ನಿಖರ ಸ್ಥಳ ಗುರುತಿಗೆ ಒಂದು ದೇಶ; ಒಂದು ವಿಳಾಸ
ಕೇಂದ್ರದಿಂದ ಶೀಘ್ರ ಹೊಸ ಯೋಜನೆ
Team Udayavani, Nov 20, 2020, 6:26 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ಒಂದು ದೇಶ; ಒಂದು ತೆರಿಗೆ’, “ಒಂದು ದೇಶ; ಒಂದು ಪಡಿತರ’ ಮಾದರಿಯಲ್ಲೇ ದೇಶಾದ್ಯಂತ “ಒಂದು ದೇಶ; ಒಂದು ವಿಳಾಸ’ ಯೋಜನೆ ಜಾರಿಗೆ ಬರಲಿದೆ. ಇದರಿಂದ ದೇಶದ ಪ್ರತೀ ರಸ್ತೆಯನ್ನೂ ಗುರುತಿಸುವುದು ಸುಲಭವಾಗಲಿದೆ.
ಉದ್ಯೋಗ ಸೃಷ್ಟಿ ಮತ್ತು ಕೌಶಲಾಭಿವೃದ್ಧಿ ಬಗ್ಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರ್‌ಚಂದ್ ಗೆಹಲೋಟ್ ನೇತೃತ್ವದ ಉನ್ನತಾಧಿಕಾರದ ಸಚಿವರ ಸಮಿತಿ ಪ್ರಧಾನಿ ಮೋದಿಯವರಿಗೆ ಈ ಬಗ್ಗೆ ವರದಿ ಸಲ್ಲಿಸಿದೆ. ಆಧಾರ್ ಸಂಖ್ಯೆಯಂತೆ ಪ್ರತೀ ಆಸ್ತಿ, ರಸ್ತೆಗೆ ವಿಶೇಷ ರೀತಿಯ ಸಂಕೇತ ಸಂಖ್ಯೆಗಳನ್ನು ನೀಡಲಾಗುತ್ತದೆ. ಅದರ ಆಧಾರದಲ್ಲಿ ಸುಲಭದಲ್ಲಿ ವಿಳಾಸ ಪತ್ತೆ ಸಾಧ್ಯವಾಗಲಿದೆ.
ವರದಿಯಲ್ಲಿ ಏನಿದೆ?
- ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳು ವ್ಯಾಪಕವಾಗಿ ಅಭಿವೃದ್ಧಿ ಗೊಳ್ಳುತ್ತಿವೆ. ಹೀಗಾಗಿ ಕೆಲವು ಪ್ರದೇಶಗಳು ಗುರುತಿಸುವಿಕೆಯಿಂದ ಹೊರಗೆ ಉಳಿಯುತ್ತವೆ.
- ಗ್ರಾಮ ಮತ್ತು ನಗರಗಳಲ್ಲಿ ಈಗಾಗಲೇ ಅಭಿ ವೃದ್ಧಿ ಹೊಂದಿದ ಪ್ರದೇಶಗಳ ರಸ್ತೆ ಗಳ ವಿವರಗಳನ್ನೇ ಹೊಸ ಪ್ರದೇಶಕ್ಕೆ ವಿಸ್ತರಿಸ ಲಾಗುತ್ತದೆ.
- ರಸ್ತೆ, ಕಟ್ಟಡ, ಪ್ರದೇಶಗಳನ್ನು ಗುರುತಿಸುವ ವ್ಯವಸ್ಥೆ ಇಲ್ಲದೇ ಇದ್ದರೆ ಅಭಿವೃದ್ಧಿಯಾಗುತ್ತಿರುವ ಸ್ಥಳದ ಗುರುತು ಹೇಗೆ ಸಾಧ್ಯ?
- ಅಪಘಾತದ ಸಂದರ್ಭದಲ್ಲಿ ಪೊಲೀಸರು, ಆ್ಯಂಬುಲೆನ್ಸ್ ಕ್ಲಪ್ತ ಸಮಯದಲ್ಲಿ ತಲುಪುವುದು ಹೇಗೆ? ಉಳಿದ ಸಂದರ್ಭದಲ್ಲಿ ಖಾಸಗಿ ಅಥವಾ ಸರಕಾರಿ ಸೇವೆಗಳನ್ನು ಆ ಪ್ರದೇಶಕ್ಕೆ ಕ್ಷಿಪ್ರವಾಗಿ ನೀಡುವುದೂ ಕಷ್ಟವಾಗುತ್ತದೆ.
- ಇದರ ಜತೆಗೆ ನಗರ, ಗ್ರಾಮೀಣ ವ್ಯಾಪ್ತಿ ಯಲ್ಲಿ ಸೂಕ್ತ ರೀತಿಯಲ್ಲಿ ತೆರಿಗೆ ಸಂಗ್ರಹಿಸಲೂ ಹೊಸ ವ್ಯವಸ್ಥೆ ನೆರವಾಗುತ್ತದೆ.
ಹೊಸ ವ್ಯವಸ್ಥೆ ಹೇಗೆ?
– ಸುಲಭವಾಗಿ ರಸ್ತೆ, ಕಟ್ಟಡ, ಪ್ರಮುಖ ಸ್ಥಳಗಳನ್ನು ಗುರುತಿಸಲು ವಿಶೇಷ ಸಂಕೇತ ಸಂಖ್ಯೆಗಳನ್ನು ನೀಡಲಾಗುತ್ತದೆ.
– ಅಕ್ಷರ ಮತ್ತು ಸಂಖ್ಯೆ (ಆಲ್ಫಾ ನ್ಯುಮರಿಕ್)ಗಳನ್ನು ರಸ್ತೆ, ಕಟ್ಟಡ, ಪ್ರಮುಖ ಸ್ಥಳಗಳಿಗೆ ನೀಡಲಾಗುತ್ತದೆ.
– ಹೊಸದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಮತ್ತೂಂದು ರೀತಿಯಲ್ಲಿ ಸಂಕೇ ತಾ ಕ್ಷರಯುಕ್ತ ವಿಳಾಸ ವ್ಯವಸ್ಥೆಯನ್ನು ಪರೀಕ್ಷಾರ್ಥ ಜಾರಿಗೊಳಿಸಲಾಗಿದೆ. ಮಹಾ ವೀರ ಶಿವಶಕ್ತಿ ಮಂದಿರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಸಫªರ್‌ಜಂಗ್ ವಿಮಾನ ನಿಲ್ದಾಣ ರಸ್ತೆ, ಸತ್ಯ ಸದನ, ಹೊಸದಿಲ್ಲಿ- 110 003 ಎಂಬ ವಿಳಾಸವನ್ನು “ಎಸ್‌ಟಿಎಸ್ 100 138′ ಎಂದು ಗುರುತಿಸಬಹುದು.
ಎಲ್ಲೆಲ್ಲಿ ಪ್ರಯೋಗ?
-ಹೊಸದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್
-ಭುವನೇಶ್ವರ ಮುನಿಸಿಪಲ್ ಕಾರ್ಪೊರೇಷನ್
-ಆಂಧ್ರಪ್ರದೇಶದ 110 ನಗರ ಸ್ಥಳೀಯ ಸಂಸ್ಥೆಗಳಲ್ಲಿ
1,125 ಕೋಟಿ ರೂ. ಯೋಜನೆಯ ಒಟ್ಟು ವೆಚ್ಚ
563 ಕೋಟಿ ರೂ. 2ನೇ ವರ್ಷ
562 ಕೋಟಿ ರೂ. ಮೊದಲ ವರ್ಷ
02 ಕೋಟಿ ಉದ್ಯೋಗ 5 ವರ್ಷಗಳಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.