ಗುಜರಾತ್ನ ಸ್ಟೆರ್ಲಿಂಗ್ ಕಂಪೆನಿ ವಿರುದ್ಧ ಕ್ರಮ
Team Udayavani, Jun 2, 2018, 9:50 AM IST
ಹೊಸದಿಲ್ಲಿ: ಆಂಧ್ರ ಬ್ಯಾಂಕ್, ಯುಕೋ ಬ್ಯಾಂಕ್, ಎಸ್ಬಿಐ ಸಹಿತ ಹಲವಾರು ಬ್ಯಾಂಕ್ಗಳಿಂದ 5,000 ಕೋಟಿ ರೂ.ವರೆಗೆ ಸಾಲ ಪಡೆದು ಮೋಸ ಮಾಡಿರುವ ಆರೋಪ ಎದುರಿಸುತ್ತಿರುವ ಗುಜರಾತ್ ಮೂಲದ ಔಷಧ ತಯಾರಿಕಾ ಕಂಪೆನಿಯಾದ “ಸ್ಟೆರ್ಲಿಂಗ್ ಬಯೋಟೆಕ್ ಗ್ರೂಪ್’ಗೆ ಸೇರಿದ 4,700 ಕೋಟಿ ರೂ. ಮೌಲ್ಯದ ಸ್ಥಿರಾಸ್ಥಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮುಟ್ಟುಗೋಲು ಹಾಕಿಕೊಂಡಿದೆ.
ಸ್ಟೆರ್ಲಿಂಗ್ ಬಯೋಟೆಕ್ ಗ್ರೂಪ್ಗೆ ಸೇರಿದ 4 ಸಾವಿರ ಎಕರೆ ಭೂಮಿ, 200 ಬ್ಯಾಂಕ್ ಖಾತೆಗಳು, 6.67 ಕೋಟಿ ರೂ. ಮೌಲ್ಯದ ಷೇರು, ಮಹಾರಾಷ್ಟ್ರದಲ್ಲಿನ ಕಚೇರಿಗಳು, ಊಟಿಯಲ್ಲಿರುವ ಕಾರ್ಖಾನೆ ಹಾಗೂ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಕಂಪೆನಿ ವಿರುದ್ಧ ಕಳೆದ ವರ್ಷದ ಅಕ್ಟೋಬರ್ನಲ್ಲೇ ಪ್ರಕರಣ ದಾಖಲಾಗಿದ್ದು, ಅದರ ಪ್ರೊಮೋಟರ್ಗಳಾದ ನಿತಿನ್ ಹಾಗೂ ಚೇತನ್ ಸಂದೇಸರಾ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಈಗಾಗಲೇ ಜಾಮೀನುರಹಿತ ವಾರಂಟ್ ಜಾರಿಯಾಗಿದೆ.
ಅತಿದೊಡ್ಡ ಮೌಲ್ಯದ ಆಸ್ತಿ: ಪಿಎನ್ಬಿಗೆ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿ ಆಸ್ತಿ ಮುಟ್ಟುಗೋಲಿನ ಬಳಿಕ ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್ಎ) ಈ ವರ್ಷ ಇ.ಡಿ. ಮುಟ್ಟುಗೋಲು ಹಾಕಿಕೊಂಡ ಎರಡನೇ ಅತಿ ಹೆಚ್ಚು ಮೌಲ್ಯದ ಆಸ್ತಿಯಿದು. ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿಗಳಿಗೆ ಸೇರಿದ ಸುಮಾರು 7,600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಈವ ರೆಗೆ ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.