ವಿದೇಶಿ ಮಕ್ಕಳ ದತ್ತು ಸ್ವೀಕಾರ ಇನ್ನು ಸುಲಭ?
Team Udayavani, Sep 18, 2021, 11:00 PM IST
ನವದೆಹಲಿ: ಭಾರತೀಯರಿಗೆ ಬೇರೆ ದೇಶದ ಮಕ್ಕಳನ್ನು ದತ್ತು ಪಡೆಯುವ ಅವಕಾಶ ಕಲ್ಪಿಸುವ ಸಲುವಾಗಿ, ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣಾ ಕಾಯ್ದೆಗೆ (ಎಚ್‌ಎಎಂಎ) ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಸದ್ಯಕ್ಕಿರುವ ಕಾಯ್ದೆ ಪ್ರಕಾರ, ಅನ್ಯ ದೇಶಗಳ ಮಗುವನ್ನು ದತ್ತು ಪಡೆಯಬಯಸುವ ಕುಟುಂಬ ಅಥವಾ ವ್ಯಕ್ತಿ, ದತ್ತು ಕುರಿತಾದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (ಎನ್‌ಒಸಿ) ನ್ಯಾಯಾಲಯಗಳಿಂದ ಮಾತ್ರವೇ ಪಡೆಯಬೇಕಿದೆ. ತಿದ್ದುಪಡಿಯ ನಂತರ, ದತ್ತು ಪಡೆಯುವವರು, ಕೇಂದ್ರ ದತ್ತು ಸಂಪನ್ಮೂಲ ಆಯೋಗದಿಂದಲೇ (ಸಿಎಆರ್‌ಎ) ಎನ್‌ಒಸಿ ಪಡೆಯಬಹುದು.
ಅಸಲಿಗೆ, ಎಚ್‌ಎಎಂಎ ಕಾಯ್ದೆಯಲ್ಲಿ ಅನ್ಯ ದೇಶಗಳಿಂದ ಮಕ್ಕಳನ್ನು ದತ್ತುಪಡೆಯುವ ವಿಚಾರದಲ್ಲಿ ಯಾವುದೇ ಮಾರ್ಗಸೂಚಿಗಳಿಲ್ಲ. ಹಾಗಾಗಿಯೇ, ದತ್ತು ಪಡೆಯಲು ಇಚ್ಛಿಸುವವರು ನ್ಯಾಯಾಲಯಗಳ ಮೊರೆ ಹೋಗಬೇಕಿತ್ತು. ಅದನ್ನು ತಪ್ಪಿಸುವ ಸಲುವಾಗಿ, ಸಿಎಆರ್‌ಎಯಿಂದಲೇ ಪ್ರಮಾಣ ಪತ್ರ ಪಡೆಯುವಂತೆ ಮಾಡಿ, ಈ ಪ್ರಕ್ರಿಯೆಯನ್ನು ಸರಳಗೊಳಿಸಲು ತೀರ್ಮಾನಿಸಲಾಗಿದೆ. ಶುಕ್ರವಾರ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಈ ವಿಚಾರ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.