Prakash Raj: ಚಂದ್ರನ ಮೇಲಿನ ʼಚಾಯಿವಾಲಾʼನ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್!
ಚಂದ್ರಯಾನ-3 ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯ ಟ್ವೀಟ್
Team Udayavani, Aug 21, 2023, 9:59 AM IST
ಬೆಂಗಳೂರು: ತನ್ನ ನಟನೆಯಿಂದ ಬಹುಭಾಷೆಯಲ್ಲಿ ಮಿಂಚಿರುವ ನಟ ಪ್ರಕಾಶ್ ರಾಜ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ನಟನೆ ಬಗ್ಗೆ ಎರಡು ಮಾತಿಲ್ಲ. ಆದರೆ ಅವರ ವಿಚಾರಧಾರೆ ಬಗ್ಗೆ ಅನೇಕರು ವಿರೋಧವಾಗಿದ್ದಾರೆ.
ರಾಜಕೀಯವಾಗಿ ಅವರ ಅಭಿಪ್ರಾಯಗಳನ್ನು ಟೀಕೆ ಮಾಡುವವರು ಅನೇಕರಿದ್ದಾರೆ. ಯಾವ ವಿವಾದ ಬಂದರೂ ನಟ ಪ್ರಕಾಶ್ ರಾಜ್ ಎಲ್ಲದಕ್ಕೂ ಉತ್ತರವನ್ನು ತನ್ನ ಖಾರವಾದ ಟ್ವೀಟ್ ಗಳಿಂದಲೇ ಪ್ರತಿಕ್ರಿಯೆ ನೀಡುತ್ತಾರೆ.
ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ʼಚಾಯಿವಾಲಾʼ ಎಂದು ಹೇಳುವ ಮೂಲಕ ಅವರು ದೇಶವನ್ನು ಮಾರುತ್ತಿದ್ದಾರೆ ಎಂದು ಪ್ರಧಾನಿ ಅವರನ್ನು ಟ್ವೀಟ್ ವೊಂದರ ಮೂಲಕ ಟೀಕಿಸಿದ್ದರು.
ಇಡೀ ದೇಶವೇ ಭಾರತದ ಕನಸು ʼ ಚಂದ್ರಯಾನ-3ʼಯ ಯಶಸ್ಸಿಗೆ ಕಾಯುತ್ತಿದೆ. ಇನ್ನೇನು ಎರಡು ದಿನಗಳಲ್ಲಿ ಆ ಕನಸು ಪೂರ್ಣಗೊಳ್ಳಲಿದೆ. ಆ.23 ರಂದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಮೂಲಕ ಚಂದ್ರಯಾನ-3 ಯಶಸ್ವಿಗೊಳ್ಳಲಿದೆ.
ವಿಜ್ಞಾನಿಗಳು ಹಾಗೂ ಇಸ್ರೋವಿನ ಈ ಕನಸಿನ ʼಚಂದ್ರಯಾನ-3ʼ ಬಗ್ಗೆ ನಟ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ವೊಂದು ವಿವಾದಕ್ಕೀಡಾಗಿದೆ. ಚಂದ್ರಯಾನ-3 ಯನ್ನು ʼಚಾಯಿ ವಾಲಾʼ ನಿಗೆ ಹೋಲಿಸಿದಂತೆ ಟ್ವೀಟ್ ವೊಂದನ್ನು ಪ್ರಕಾಶ್ ರಾಜ್ ಮಾಡಿದ್ದಾರೆ.
ಕಾರ್ಟೂನ್ ರಚಿತ ಒಬ್ಬ ವ್ಯಕ್ತಿ ಚಹಾವನ್ನು ಮಗಚುವ ಫೋಟೋವೊಂದನ್ನು ಹಾಕಿ “ತಾಜಾ ಸುದ್ದಿ ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದೃಶ್ಯ”ವೆಂದು ಬರೆದುಕೊಂಡಿದ್ದಾರೆ.
ಈ ಟ್ವೀಟ್ ನ್ನು ಅನೇಕರು ಟೀಕಿಸಿದ್ದಾರೆ. ಭಾರತದ ಹೆಮ್ಮೆಯಾಗಿರುವ ʼಚಂದ್ರಯಾನ-3ʼ ಬಗೆಗಿನ ಇಂತಹ ಟ್ವೀಟ್ ಗೆ ನೆಟ್ಟಿಗರು ಗರಂ ಆಗಿದ್ದಾರೆ.
ಇದು “ಕುರುಡು ದ್ವೇಷ’ʼ ವೆಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ಜೀ, ಈ ಚಂದ್ರಯಾನ್ ಮಿಷನ್ ಇಸ್ರೋದಿಂದ ಬಂದದ್ದು ಬಿಜೆಪಿಯಿಂದಲ್ಲ. ಅದು ಯಶಸ್ವಿಯಾದರೆ ಅದು ಯಾವುದೇ ಪಕ್ಷಕ್ಕೆ ಅಲ್ಲ ಭಾರತಕ್ಕೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಇದು ಐತಿಹಾಸಿಕ ಕ್ಷಣವಾಗಿದೆ. ಇಂತಹ ಸಾಧನೆ ಮಾಡುತ್ತಿರುವವರಲ್ಲಿ ನಾವು ನಾಲ್ಕನೇಯವರು. ಇದರಲ್ಲಿರುವುದು ನಮ್ಮದೇ ಜನ ಹಾಗೂ ತಂತ್ರಜ್ಞಾನ. ಮೋದಿಜಿಯ ಮೇಲಿನ ಕುರುಡು ದ್ವೇಷದಲ್ಲಿ #ಚಂದ್ರಯಾನ3 ಅನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ನಿಮಗೆ ನಾಚಿಕೆಯಾಗಬೇಕು. ಇದನ್ನು ಯಶಸ್ವಿಗೊಳಿಸಲು ತಮ್ಮ ಜೀವಮಾನದ ವರ್ಷಗಳನ್ನು ಹಾಕಿರುವ ನಮ್ಮ ವಿಜ್ಞಾನಿಗಳನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ ಎಂದು ಮತ್ತೊಬ್ಬರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿ :~
ಚಂದ್ರಯಾನದಿಂದ ಈಗಷ್ಟೇ ಬಂದ ಮೊದಲ ದ್ರಶ್ಯ .. #VikramLander #justasking pic.twitter.com/EWHcQxc1jA
— Prakash Raj (@prakashraaj) August 20, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.