ಚೈನೀಸ್ ಮಾಂಜಾ ನಿಷೇಧ: ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆಗ್ರಹ
Team Udayavani, Jan 2, 2017, 3:38 PM IST
ಜೈಪುರ : ಮಕರ ಸಂಕ್ರಾಂತಿಯಂದು ನಡೆಯಲಿರುವ ಗಾಳಿಪಟ ಉತ್ಸವಕ್ಕೆ ಮುನ್ನ ಚೈನೀಸ್ ಮಾಂಜಾ (ಗಾಳಿಪಟದ ದಾರ) ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕಾರ್ಯಕರ್ತರು ರಾಜಸ್ಥಾನ ಸರಕಾರವನ್ನು ಆಗ್ರಹಿಸಿದ್ದಾರೆ.
“ಚೈನೀಸ್ ಮಾಂಜಾ’ ಎಂದೇ ಜನಜನಿತವಾಗಿರುವ ಗಾಳಿ ಪಟ ದಾರವು ಅತ್ಯಂತ ಹರಿತವಾಗಿದ್ದು ಬಾನೆತ್ತರದಲ್ಲಿ ಇದಕ್ಕೆ ಢಿಕ್ಕಿ ಹೊಡೆಯುವ ಹಕ್ಕಿಗಳು ಗಾಯಗೊಂಡು ಆಗಸದಿಂದ ಭೂಮಿಗೆ ಪತನಗೊಳ್ಳುತ್ತವೆ ಎಂದು ರಾಜಸ್ಥಾನದ ಜನ ಮಂಚ್ ಪಕ್ಷಿ ಚಿಕಿತ್ಸಾಲಯದ ಕಾರ್ಯಕರ್ತರು ಹೇಳಿದ್ದಾರೆ. ಹೀಗೆ ಗಾಯಗೊಂಡು ನೆಲಕ್ಕೆ ಬೀಳುವ ಪಕ್ಷಿಗಳ ಚಿಕಿತ್ಸೆಗಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸಲು ಸಂಘಟನೆಯು ನಿರ್ಧರಿಸಿದೆ.
ಚೈನೀಸ್ ಮಾಂಜಾ ನಿಷೇಧವು ಪಕ್ಷಿಗಳ ಸಮಸ್ಯೆಗೆ ಪರಿಹಾರವಾಗದು; ಆದರೂ ಚೈನೀಸ್ ಮಾಂಜಾ ಮಾರಾಟದ ಮೇಲೆ ಕಠಿನ ಕ್ರಮ ತೆಗೆದುಕೊಳ್ಳುವುದು ಅಗತ್ಯ ಎಂದಿರುವ ಸಂಘಟನೆ, ಜನರು ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಗಾಳಿಪಟ ಹಾರಿಸಬಾರದು ಎಂದು ಕೇಳಿಕೊಂಡಿದೆ.
ಪಕ್ಷಿ ಚಿಕಿತ್ಸಾಲಯದ ನಿರ್ದೇಶಕ ಕಮಲ್ ಲೋಚನ್ ಅವರು ಜನವರಿ 8ರಿಂದ ಪಕ್ಷಿ ಚಿಕಿತ್ಸಾ ಶಿಬಿರಗಳು ಆರಂಭಗೊಳ್ಳುತ್ತವೆ. ಗಾಯಗೊಂಡು ನೆಲಕ್ಕೆ ಬೀಳುವ ಪಕ್ಷಿಗಳನ್ನು ಸಮೀಪದ ಚಿಕಿತ್ಸಾಲಯಗಳಿಗೆ ಒಯ್ಯುವದಕ್ಕಾಗಿ 28 ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ
Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!
Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.