Video: ಪತ್ರಕರ್ತೆ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸಿದ ಬಿಜೆಪಿ ನಾಯಕ ಸುರೇಶ್ ಗೋಪಿ
Team Udayavani, Oct 28, 2023, 3:14 PM IST
ಕೊಚ್ಚಿ: ಪತ್ರಕರ್ತೆಯ ಭುಜದ ಮೇಲೆ ಕೈಹಾಕಿ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಮಲಯಾಳಂ ನಟ ಮತ್ತು ಬಿಜೆಪಿ ನಾಯಕ ಸುರೇಶ್ ಗೋಪಿ ವಿವಾದಕ್ಕೀಡಾಗಿದ್ದಾರೆ.
ಕೇರಳದ ಕೋಝಿಕ್ಕೋಡ್‌ನಲ್ಲಿ ಬಿಜೆಪಿ ನಾಯಕ ಸುರೇಶ್ ಗೋಪಿ ಅವರು ಪತ್ರಕರ್ತೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸುರೇಶ್ ಗೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಸುರೇಶ್ ಗೋಪಿ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಅವರ ಬಳಿ ಪತ್ರಕರ್ತೆ, ಕೇರಳದಿಂದ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿ ವಿಫಲವಾದ ಬಗ್ಗೆ ಕೇಳಿದ್ದಾರೆ
ಈ ಪ್ರಶ್ನಗೆ ಸುರೇಶ್ ಗೋಪಿ, ಪ್ರಯತ್ನ ಮಾಡೋಣ, ಕಾದು ನೋಡೋಣ” ಎಂದು ಹೇಳುತ್ತಾ ಪತ್ರಕರ್ತೆ ಭುಜದ ಮೇಲೆ ಕೈ ಹಾಕಿದ್ದಾರೆ. ಇದರಿಂದ ಪತ್ರಕರ್ತೆ ಹಿಂದೆ ಹೋಗಿದ್ದು, ಸುರೇಶ್ ಗೋಪಿ ಕೈಯನ್ನು ಹಿಂದಕ್ಕೆ ಎಳೆದಿದ್ದಾರೆ. ಆ ಬಳಿಕ ಮತ್ತೆ ಪತ್ರಕರ್ತೆ ಪ್ರಶ್ನೆ ಕೇಳಲು ಮುಂದೆ ಬಂದಾಗ, ಇತ್ತ ಸುರೇಶ್ ಗೋಪಿ ಅವರು ಮತ್ತೆ ಆಕೆಯ ಭುಜದ ಮೇಲೆ ಕೈ ಹಾಕಿ ಅನುಚಿತವಾಗಿ ವರ್ತಿಸಿದ್ದಾರೆ. ಆದರೆ ಈ ಬಾರಿ ಪತ್ರಕರ್ತೆ ಅವರ ಕೈಯನ್ನು ಹಿಡಿದು ತಳ್ಳಿದ್ದಾರೆ.
ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಈ ಬಗ್ಗೆ ನಟ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ. ಅವರ ವಿರುದ್ಧ ದೂರು ನೀಡುವುದಾಗಿ ಹೇಳಿದೆ.
ಅವರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸುರೇಶ್ ಗೋಪಿ ಈ ಬಗ್ಗೆ ಕ್ಷಮೆ ಕೇಳಿದ್ದಾರೆ.
“ನಾನು ಸಾರ್ವಜನಿಕವಾಗಿ ಅಥವಾ ಜೀವನದಲ್ಲಿ ಅನುಚಿತವಾಗಿ ವರ್ತಿಸಿಲ್ಲ. ಆದರೆ ಆಕೆಗೆ ಅದರ (ಘಟನೆ) ಬಗ್ಗೆ ಏನು ಅನಿಸಿದರೂ ಅದನ್ನು ಗೌರವಿಸಬೇಕು ಎಂಬುದು ನನ್ನ ಅಭಿಪ್ರಾಯ. ಆಕೆಗೆ ಕೆಟ್ಟ ಭಾವನೆ ಇದ್ದರೆ ಅಥವಾ ಯಾವುದೇ ರೀತಿಯಲ್ಲಿ ಭಾವನಾತ್ಮಕ ಯಾತನೆ ಅನುಭವಿಸಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಕ್ಷಮಿಸಿ,” ಎಂದು ಮಲಯಾಳಂನಲ್ಲಿ ಫೇಸ್ ಬುಕ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
ಸುರೇಶ್ ಗೋಪಿ 2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಮತ್ತೊಮ್ಮೆ ಕಣಕ್ಕಿಳಿಯುವ ಸಾಧ್ಯತೆ ಇದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಹಾಗೂ 2021 ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಸ್ಪರ್ಧಿಸಿದರು,ಆದರೆ ಎರಡೂ ಬಾರಿಯೂ ಅವರು ಸೋತಿದ್ದರು.
Am i the only one who gets creeped by the way suresh gopi pats and lays off hands on any woman . Seeing this since that kodeeshwaran show#sureshgopi #kerala #kollam pic.twitter.com/9xwJnSpyNL
— HARI (@hurrynandan) October 27, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.