ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ: ಭಾರತದ ಪ್ರಯತ್ನಕ್ಕೆ ಏಕೆ ಚೀನದ ಅಡ್ಡಗಾಲು?


Team Udayavani, Aug 14, 2022, 7:35 AM IST

ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆ: ಭಾರತದ ಪ್ರಯತ್ನಕ್ಕೆ ಏಕೆ ಚೀನದ ಅಡ್ಡಗಾಲು?

ಹೊಸದಿಲ್ಲಿ: ಜಮ್ಮು- ಕಾಶ್ಮೀರ ಸಹಿತ ದೇಶದಲ್ಲಿ ಪದೇಪದೆ ಉಗ್ರ ಕೃತ್ಯಗಳನ್ನು ಸಂಘಟಿಸುವ ಜೈಶ್‌-ಎ-ಮೊಹಮ್ಮದ್‌ ಮತ್ತು ಲಷ್ಕರ್‌- ಎ-ತಯ್ಯಬಾಗಳ ಕುತ್ಸಿತ ನಾಯಕರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಚೀನ ಮೇಲಿಂದ ಮೇಲೆ ಅಡ್ಡಗಾಲು ಹಾಕುತ್ತಿದೆ. ಭಾರತದ ಶಕ್ತಿ ಸಾಮರ್ಥ್ಯದ ಬಹು ಭಾಗ ಈ ಉಗ್ರರು ಸಂಘಟಿಸುವ ಛಾಯಾಸಮರವನ್ನು ನಿಭಾಯಿಸುವುದರಲ್ಲಿಯೇ ಸೋರಿಹೋಗಬೇಕು ಎಂಬ ಚೀನದ ದುರುದ್ದೇಶವೇ ಇದಕ್ಕೆ ಪ್ರಧಾನ ಕಾರಣ.

ಭಾರತದ ಗಮನ ಉಗ್ರರನ್ನು ಮಟ್ಟ ಹಾಕುವತ್ತ ಇದ್ದರೆ ಎಲ್‌ಎಸಿಯಲ್ಲಿ ತನಗೆ ಅನುಕೂಲ. ಜತೆಗೆ ಭಾರತದ ಪ್ರಗ ತಿಯೂ ಕುಂಠಿತವಾಗುತ್ತದೆ ಎಂಬುದು ಚೀನದ ಹುನ್ನಾರ.

ಜೆಇಎಂ ಮುಖ್ಯಸ್ಥ ಮಸೂದ್‌ ಅಜರ್‌ನ ಸಹೋದರ ಅಬ್ದುಲ್‌ ರವೂಫ್ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕಗಳ ಪ್ರಯತ್ನಕ್ಕೆ ಚೀನ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ತಡೆಯೊಡ್ಡಿದೆ. ಚೀನ ಹೀಗೆ ಅಡ್ಡಗಾಲು ಹಾಕುತ್ತಿರುವುದು ಎರಡು ತಿಂಗಳುಗಳಲ್ಲಿ ಇದು ಎರಡನೇ ಬಾರಿ. ಚೀನದ ಈ ನಡೆ ಅದರ ಅತ್ಯಾಪ್ತ ಸ್ನೇಹಿತನಾದ ಪಾಕಿಸ್ಥಾನದ ಪರವಾದದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ.

ಜೂನ್‌ನಲ್ಲೂ ಅಡ್ಡಗಾಲು
ಕಳೆದ ಜೂನ್‌ನಲ್ಲಿ ಲಷ್ಕರ್‌ ಎ ತಯ್ಯಬಾ (ಎಲ್‌ಇಟಿ)ದ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಮತ್ತು ಮುರಿದ್ಕೆ ಯಲ್ಲಿರುವ ಉಗ್ರರ ತರಬೇತಿ ಶಿಬಿರಗಳಿಗೆ ಪ್ರಧಾನ ನಿಧಿ ಸಂಗ್ರಹಕಾರ ಅಬ್ದುಲ್‌ ರಹಮಾನ್‌ ಮಕ್ಕಿಯನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವುದಕ್ಕೆ ಕೂಡ ಚೀನ ತಡೆ ಹಾಕಿತ್ತು. ಮಕ್ಕಿಯು ಎಲ್‌ಇಟಿ ಮುಖ್ಯಸ್ಥ, ಜಾಗತಿಕ ಉಗ್ರ ಹಫೀಜ್‌ ಸಯೀದನ ನಿಕಟ ಸಂಬಂಧಿ, ಎಲ್‌ಇಟಿಯ ತಥಾಕಥಿತ ವಿದೇಶ ವ್ಯವಹಾರ ವಿಭಾಗದ ಮುಖ್ಯಸ್ಥ.

ಉಗ್ರರಿಗೆ ಹಣ
ಮತ ಪ್ರಸರಣಕ್ಕಾಗಿ ಎಂಬ ನೆಪ ಹೇಳಿ ಮಕ್ಕಿ ಪೂರ್ವ ಏಷ್ಯಾದ ದೇಶಗಳಿಂದ ನಿಧಿ ಸಂಗ್ರಹಿಸುತ್ತಾನೆ. ಆದರೆ ಅವನದನ್ನು ಉಪಯೋಗಿಸುವುದು ಮಾತ್ರ ಮತಾಂಧ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಲು. ಈ ಉಗ್ರರು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಎಸಗುತ್ತಾರೆ, ಅಮೆರಿಕ ಮತ್ತು ಅಫ್ಘಾನಿಸ್ಥಾನಗಳಲ್ಲಿ ಭಾರತೀಯ ಹಿತಾಸಕ್ತಿಗಳನ್ನು ಕೆಡವಲು ಪ್ರಯತ್ನಿಸುತ್ತಾರೆ.

ಪಾಕಿಸ್ಥಾನದಲ್ಲಿ ನೆಲೆಯಾಗಿರುವ 40ಕ್ಕೂ ಹೆಚ್ಚು ಭಯೋತ್ಪಾದಕ ಗುಂಪುಗಳಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರ ಕುಟುಂಬಗಳಿಂದಲೇ ನಡೆಸಲ್ಪಡುವಂಥವು. ಇವೆರಡಕ್ಕೂ ರಾವಲ್ಪಿಂಡಿ ಮತ್ತು ಪಾಕಿಸ್ಥಾನದಲ್ಲಿ ಗಾಢವಾದ ನೆರವು, ಸಹಾನುಭೂತಿ ಇದೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆ ನಡೆಸಲು ಮುಕ್ತ ಸ್ವಾತಂತ್ರ್ಯ, ಧನ ಸಹಾಯ ಮತ್ತು ಆಶ್ರಯ – ಮೂರು ಬಗೆಯ ಸಹಾಯಗಳನ್ನು ಎಲ್‌ಇಟಿ ಮತ್ತು ಜೆಇಎಂ ಪಾಕಿಸ್ಥಾನದಿಂದ ಪಡೆಯುತ್ತಿವೆ. ಇದಕ್ಕೆ ಪ್ರತಿಯಾಗಿ ಪಾಕಿಸ್ಥಾನದ ಸೂಚನೆಯಂತೆ ಕಾಶ್ಮೀರ ಸಹಿತ ಭಾರತದಲ್ಲಿ ಉಗ್ರ ಕೃತ್ಯಗಳನ್ನು ಗುತ್ತಿಗೆ ಆಧಾರದಲ್ಲಿ ನಡೆಸುತ್ತವೆ.

ಭಾರತದ ಶಕ್ತಿ ಸೋರಿಕೆಗೆ ಚೀನ ಪ್ರಯತ್ನ
ಜೈಶ್‌ ಎ ಮೊಹಮ್ಮದ್‌ ನೆಲೆಯಾಗಿರುವುದು ಬಹವಾಲ್ಪುರದಲ್ಲಿ. ಮಸೂದ್‌ ಅಜರ್‌ ಇದರ ನಾಯಕ. ಈ ಅಂತಾರಾಷ್ಟ್ರೀಯ ಉಗ್ರ ಗುಂಪಿನ ಕಾರ್ಯಾಚರಣೆಗಳ ಸೂತ್ರಧಾರ ರವೂಫ್ . 2016ರಲ್ಲಿ ಪಠಾಣ್‌ಕೋಟ್‌ ವಾಯುನೆಲೆ ಮೇಲಣ ದಾಳಿ ಮತ್ತು 2019ರ ಪುಲ್ವಾಮಾ ದಾಳಿಗಳ ಸೂತ್ರಧಾರನೂ ಇವನೇ.

ಭಾರತದ ಮೇಲೆ ನಖಶಿಖಾಂತ ದ್ವೇಷ ಹೊಂದಿರುವ ಮಸೂದ್‌ ಅಜರ್‌ನ ಸೂಚನೆಯಂತೆ ಜಮ್ಮು – ಕಾಶ್ಮೀರದಲ್ಲಿ ಉಗ್ರ ದಾಳಿಗಳನ್ನು ಯೋಜಿಸುವವನು ರವೂಫ್ . 1994ರಲ್ಲಿ ಶ್ರೀನಗರದ ಹೊರವಲಯದಲ್ಲಿ ಮಸೂದ್‌ ಅಜರ್‌ನನ್ನು ಸೆರೆಹಿಡಿಯಲಾಗಿತ್ತು. ಆಗ ಭಾರತೀಯ ಪಡೆಗಳು ತನ್ನನ್ನು ನೋಡಿಕೊಂಡದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ತವಕ ಮಸೂದ್‌ ಅಜರ್‌ಗೆ.

ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ 1267 ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ 2019ರ ಮೇ 1ರಂದು ಚೀನ ಕನಿಷ್ಠ ನಾಲ್ಕು ಬಾರಿ ತಡೆ ಒಡ್ಡಿತ್ತು. ಅಜರ್‌ನನ್ನು ಉಗ್ರರ ಪಟ್ಟಿಗೆ ಸೇರಿಸದೆ ಇರುವುದಕ್ಕೆ ಸಂಬಂಧಿಸಿದ ಸೂಚನೆಯನ್ನು ಚೀನದ ಉನ್ನತ ನಾಯಕರೇ ನೀಡಿದ್ದರು.

ತನ್ನ ನೆಲದಲ್ಲಿ ಮಸೂದ್‌ ಅಜರ್‌ ಇಲ್ಲ ಎಂಬುದಾಗಿ ಪಾಕಿಸ್ಥಾನವು ಜಾಗತಿಕ ಮಟ್ಟದಲ್ಲಿ ಉಗ್ರರಿಗೆ ಹಣಕಾಸು ನೆರವು ಲಭಿಸುವುದರ ಮೇಲೆ ನಿಗಾ ಇರಿಸಿರುವ ಎಫ್ಎಟಿಎಫ್ಗೆ ಸಾಕಷ್ಟು ಬಾರಿ ಹೇಳಿದೆ. ಆದರೆ ನಿಜಾಂಶ ಎಂದರೆ, ಪಾಕಿಸ್ಥಾನದ ಪಂಜಾಬ್‌ ಪ್ರಾಂತದ ಮದರಸ ವೊಂದರಲ್ಲಿ ಮಸೂದ್‌ ಅಜರ್‌ ಸಾಕಷ್ಟು ಕಾಲದಿಂದ ಆರಾಮವಾಗಿ ನೆಲೆಸಿದ್ದಾನೆ. ಹೀಗೆ ಮಸೂದ್‌ ಅಜರ್‌ ಸಹಿತ ಉನ್ನತ ಉಗ್ರ ನಾಯಕರಿಗೆಲ್ಲ ಆಶ್ರಯ ನೀಡಿ ಸಾಕಿ ಸಲಹುತ್ತ ಭಾರತದತ್ತ ಛೂಬಿಟ್ಟು ಭಾರತದ ಶಕ್ತಿ ಸಾಮರ್ಥ್ಯದ ಬಹುಭಾಗ ಈ ಛಾಯಾಸಮರವನ್ನು ನಿಭಾಯಿಸುವುದ ರಲ್ಲಿಯೇ ಕಳೆದುಹೋಗುವಂತೆ ಮಾಡುತ್ತಿರುವುದಕ್ಕೆ ಉಡು ಗೊರೆ ಎಂಬಂತೆ ಚೀನವು ಇವರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನಕ್ಕೆ ತಡೆ ಒಡ್ಡುತ್ತಲೇ ಬರುತ್ತಿದೆ.

ಚೀನ ಒಡ್ಡಿದ ತಡೆಗಳು
1.ಅಬ್ದುಲ್‌ ರವೂಫ್ ಅಜರ್‌: ಜೈಶ್‌ ಎ ಮೊಹಮ್ಮದ್‌ನ ಕಾರ್ಯಾಚರಣೆಗಳ ಸೂತ್ರಧಾರ.
2.ಅಬ್ದುಲ್‌ ರಹಮಾನ್‌ ಮಕ್ಕಿ: ಎಲ್‌ಇಟಿಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ
3.ಅಜಂ ಚೀಮಾ, ಎಲ್‌ಇಟಿಯ ಗುಪ್ತಚರ ಮುಖ್ಯಸ್ಥ: ಜಕಿ ಉರ್‌ ರೆಹಮಾನ್‌ನ ನಾಯಕತ್ವದಲ್ಲಿ 26/11 ದಾಳಿ ಕೋರರಿಗೆ ತರಬೇತಿ ನೀಡಿದವನು.
4.ಮೊಹಮ್ಮದ್‌ ಯೂಸುಫ್ ಶಾ ಆಲಿಯಾಸ್‌ ಸಯ್ಯದ್‌ ಸಲಾಹುದ್ದೀನ್‌: ಹಿಜ್ಬುಲ್‌ ಮುಜಾಹಿದೀನ್‌ ನಾಯಕ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.