Aditya L1 Sun Mission: ಚಂದ್ರಯಾನ- 3 ಯಶಸ್ಸಿನ ಬೆನ್ನಲ್ಲೇ ಸೂರ್ಯನತ್ತ ಮುಖ ಮಾಡಿದ ISRO
Aditya L1 ಉಡಾವಣೆಗೆ ಕ್ಷಣಗಣನೆ...
Team Udayavani, Sep 2, 2023, 8:35 AM IST
ನವದೆಹಲಿ: ಚಂದ್ರಯಾನ – 3 ಯಶಸ್ಸಿನ ಬೆನ್ನಲ್ಲೇ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಮತ್ತೊಂದು ಸಾಹಸಕ್ಕೆ ಕೈಹಾಕಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಅಧ್ಯಯನ ನಡೆಸಲು ಭಾರತ ಕೈಗೊಂಡಿರುವ ಮೊಟ್ಟ ಮೊದಲ ಯೋಜನೆ ಆದಿತ್ಯ L1 ಮಿಷನ್ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಆದಿತ್ಯ – ಎಲ್1 ಉಪಗ್ರಹವನ್ನು PSLV-C57 ರಾಕೆಟ್‌ನಲ್ಲಿ ಉಡಾವಣೆ ಮಾಡಲು ಇಂದು ಪೂರ್ವಾಹ್ನ 11.50ರ ಸಮಯ ನಿಗದಿಯಾಗಿದೆ.
ಆದಿತ್ಯ ಎಲ್-1 ನೌಕೆ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ಅಂದ್ರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಅತಿಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 ಪಾತ್ರವಾಗಲಿದೆ.
ಆದಿತ್ಯ ಎಲ್1 ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾ ಉಪಗ್ರಹವಾಗಿದೆ. ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಸೂರ್ಯನ ಜನನ, ಸೌರ ಗ್ರಹಣಗಳು ಮತ್ತು CME ಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
PSLV-C57/Aditya-L1 Mission:
The 23-hour 40-minute countdown leading to the launch at 11:50 Hrs. IST on September 2, 2023, has commended today at 12:10 Hrs.The launch can be watched LIVE
on ISRO Website https://t.co/osrHMk7MZL
Facebook https://t.co/zugXQAYy1y
YouTube…— ISRO (@isro) September 1, 2023
ಆದಿತ್ಯ-L1 ನ ಮುಖ್ಯ ಸಾಧನ, ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC), ದಿನಕ್ಕೆ 1,440 ಚಿತ್ರಗಳನ್ನು ರವಾನಿಸುತ್ತದೆ. ಅಂದರೆ ನಿಮಿಷಕ್ಕೆ ಒಂದು ಫೋಟೋ! ಆದಿತ್ಯ-L1 ನಲ್ಲಿ ಇದು ಅತ್ಯಂತ ತಾಂತ್ರಿಕವಾಗಿ ಸಂಕೀರ್ಣ ಸಾಧನವಾಗಿದೆ.
ಕಕ್ಷೆ ತಲುಪಲು ನಾಲ್ಕು ತಿಂಗಳು:
ಆದಿತ್ಯ-L1 ಅನ್ನು ಸೂರ್ಯ-ಭೂಮಿಯ ನಡುವಿನ ವ್ಯವಸ್ಥೆಯ L1 (ಲಾಗ್ರೇಂಜಿಯನ್) ಕಕ್ಷೆಯಲ್ಲಿ ಇರಿಸಲಾಗುತ್ತದೆ. ಅಲ್ಲಿ ಎರಡೂ ಆಕಾಶಕಾಯಗಳ ಗುರುತ್ವಾಕರ್ಷಣೆಯ ಪರಿಣಾಮಗಳು ಪರಸ್ಪರ ರದ್ದುಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿನ ಆ ʼನಿಲುಗಡೆ ಸ್ಥಳʼವು ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನಗೊಳಿಸುವುದರಿಂದ, ಬಾಹ್ಯಾಕಾಶ ನೌಕೆಯನ್ನು ಯಾವುದೇ ಇಂಧನ ಬಳಕೆ ಮಾಡದೆಯೇ ಅಲ್ಲಿಡಬಹುದು. ಈ ಕಕ್ಷೆಯನ್ನು ತಲುಪಲು ಅದು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಿದೆ.
ನೇರ ವೀಕ್ಷಣೆಗೆ ಅವಕಾಶ:
ಇನ್ನು ಈ ಉಡಾವಣೆಯನ್ನು ಸಾರ್ವಜನಿಕರು ಕೂಡ ನೇರವಾಗಿ ವೀಕ್ಷಣೆ ಮಾಡಬಹುದು. ಇಂದು ಬೆಳಿಗ್ಗೆ 11.50ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳುವ ಆದಿತ್ಯ ಎಲ್ -1 ಅನ್ನು ಲಾಂಚ್ ವೀವ್ ಗ್ಯಾಲರಿಯಿಂದ್ ನೇರವಾಗಿ ವಿಕ್ಷಿಸಲು ಇಸ್ರೋ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಇದಕ್ಕೆ ಇಸ್ರೋ ವೆಬ್ ಲಿಂಕ್ ಮೂಲಕ ನೋಂದಣಿ ಕೂಡ ಮಾಡಿಕೊಳ್ಳಬಹುದಾಗಿದೆ.
ನೇರ ಪ್ರಸಾರದ ವೀಕ್ಷಣೆಗಾಗಿ:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.