ಬಾಳೆಹಣ್ಣಿನ ಬೆಲೆಯೇ ಜಾಹೀರಾತು!
Team Udayavani, Jul 30, 2019, 5:00 AM IST
ನವದೆಹಲಿ: ಇತ್ತೀಚೆಗೆ ಪಂಚಾತಾರಾ ಹೋಟೆಲ್ ಒಂದರಲ್ಲಿ ಎರಡು ಬಾಳೆಹಣ್ಣಿಗೆ 442 ರೂ. ಬಿಲ್ ಮಾಡಿದ್ದನ್ನು ಟ್ವಿಟರ್ನಲ್ಲಿ ಬಾಲಿವುಡ್ ನಟ ರಾಹುಲ್ ಬೋಸ್ ಹಂಚಿಕೊಂಡ ನಂತರ ಬಾಳೆಹಣ್ಣಿನ ಬೆಲೆ ಕುರಿತ ಜೋಕುಗಳು ಹಾಗೂ ಮೀಮ್ಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಓಡಾಡುತ್ತಿವೆ. ಅದಕ್ಕೆ ಪೂರಕವಾಗಿ, ಇದೇ ಟ್ರೆಂಡ್ ಬಳಸಿಕೊಂಡು ಹಲವು ಕಂಪನಿಗಳು ತಮ್ಮ ಉತ್ಪನ್ನದ ಜಾಹೀರಾತುಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿವೆ. ದಿನಸಿ ಹಾಗೂ ತರಕಾರಿಗಳನ್ನು ಮಾರಾಟ ಮಾಡುವ ನೇಚರ್ಸ್ ಬಾಸ್ಕೆಟ್ ಎಂಬ ಕಂಪನಿಯು ನಮ್ಮಲ್ಲಿ ಬಾಳೆಹಣ್ಣಿಗೆ 442 ರೂ. ಕೊಡಬೇಕಿಲ್ಲ, ಕೇವಲ 14 ರೂ. ಸಾಕು ಎಂಬ ರೀತಿಯ ಜಾಹೀರಾತು ನೀಡಿದೆ. ಇನ್ನು ಹಾಲು ಹಾಗೂ ಹಾಲು ಉತ್ಪನ್ನ ಮಾರಾಟ ಕಂಪನಿ ಮದರ್ ಡೈರಿಯು ಬಾಳೆಹಣ್ಣಿಗಿಂತ ನಮ್ಮ ಮೊಸರಿನ ಬೆಲೆಯೇ ಕಡಿಮೆ. ಕೇವಲ 25 ರೂ.ನಲ್ಲಿ ಸಿಗುತ್ತದೆ ಎಂಬ ಜಾಹೀರಾತನ್ನು ಪ್ರಕಟಿಸಿದೆ.
ಇದೇ ರೀತಿ, ರಿಲಯನ್ಸ್ ಮಾರ್ಟ್, ಓಯೋ, ಓಲಾ, ಪಾಲಿಸಿಬಜಾರ್, ಪಿಜ್ಜಾ ಹಟ್, ಅಮೆಜಾನ್ ಪ್ರೈಮ್ ವಿಡಿಯೋ ಸೇರಿದಂತೆ ಹಲವು ಕಂಪನಿಗಳು ಈ ಬಾಳೆಹಣ್ಣಿನ ಬೆಲೆಯ ಸುತ್ತವೇ ಆಕರ್ಷಕ ಜಾಹೀರಾತುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.