವ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಫೆ.1ರಿಂದ ಶುರುವಾಗುವ ಬಜೆಟ್ ಅಧಿವೇಶನದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಗರ್ಭಪಾತ (ತಿದ್ದುಪಡಿ) ಮಸೂದೆ 2020 ಅನ್ನು ಮಂಡಿಸಿ ಅನುಮೋದನೆ ಪಡೆದು ಕೊಳ್ಳಲು ಸರಕಾರ ಯೋಚಿಸುತ್ತಿದೆ. ಸದ್ಯ 20 ವಾರಗಳವರೆಗೆ ಮಾತ್ರ ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತಿದೆ.
ಮಹತ್ವಪೂರ್ಣವಾಗಿರುವ ತೀರ್ಮಾನದ ಬಗ್ಗೆ ವಿವರಣೆ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್, ಗರ್ಭಪಾತ ಮಾಡಿಸಿಕೊಳ್ಳಲು ಪ್ರಸ್ತುತ ಇರುವ 20 ವಾರಗಳ ಮಿತಿಯನ್ನು 24 ವಾರಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಮಹಿಳೆಯರು ಮಗುವಿಗೆ ಜನ್ಮ ನೀಡುವ ಅಧಿಕಾರವನ್ನು ಮತ್ತಷ್ಟು ರಕ್ಷಿಸಿ ದಂತಾಗಿದೆ ಎಂದು ತಿಳಿಸಿದ್ದಾರೆ.
ಗರ್ಭಪಾತ ಮಿತಿಯನ್ನು ನಾಲ್ಕು ವಾರ ಏರಿಕೆ ಮಾಡಿರುವುದರಿಂದ ಅತ್ಯಾಚಾರ ಕ್ಕೊಳಗಾದ ಸಂತ್ರಸ್ತೆ, ಬಾಲಕಿಯರು, ಬುದ್ಧಿ ಮಾಂದ್ಯ ಯುವತಿಯರಿಗೆ ಉಪಯೋಗ ಆಗಲಿದೆ. ಕೆಲವು ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರು, ಬುದ್ಧಿಮಾಂದ್ಯರಿಗೆ ಮೊದಲ ಐದು ತಿಂಗಳ ಅವಧಿಯಲ್ಲಿ ಗರ್ಭಿಣಿಯಾಗಿರುವುದು ಗೊತ್ತಾಗುವುದಿಲ್ಲ. ಹೀಗಾಗಿ ಅವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಈಗ ಗರ್ಭಪಾತ ಕಾಲಮಿತಿಯನ್ನು ಏರಿಸಿರುವುದರಿಂದ ಗರ್ಭ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಸಮಯಾವಕಾಶ ಸಿಗಲಿದೆ ಎಂದು ಹೇಳಿದ್ದಾರೆ.
ಪ್ರಧಾನ ಅಂಶಗಳು
– ಗರ್ಭಪಾತ ಮಾಡಿಸುವುದರ ಬಗ್ಗೆ ಇನ್ನು ಮುಂದೆ ಇಬ್ಬರು ತಜ್ಞರ ಅಭಿಪ್ರಾಯ ಸಲ್ಲಿಕೆಯಾಗಬೇಕು. ಅವರು 24 ವಾರಗಳ ಅವಧಿ ಪೂರ್ತಿಯಾಗಿದೆಯೇ ಎನ್ನುವುದನ್ನು ದೃಢಪಡಿಸಬೇಕು.
– ನಿಗದಿಯಾಗಿರುವ ವೈದ್ಯರ ಸಮಿತಿ ಈಗಾಗಲೇ ಭ್ರೂಣದಲ್ಲಿ ಉಂಟಾಗಿರುವ ಅಸಹಜಗಳ ಬಗ್ಗೆ ವರದಿ ನೀಡಿದಲ್ಲಿ ಹೊಸ ತಿದ್ದುಪಡಿ ಅನ್ವಯವಾಗುವುದಿಲ್ಲ.
– ಗರ್ಭಪಾತ ಮಾಡಲು ಬಯಸುವ ಮಹಿಳೆಯ ಯಾವುದೇ ವಿವರವನ್ನು ಕಾನೂನಿನ ಅನ್ವಯ ಸೂಚಿತ ಅಧಿಕಾರಿಗೆ ಮಾತ್ರ ನೀಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.