5 ದಿನದ ಶಿಶು ಜತೆ ಹುತಾತ್ಮ ಪತಿ ಅಂತ್ಯಕ್ರಿಯೆಗೆ ಬಂದ ಪತ್ನಿ
Team Udayavani, Feb 25, 2018, 8:15 AM IST
ಹೊಸದಿಲ್ಲಿ: ಪ್ರೀತಿ ಪಾತ್ರರ ಸಾವು ಎಂಥ ವರನ್ನೂ ದಿಕ್ಕೆಡಿಸುವಂತೆ ಮಾಡಿಬಿಡುತ್ತದೆ. ನೋವಿನಿಂದ ಹೊರಬರಲಾರದೆ ಒದ್ದಾಡುವ ಸಾಕಷ್ಟು ಘಟನೆಗಳನ್ನು ನೋಡುತ್ತಿರುತ್ತೇವೆ. ಆದರೆ ಸೇನೆಯ ಮಹಿಳಾ ಅಧಿಕಾರಿಯೊಬ್ಬರು ವಾಯುಪಡೆಯ ಅಧಿಕಾರಿಯಾದ ಪತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲು 5 ದಿನಗಳ ಶಿಶುವನ್ನು ಎತ್ತಿಕೊಂಡು ಸೇನಾ ಉಡುಗೆಯಲ್ಲೇ ನಡೆದಿರುವುದು ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.
ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದರೂ ಸೇನಾ ಸಮವಸ್ತ್ರ ಧರಿಸಿ ಮೇಜರ್ ಕುಮುದಾ ಡೋಗ್ರಾ ಅವರು ಪುಟ್ಟ ಮಗುವನ್ನು ಎತ್ತಿಕೊಂಡು ನಡೆಯುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಣ ತಾಣಗಳಲ್ಲಿ ವೈರಲ್ ಆಗಿವೆ. ವೀರ ಸೇನಾ ನಿಯ ಪತ್ನಿಯ ದಿಟ್ಟತನವನ್ನು ಜಾಲತಾಣಿಗರು ಕೊಂಡಾಡಿದ್ದಾರೆ.
ಫೆ. 15ರಂದು ಅಸ್ಸಾಂನ ಜೋರ್ಹಾಟ್ನಿಂದ ಟೇಕ್ ಆಫ್ ಆಗಿದ್ದ ಯುದ್ಧ ವಿಮಾನವು ತಾಂತ್ರಿಕ ದೋಷದಿಂದಾಗಿ ಮಾಜುಲಿ ಎಂಬಲ್ಲಿ ಪತನ ಗೊಂಡಿತ್ತು. ಪರಿಣಾಮ ಅದರಲ್ಲಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಡಿ. ವತ್ಸ್ ಹುತಾತ್ಮ ರಾದರು. 5 ದಿನಗಳ ಹಿಂದಷ್ಟೇ ವತ್ಸ್ ಅವರ ಪತ್ನಿ, ಮೇಜರ್ ಕುಮುದಾ ಅವರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ಪತಿಯ ಸಾವಿನ ಆಘಾತದ ನಡುವೆಯೂ ಅವರು ತಮ್ಮ ಹಸುಗೂಸನ್ನು ಎತ್ತಿಕೊಂಡು, ಸಮವಸ್ತ್ರಧಾರಿಯಾಗಿಯೇ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋಗುತ್ತಿದ್ದ ದೃಶ್ಯ ಎಂಥವರ ಮನಸ್ಸನ್ನೂ ಕರಗಿಸುವಂತಿತ್ತು. ಅವರ ಧೈರ್ಯ, ಕರ್ತವ್ಯದೆಡೆಗಿನ ಶ್ರದ್ಧೆಯನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.