ವಾಕ್, ಮನೋ ವೈಕಲ್ಯ, ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಉದ್ಯೋಗ, ಭಡ್ತಿ
Team Udayavani, Jun 21, 2017, 3:55 PM IST
ಹೊಸದಿಲ್ಲಿ : ಬೌದ್ಧಿಕ ಅಸಾಮರ್ಥ್ಯ, ವಾಕ್ ವೈಕಲ್ಯ,ಮಾನಸಿಕ ಅಸ್ವಾಸ್ಥ್ಯ ಹೊಂದಿರುವವರಿಗೆ ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮತ್ತು ಭಡ್ತಿಯಲ್ಲಿ ಕೋಟಾ ಸಿಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರದ ಸಿಬಂದಿ ಮತ್ತು ತರಬೇತಿ ಇಲಾಖೆಯು (ಡಿಓಪಿಇ) ಮೇಲೆ ಹೇಳಿದ ವೈಕಲ್ಯ, ಅಸಾಮರ್ಥ್ಯ ಹೊಂದಿದವರಿಗೆ ಮತ್ತು ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸರಕಾರಿ ಉದ್ಯೋಗಾವಕಾಶ ಹಾಗೂ ಭಡ್ತಿಯಲ್ಲಿ ಕೋಟಾ ಕಲ್ಪಿಸುವ ಮತ್ತು ವಯೋಮಿತಿ ರಿಯಾಯಿತಿಗಳನ್ನು ನೀಡುವ ಪ್ರಸ್ತಾವವನ್ನು ತನ್ನ ಕರಡು ನೀತಿಯಲ್ಲಿ ಸೇರಿಸಿದೆ.
ವಿಕಲಾಂಗರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಸಿಪುವ ವಿಷಯವು ಈಗಾಗಲೇ ಸುಪ್ರೀಂ ಕೋರ್ಟ್ ಮುಂದೆ ಇತ್ಯರ್ಥಕ್ಕೆ ಬಾಕಿ ಇರುವುದರಿಂದ, ಕೇಂದ್ರದ ಸಿಬಂದಿ ಮತ್ತು ತರಬೇತಿ ಇಲಾಖೆಯ ಈ ಕ್ರಮವು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಭಾರತೀಯ ಆಡಳಿತ ಸೇವಾ ಕಚೇರಿಗಳಲ್ಲಿ ಕಚೇರಿ ಸಹಾಯಕರ ಹುದ್ದೆಗಳನ್ನು ವಿಕಲಾಂಗರಿಗೆ ಒದಗಿಸುವ ಪ್ರಸ್ತಾವವನ್ನು ಕರಡು ನೀತಿಯಲ್ಲಿ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.