ಜೈಲಿನಿಂದಲೇ ಎಸ್‌ಪಿಗೆ ಪತ್ರ ಬರೆದ ಹತ್ರಾಸ್ ಪ್ರಕರಣದ ಮುಖ್ಯ ಆರೋಪಿ
Team Udayavani, Oct 8, 2020, 4:38 PM IST
ಮಣಿಪಾಲ: ಹತ್ರಾಸ್‌ನ ಬಲ್ಗರಿ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗಳು ಚುರುಕುಗೊಳ್ಳುತ್ತಿದೆ. ತನಿಖೆ ಬಲಗೊಳ್ಳುತ್ತಾ ಹೋದಂತೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಕ್ಟೋಬರ್ 7ರಂದು ಮುಖ್ಯ ಆರೋಪಿ ಸಂದೀಪ್ ಜೈಲಿನಿಂದ ಹತ್ರಾಸ್‌ನ ಎಸ್‌ಪಿಗೆ ಪತ್ರವೊಂದನ್ನು ಬರೆದಿದ್ದು, ಅದು ಗುರುವಾರ ಬಹಿರಂಗವಾಗಿದೆ.
ಸಂದೀಪ್ ತನ್ನನ್ನು ಮತ್ತು ಮೂವರು ಆರೋಪಿಗಳನ್ನು ನಿರಪರಾಧಿ ಎಂದು ಬಣ್ಣಿಸಿ ಸಂತ್ರಸ್ತೆಯ ತಾಯಿ ಮತ್ತು ಆಕೆಯ ಸಹೋದರ ವಿರುದ್ಧ ಗಂಭೀರ ಆರೋಪಗಳನ್ನು ಈ ಪತ್ರದ ಮುಖೇನ ಮಾಡಿದ್ದಾನೆ.
ಸಂದೀಪ್ ಹೇಳುವಂತೆ, ‘ಅವನಿಗೆ ಹುಡುಗಿಯ ಜತೆ ಸ್ನೇಹವಿತ್ತು. ಅವರ ಕುಟುಂಬಕ್ಕೆ ಇದು ಇಷ್ಟವಾಗಲಿಲ್ಲ. ಘಟನೆ ನಡೆದ ದಿನ ನಾನು ಸ್ಥಳದಲ್ಲಿದ್ದೆ, ಆದರೆ ನನ್ನನ್ನು ಹುಡುಗಿಯ ತಾಯಿ ಮತ್ತು ಸಹೋದರ ಮನೆಗೆ ಕಳುಹಿಸಿದ್ದಾರೆ. ಬಳಿಕ ಆರೋಪ ಹೊರಿಸಿ ನನ್ನನ್ನು ಜೈಲಿಗೆ ಕಳುಹಿಸಲಾಯಿತು. ಬಾಲಕಿಯ ಸಾವಿಗೆ ಅವರ ಕುಟುಂಬಸ್ಥರೇ ನೇರ ಕಾರಣ. ತಾಯಿ ಮತ್ತು ಸಹೋದರನಿಂದ ನಡೆದ ಹಲ್ಲೆಯ ಕಾರಣ ಆಕೆ ಮೃತಪಟ್ಟಿದ್ದಾಳೆ. ಈ ನಿಟ್ಟಿನಲ್ಲಿ ಸರಿಯಾದ ನ್ಯಾಯಯುತ ತನಿಖೆ ನಡೆಯಬೇಕು ಎಂದು ಸಂದೀಪ್ ಒತ್ತಾಯಿಸಿದ್ದಾನೆ. ಇತರ ಆರೋಪಿಗಳಾದ ರವಿ, ರಾಮು ಮತ್ತು ಲೊವ್ಕುಶ್ ತಮ್ಮ ಹೆಸರನ್ನು ಬರೆದು ಪತ್ರದ ಮೇಲೆ ಹೆಬ್ಬೆಟ್ಟು ಒತ್ತಿದ್ದು ಕಂಡಬಂದಿದೆ ಎಂದು ಪತ್ರವನ್ನು ಉಲ್ಲೇಖಿಸಿ ದೈನಿಕ ಬಾಸ್ಕರ್ ವರದಿ ಮಾಡಿದೆ.
He (Sandeep Singh) gave us a letter for SP Hathras. We have forwarded the letter as per rules. Acccused has put across his version in the letter & concerned investigating agency will look into it: Alok Singh, SP, Aligarh Jail, on #Hathras case accused Sandeep Singh’s letter pic.twitter.com/l1u5vDPj0L
— ANI UP (@ANINewsUP) October 8, 2020
ನನ್ನನ್ನು ಸೆಪ್ಟೆಂಬರ್ 20 ರಂದು ಸುಳ್ಳು ವಿಚಾರಣೆ ನಡೆಸಿ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ. ಸಾವನ್ನಪ್ಪಿದ ಹುಡುಗಿ ಒಳ್ಳೆಯ ಗುಣಗಳನ್ನು ಹೊಂದಿದ ಹಳ್ಳಿ ಹುಡುಗಿ. ನಾನು ಅವಳೊಂದಿಗೆ ಸ್ನೇಹಿತನಾಗಿದ್ದೆ. ನಾನು ಅವಳನ್ನು ಭೇಟಿಯಾಗುತ್ತಿದ್ದೆ, ಕೆಲವು ಸಂದರ್ಭ ಫೋನ್‌ನಲ್ಲಿ ಮಾತನಾಡುತ್ತಿದ್ದೆವು.
ಅವಳು ಮತ್ತು ನಾನು ಘಟನೆಯ ದಿನದಂದು ಜಮೀನಿನಲ್ಲಿ ಭೇಟಿಯಾದೆವು. ಅವರೊಂದಿಗೆ ತಾಯಿ ಮತ್ತು ಸಹೋದರ ಇದ್ದರು. ಅವಳ ಮನೆಯವರು ನನ್ನನ್ನು ಮನೆಗೆ ಹೋಗುವಂತೆ ಹೇಳಿದರು. ನಾನು ನನ್ನ ಮನೆಗೆ ಹೋದೆ. ಆದರೆ ನಾನ್ನೊಂದಿಗೆ ಮಾತನಾಡಿದ ಕಾರಣಕ್ಕೆ, ನನ್ನ ಸ್ನೇಹ ಸಂಪಾದಿಸಿದ ಕಾರಣ ಹುಡುಗಿಗೆ ತಾಯಿ ಮತ್ತು ಸಹೋದರ ತೀವ್ರವಾಗಿ ಥಳಿಸಿದ್ದಾರೆ. ಅದು ಅವಳಲ್ಲಿ ಗಂಭೀರ ಗಾಯಗಳಿಗೆ ಕಾರಣವಾಯಿತು. ಬಳಿಕ ಆಸ್ಪತ್ರೆ ಸಾಗಿಸಿದ ಮೇಲೆ ಚಿಕಿತ್ಸೆ ಫಲಕಾರಿಯಾಗದೇ ಅವಳು ಸಾವನ್ನಪ್ಪಿದಳು. ಅವಳ ಮರಣದ ವಾರ್ತೆಯನ್ನು ನಾನು ಗ್ರಾಮಸ್ಥರಿಂದ ತಿಳಿದುಕೊಂಡೆ. ಆ ತನಕ ನನಗೆ ಈ ವಿಷಯ ಗೊತ್ತೇ ಇಲ್ಲ. ನಾನು ಯಾರ ಸಾವಿಗೂ ಕಾರಣವಾಗಿಲ್ಲ. ಆ ಹುಡುಗಿಯೊಂದಿಗೆ ನಾನು ಕೆಟ್ಟದಾಗಿ ವರ್ತಿಸಲಿಲ್ಲ. ಈ ಪ್ರಕರಣದಲ್ಲಿ ಹುಡುಗಿಯ ತಾಯಿ ಮತ್ತು ಸಹೋದರ ನನ್ನನ್ನು ಮತ್ತು ಇತರ ಮೂವರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದಾರೆ.
ನಾವೆಲ್ಲರೂ ನಿರಪರಾಧಿಗಳು. ದಯವಿಟ್ಟು ಈ ವಿಷಯವನ್ನು ಸರಿಯಾಗಿ ತನಿಖೆ ಮಾಡುವ ಮೂಲಕ ನಮಗೆ ನ್ಯಾಯ ಒದಗಿಸಿ ಎಂದು ಪತ್ರದಲ್ಲಿ ಅತ್ಯಾಚಾರದ ಆರೋಪ ಹೊತ್ತ ವ್ಯಕ್ತಿ ಬರೆದುಕೊಂಡಿದ್ದಾನೆ. ಈ ನಡುವೆ ಜೈಲಿನಲ್ಲಿರುವ ನಮ್ಮ ಮನೆಯ ಸದಸ್ಯರ ಜೀವಕ್ಕೆ ಬೆದರಿಕೆ ಇದೆ ಎಂದು ಆರೋಪಿಗಳ ಕುಟುಂಬ ಆರೋಪಿಸಿದೆ. ಜೈಲಿನಲ್ಲಿ ಸುರಕ್ಷಿತವಾಗಿಲ್ಲ ಎಂದು ಕುಟುಂಬ ಹೇಳಿದೆ.
ಬಹಿರಂಗಗೊಂಡ ಫೋನ್ ಕರೆಗಳು
ಮುಖ್ಯ ಆರೋಪಿ ಸಂದೀಪ್ ಮತ್ತು ಬಾಲಕಿಯ ಸಹೋದರನ ನಡುವಿನ ಫೋನ್ ಕರೆಗಳ ವಿವರ ಬುಧವಾರ ಬಹಿರಂಗವಾಗಿತ್ತು. ಇವರಿಬ್ಬರು 13 ಅಕ್ಟೋಬರ್ 2019 ರಿಂದ ಮಾರ್ಚ್ 2020 ರ ವರೆಗೆ 104 ಬಾರಿ ಮಾತುಕತೆ ನಡೆಸಿದ್ದಾರೆ. ಸಂಪೂರ್ಣ ಕರೆ ಅವಧಿಯು ಸುಮಾರು 5 ಗಂಟೆಗಳು ಎಂದು ಹೇಳಲಾಗುತ್ತಿದೆ. ಸಂದೀಪ್ ಅವರಿಂದ 62 ಕರೆಗಳು ಮತ್ತು ಸಂತ್ರಸ್ತೆಯ ಸಹೋದರನ ಸಂಖ್ಯೆಯಿಂದ 42 ಕರೆಗಳನ್ನು ಮಾಡಲಾಗಿದೆ. ಈ ಕರೆಯಲ್ಲಿ ಸಂತ್ರಸ್ತೆ ಮತ್ತು ಸಂದೀಪ್ ನಡುವಿನ ಸಂಭಾಷಣೆಯ ವಿವರ ಲಭ್ಯವಾಗಿದೆ. ಸಿಡಿಆರ್‌ನಲ್ಲಿ ದಾಖಲಾಗಿರುವಂತೆ ಇಬ್ಬರ ನಡುವೆ ಸುಮಾರು 60 ಕರೆಗಳು ರಾತ್ರಿ ಸಮಯದಲ್ಲೇ ಏರ್ಪಟ್ಟಿವೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.