ಪಕ್ಷದ ಹಿರಿಯರ ನಿರ್ಧಾರದ ಬಳಿಕ ಆದಿತ್ಯ ಠಾಕ್ರೆ ಸ್ಪರ್ಧೆ
ಇಲ್ಲಿಯ ತನಕ ಠಾಕ್ರೆ ಕುಟುಂಬದ ಯಾವುದೇ ಸದಸ್ಯರು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ
Team Udayavani, May 30, 2019, 3:36 PM IST
ಮುಂಬಯಿ: ಶಿವಸೇನೆಯ ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಅವರ ವಿಧಾನಸಭೆ ಚುನಾವಣೆ ಸ್ಪರ್ಧೆಯ ಕುರಿತು ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ಸಿಗಲಿದೆ ಎಂದು ಶಿವಸೇನೆ ಸಚಿವ ಮಿಲಿಂದ್ ನಾರ್ವೇಕರ್ ಅವರು ಮರಾಠಿ ಸ್ಥಾನೀಯ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಆದಿತ್ಯ ಠಾಕ್ರೆ ಅವರು ಚುನಾವಣೆಗೆ ಸ್ಪರ್ಧಿಸಿದರೆ ನಮಗೆ ಸಂತೋಷ. ಆದರೆ ಈ ನಿರ್ಣಯವನ್ನು ಸ್ವತಃ ಆದಿತ್ಯ ಅಥವಾ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತೆಗೆದುಕೊಳ್ಳುತ್ತಾರೆ ಎಂದರು. ಎಲ್ಲರ ಗಮನ 2019ರ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿದೆ. ಆದಿತ್ಯ ಠಾಕ್ರೆ ಅವರು, ಚುನಾವಣೆ ಸ್ಪರ್ಧಿಸುವುದನ್ನು ಮಹಾರಾಷ್ಟ್ರವು ಕಾಯುತ್ತಿದೆ ಎಂದು ಯುವಸೇನೆಯ ಪದಾಧಿಕಾರಿ ವರುಣ್ ಸರ್ದೇಸಾಯಿ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಅನಂತರ, ಆದಿತ್ಯ ಠಾಕ್ರೆ ವಿಧಾನಸಭೆಗೆ ಸ್ಪರ್ಧಿಸುವರೆ ಎನ್ನುವ ಚರ್ಚೆಯು ನಡೆಸಲಾಗುತ್ತಿದೆ. ಈ ಕುರಿತು ಮಿಲಿಂದ್ ಠಾಕ್ರೆ ಅವರನ್ನು ಕೇಳಿದಾಗ ಮಾತನಾಡಿದ ಅವರು, ಚುನಾವಣೆ ಸ್ಪರ್ಧಿಸುವ ಕುರಿತು ನಿರ್ಣಯ ಆದಿತ್ಯ ಠಾಕ್ರೆ ಅವರು ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತೆಗೆದುಕೊಳ್ಳಲ್ಲಿದ್ದಾರೆ.
ಆದಿತ್ಯ ಠಾಕ್ರೆ ಸ್ಪರ್ಧಿಸಿದರೆ ಯಾವ ಕ್ಷೇತ್ರದಲ್ಲಿ ನಿಲ್ಲಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿ ಮಿಲಿಂದ್ ಠಾಕ್ರೆ ಅವರು, ಸಂಪೂರ್ಣ ಮಹಾರಾಷ್ಟ್ರವು ಆದಿತ್ಯ ಠಾಕ್ರೆ ಅವರ ಚುನಾವಣೆ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದಿಂದ ಸ್ಪರ್ಧಿ
ಆದಿತ್ಯ ಠಾಕ್ರೆ ಅವರಿಗಾಗಿ ಕೆಲವು ಮಹತ್ವದ ಚುನಾವಣೆ ಕ್ಷೇತ್ರಗಳ ಆಯ್ಕೆ ಮಾಡಲಾಗಿದೆ. ಅದರಲ್ಲಿ ವರ್ಲಿ, ಶಿವಿz ಈ ಕ್ಷೇತ್ರಗಳಲ್ಲಿ ಶಿವಸೇನೆಯ ಪ್ರಾಬಲ್ಯ ಹೆಚ್ಚಾಗಿದೆ. ಆದರೆ ಆದಿತ್ಯ ಠಾಕ್ರೆ ಅವರು ಗ್ರಾಮೀಣ ಪ್ರದೇಶಗಳಲ್ಲಿ ಸ್ಪರ್ಧಿಸಬೇಕೇನ್ನುವುದು ಶಿವಸೇನೆಯ ಹಿರಿಯ ನಾಯಕರ ಬೇಡಿಕೆಯಾಗಿದೆ.
ಚುನಾವಣೆಗೂ ಮುನ್ನ ಸಚಿವ ಸಂಪುಟದಲ್ಲಿ ಶಿವಸೇನೆಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯುವ ಬಗ್ಗೆ ಚರ್ಚೆ ಆರಂಭ ವಾಗಿತ್ತು. ಈ ವೇಳೆ ಶಿವಸೇನೆಯಿಂದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಸುಭಾಷ್ ದೇಸಾಯಿ ಅವರ ಹೆಸರು ಚರ್ಚೆಯಲ್ಲಿತ್ತು.
ಆದರೆ ದೇಸಾಯಿ ಅವರ ಹೆಸರು ಚರ್ಚೆ ಯಿಂದ ಶಿವಸೇನೆಯ ನಾಯಕರಲ್ಲಿ ಅಸಮಾಮಾದಾನ ವ್ಯಕ್ತಪಡಿಸಿದರು. ಆದ್ದರಿಂದ ಆದಿತ್ಯ ಠಾಕ್ರೆ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿಸುವ ಶಿವಸೇನೆ ಪಕ್ಷ ಪ್ರಮುಖರ ವಿಚಾರ ಆಗಿರಬಹುದೇ ಎನ್ನಲಾಗಿದೆ.
ಇಲ್ಲಿಯ ತನಕ ಠಾಕ್ರೆ ಕುಟುಂಬವು ಮಾತೋಶ್ರಿಯಿಂದ ಶಿವಸೇನೆಯ ಹಾಗೂ ರಾಜಕೀಯ ಸೂತ್ರವನ್ನು ಮಾತ್ರ ನಿಭಾಯಿಸಿದ್ದಾರೆ. ಠಾಕ್ರೆ ಕುಟುಂಬದಲ್ಲಿ ಯಾವುದೇ ಸದಸ್ಯರು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಪಕ್ಷ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣುವ ಇಚ್ಛೆ ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳ ವ್ಯಕ್ತಪಡಿಸಿದರು. ಆದರೆ ಆದಿತ್ಯ ಠಾಕ್ರೆ ಅವರು, ಚುನಾವಣೆ ಕಣಕ್ಕಿಳಿದರೆ ಶಿವಸೈನಿಕರಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.