ನಟಿ ಪ್ರಿಯಾ ಪ್ರಕಾಶ್ ಹಾಡಿನ ವಿರುದ್ಧ ಕೇಸು
Team Udayavani, Feb 15, 2018, 10:25 AM IST
ಹೈದರಾಬಾದ್/ಕೊಚ್ಚಿ: ರಾತ್ರೋ ರಾತ್ರಿ ದೇಶಾದ್ಯಂತ ಜನಪ್ರಿಯತೆ ಪಡೆದು ಕೊಂಡಿರುವ ಹೊಸ ಮಲಯಾಳಂ ಸಿನಿಮಾ “ಒರು ಅದಾರ್ ಲವ್’ ನಿರ್ದೇಶಕ ಒಮರ್ ಲುಲು ವಿರುದ್ಧ ಹೈದರಾಬಾದ್ನಲ್ಲಿ ಕೇಸು ದಾಖಲಿಸಲಾಗಿದೆ. ಜನಪ್ರಿಯವಾಗಿರುವ ಹಾಡಿನಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥ ಅಂಶವಿದೆ ಎಂದು ಆರೋಪಿಸಿ ಮುತ್ತಿನ ನಗರಿಯ ಫಲಕ್ನಮಾ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ. ಆದರೆ ಈ ಅಂಶವನ್ನು ನಿರ್ದೇಶಕ ಲುಲು ನಿರಾಕರಿಸಿದ್ದಾರೆ.
ಆರ್ಎಸ್ಎಸ್ಗೆ ಉತ್ತರ: ಇದೇ ವೇಳೆ ವೈರಲ್ ಆಗಿರುವ ವಿಡಿಯೋಗೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ “ಪ್ರೇಮಿಗಳ ದಿನಾಚರಣೆ’ ವಿರುದ್ಧ ಆರ್ಎಸ್ಎಸ್ನವರು ಪ್ರತಿಭಟಿಸುವುದಕ್ಕೆ ಉತ್ತರವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ಮೂಲಕ ಭಾರತೀಯರು ಪ್ರೀತಿಸಲು ಇಷ್ಟಪಡುತ್ತಾರೆಯೋ ಹೊರತು ದ್ವೇಷಿಸಲು ಅಲ್ಲ ಎಂದು ಬರೆದುಕೊಂಡಿದ್ದಾರೆ. ಪ್ರಧಾನಿ ಮೋದಿ ವಿರುದ್ಧವೂ ಟ್ವಿಟರ್ನಲ್ಲಿ ಕಾಲೆಳೆದಿರುವ ಮೇವಾನಿ “ನನಗೆ ಇದುವರೆಗೆ ಹಲವರು ಐ ಲವ್ ಯೂ ಹೇಳಿದ್ದಾರೆ. ಅದೇ ರೀತಿ ಮೋದಿಜಿಯವರಿಗೆ ಹೇಳಿದ್ದಾರೆಯೇ?’ ಎಂದು ಪ್ರಶ್ನಿಸಿದ್ದಾರೆ.
ಯಾರೂ ಫತ್ವಾ ನೀಡಿಲ್ಲ: ತನಗೆ ಆರ್ಎಸ್ಎಸ್ ವತಿಯಿಂದ ಯಾರೂ ಫತ್ವಾ ನೀಡಿಲ್ಲ ಮತ್ತು ಕಿರುಕುಳ ನೀಡಿಲ್ಲ. ಅದರ ಬದಲಾಗಿ ನನ್ನ ಹಾಡಿನ ದೃಶ್ಯವನ್ನು ಮೆಚ್ಚಿಕೊಂಡಿದ್ದಾರೆ ಎಂದು ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಟ್ವೀಟ್ನಲ್ಲಿ ಶಾಸಕ ಮೇವಾನಿಗೆ ಉತ್ತರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.