ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ
Team Udayavani, Dec 5, 2021, 6:17 PM IST
ಚೆನ್ನೈ: ಬಿಜೆಪಿ ನಾಯಕಿ ಖುಷ್ಬೂ ಸುಂದರ್ (51) ಈಗ ತೆಳ್ಳಗಾಗಿದ್ದಾರಂತೆ. ಈ ಬಗ್ಗೆ ಅವರೇ ಟ್ವೀಟ್ ಮಾಡಿಕೊಂಡಿದ್ದಾರೆ ಮತ್ತು ತೀರಾ ಇತ್ತೀಚಿನ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ.
ಖುಷ್ಬೂ ಸುಂದರ್,
ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಅವರ ತೂಕ 93 ಕೆಜಿಗೆ ಏರಿಕೆಯಾಗಿತ್ತು. ಹಲವು ಕಸರತ್ತುಗಳನ್ನು ನಡೆಸಿದ ಬಳಿಕ ಈಗ ಖುಷ್ಬೂ ಅವರ ತೂಕ 20 ಕೆಜಿ ಇಳಿಕೆಯಾಗಿದೆಯಂತೆ.
ಆಹಾರ ನಿಯಂತ್ರಣ ಕ್ರಮಗಳು, ಯೋಗ ಸೇರಿದಂತೆ ಹಲವು ಕ್ರಮಗಳನ್ನು ಅಭ್ಯಾಸ ಮಾಡಿದ್ದರಿಂದ ಕಳೆದ ಲಾಕ್‌ಡೌನ್‌ನಿಂದ ಇದುವರೆಗೆ ಬರೋಬ್ಬರಿ 20 ಕೆಜಿ ತೂಕ ಇಳಿಕೆಯಾಗಿದೆ.
ಕೆಲವು ನಿಮಗೆ ಅನಾರೋಗ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಅಂಥದ್ದೇನೂ ಆಗಿಲ್ಲ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ
ಇನ್ನು 10 ಜನ ತನ್ನನ್ನು ನೋಡಿ ತೂಕ ಇಳಿಸಿಕೊಂಡು ಫಿಟ್ ಆಗಿದ್ದರೆ ಅದೇ ನನ್ನ ಯಶಸ್ಸು ಎಂದು ಖಷ್ಬೂ ಹೇಳಿದ್ದಾರೆ.
ಇತ್ತೀಚೆಗೆ ತೆರೆಕಂಡ ರಜನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾದಲ್ಲಿ ಖುಷ್ಬೂ ಕಾಣಿಸಿಕೊಂಡಿದ್ದರು.
.@khushsundar shares her weight loss journey with before and after pics https://t.co/s95q83U4Tl
— @zoomtv (@ZoomTV) December 5, 2021
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.