ಗೂಡ್ಸ್ ರೈಲಿನ ಮೇಲೆ ಜಾಹೀರಾತು
Team Udayavani, Jun 28, 2019, 5:03 AM IST
ಹೊಸದಿಲ್ಲಿ: ಆದಾಯ ಮೂಲಕ್ಕೆ ಹೊಸ ಹೊಸ ಕ್ರಮಗಳನ್ನು ಹುಡುಕುತ್ತಿರುವ ರೈಲ್ವೆ ಮಂಡಳಿ ಇದೇ ಮೊದಲ ಬಾರಿಗೆ ಸರಕು ಸಾಗಣೆ ರೈಲಿನ ಮೇಲೆ ಜಾಹೀರಾತು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಆಗ್ನೇಯ ರೈಲ್ವೆ ಮಂಡಳಿ ಈಗಾಗಲೇ ದಾಲಿ¾ಯಾ ಸಿಮೆಂಟ್ ಕಂಪೆನಿಗೆ ಜಾಹೀರಾತು ಪ್ರದರ್ಶಿಸಲು ಟೆಂಡರ್ ನೀಡಿದೆ. 300 ವ್ಯಾಗನ್‌ಗಳ ಮೇಲೆ ದಾಲಿ¾ಯಾ ಸಿಮೆಂಟ್ ಜಾಹೀರಾತು ಪ್ರದರ್ಶಿಸಲಾಗುತ್ತದೆ.
ಇದರೊಂದಿಗೆ ಜಾರ್ಖಂಡದ ಜೆಮ್‌ಷೆಡ್‌ಪುರದಿಂದ ಪಶ್ಚಿಮ ಬಂಗಾಲದ ಹೌರಾವರೆಗೆ ತೆರಳುವ ಸ್ಟೀಲ್ ಎಕ್ಸ್‌ಪ್ರೆಸ್ ಪ್ರಯಾಣಿಕ ರೈಲಿನ ಮೇಲೂ ಜಾಹೀರಾತು ಪ್ರದರ್ಶಿಸಲು ಟೆಂಡರ್ ನೀಡಲಾಗಿದೆ. ಹಲವು ಕಾಲದಿಂದಲೂ ಟಿಕೆಟ್‌ನಿಂದ ಹೊರತಾದ ಆದಾಯ ಮೂಲಕ್ಕೆ ರೈಲ್ವೆ ಇಲಾಖೆ ಯತ್ನಿಸುತ್ತಲೇ ಇದೆ. ಆದರೆ ಈವರೆಗೂ ಯಾವುದೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಿಲ್ಲ. ಅಷ್ಟಾಗಿಯೂ ವಿವಿಧ ಮೂಲಗಳಿಂದ 2018-19ನೇ ಸಾಲಿನಲ್ಲಿ 223 ಕೋಟಿ ರೂ. ಟಿಕೆಟ್ ಹೊರತಾದ ಮೂಲದಿಂದ ರೈಲ್ವೆ ಆದಾಯ ಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.