ಬಡವರ ಕೈಗೆಟುಕದ ಆರೋಗ್ಯ ವಿಮೆ ! ಶೇ 90 ರಷ್ಟು ಬಡಜನರಿಗೆ ಆರೋಗ್ಯ ವಿಮೆ ಇಲ್ಲ
Team Udayavani, Dec 17, 2019, 12:37 AM IST
ಸರಕಾರಗಳು ಹಲವು ರೀತಿಯ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದ್ದರೂ ಅವುಗಳಿನ್ನೂ ಬಡಜನರ ಕೈಗೆಟುಕಿಲ್ಲ. ಶೇ.90ರಷ್ಟು ಬಡವರು ಆರೋಗ್ಯ ವಿಮೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ರಾಷ್ಟ್ರೀಯ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಒ) ಯ ವರದಿ ತಿಳಿಸಿದೆ.
ಆರೋಗ್ಯ ವೆಚ್ಚ ನಿಭಾಯಿಸುವುದೇ ಕಷ್ಟ
ಸಾಮಾಜಿಕ ಯೋಜನೆಗಳ ಸೌಲಭ್ಯ ಮತ್ತು ಬಳಕೆ ಕುರಿತು ರಾಷ್ಟ್ರೀಯ ಸಮೀಕ್ಷೆ ಸಂಸ್ಥೆ ಅಧ್ಯಯನ ನಡೆಸಿದ್ದು, ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡಜನರು ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ಕಷ್ಟಪಡುತ್ತಾರೆ ಎಂದು ಹೇಳಿದೆ.
ಶೇ.10ರಷ್ಟು ಗ್ರಾಮೀಣ ಮಂದಿಗೆ ವಿಮೆ
ಗ್ರಾಮೀಣರ ಪೈಕಿ ಶೇ.10.2ರಷ್ಟು ಬಡ ಜನರು ಮಾತ್ರ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳ ಆರೋಗ್ಯ ವಿಮ ಯೋಜನೆಯನ್ನು ಹೊಂದಿದ್ದಾರೆ.
ತುಸು ಸುಧಾರಣೆ
ಆಯುಷ್ಮಾನ್ ಭಾರತ್ ಜಾರಿಗೆ ಮೊದಲು ಗ್ರಾಮೀಣ ಪ್ರದೇಶದಲ್ಲಿ ಶೇ.12.9ರಷ್ಟು ಮತ್ತು ನಗರ ಪ್ರದೇಶದ ಶೇ.8.9ರಷ್ಟು ಬಡ ಜನರು ಮಾತ್ರ ಸರಕಾರಿ ಆರೋಗ್ಯ ವಿಮೆ ಯೋಜನೆ ಪಡೆಯುತ್ತಿದ್ದರು. ಪ್ರಸ್ತುತ ಈ ಯೋಜನೆ ಅಡಿಯಲ್ಲಿ 6.4 ಲಕ್ಷದಷ್ಟು ಜನರಿಗೆ ಆರೋಗ್ಯ ವೆಚ್ಚವನ್ನು ನೀಡಲಾಗಿದೆ.
ಶೇ.9.8ರಷ್ಟು ನಗರ ಮಂದಿಗೆ ವಿಮೆ
ದೇಶದ ನಗರಗಳಲ್ಲಿರುವ ಶೇ.9.8ರಷ್ಟು ಬಡವರು ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಚಿಕಿತ್ಸೆಗಳಿಗೆ ಬಡವರು ಹೇಗೆ ಹಣ ಹೊಂದಿಸ್ತಾರೆ?
ಉಳಿತಾಯದ ಹಣ ಬಳಕೆ
ಆರೋಗ್ಯ ವಿಮೆ ಇಲ್ಲದ ಪರಿಣಾಮ 2016-17ರಲ್ಲಿ, ಗ್ರಾಮೀಣ ಪ್ರದೇಶದ ಶೇ.79.5 ಮತ್ತು ನಗರ ಪ್ರದೇಶದ ಶೇ.83.7 ಜನರು ತಮ್ಮ ಉಳಿತಾಯ ಹಣ ದಿಂದ ವೈದ್ಯಕೀಯ ವೆಚ್ಚವನ್ನು ಪಾವತಿಸಿ¨ªಾರೆ. 2014 ರಲ್ಲಿ ಗ್ರಾಮೀಣ ಪ್ರದೇಶದ ಶೇ.67.8 ಮತ್ತು ನಗರ ಪ್ರದೇಶದ ಶೇ.74.9ರಷ್ಟು ಜನರು ಆರೋಗ್ಯ ವೆಚ್ಚಕ್ಕಾಗಿ ತಮ್ಮ ಉಳಿತಾಯ ಮೊತ್ತವನ್ನು ವ್ಯಯಿಸಿದ್ದರು.
ಶೇ.13.4ರಷ್ಟು ಸಾಲ
2017-18ರಲ್ಲಿ ಗ್ರಾಮೀಣ ಭಾಗದ ಶೇ.13.4ರಷ್ಟು ಮತ್ತು ನಗರ ಪ್ರದೇಶದ ಶೇ.8.5ರಷ್ಟು ಬಡ ಜನರು ಸಾಲ ಮಾಡಿ ಆರೋಗ್ಯ ಖರ್ಚನ್ನು ಭರಿಸಿದ್ದಾರೆ.
ಶೇ.3.4 ರಷ್ಟು ಬಂಧುಗಳ ನೆರವು
ಗ್ರಾಮೀಣ ಪ್ರದೇಶದಲ್ಲಿ ಶೇ.3.4 ರಷ್ಟು ಜನರು ತಮ್ಮ ಆರೋಗ್ಯ ನಿರ್ವಹಣೆಯ ವೆಚ್ಚಕ್ಕಾಗಿ ಸ್ನೇಹಿತರು ಅಥವಾ ಬಂಧು ಬಳಗದವರಿಂದ ನೆರವು ಪಡೆದಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇವರ ಪ್ರಮಾಣ ಶೇ.3.8ರಷ್ಟಿದೆ.
ಆಸ್ತಿ ಮಾರಾಟ
ಗ್ರಾಮೀಣ ಮತ್ತು ನಗರ ಪ್ರದೇಶದ ಶೇ.0.4 ರಷ್ಟು ಬಡ ಜನರು ಆರೋಗ್ಯ ವೆಚ್ಚವನ್ನು ತುಂಬುವುದಕ್ಕಾಗಿ ತಮ್ಮ ಆಸ್ತಿಯನ್ನು ಮಾರಿದ್ದಾರೆ.
ಶೇ.3.2ರಷ್ಟು
ಗ್ರಾಮೀಣ ಭಾಗದ ಶೇ.3.2ರಷ್ಟು ಮತ್ತು ನಗರ ಪ್ರದೇಶದ ಶೇ. 3.4ರಷ್ಟು ಬಡ ಜನರು ಆರೋಗ್ಯ ಕುರಿತಾದ ಖರ್ಚುಗಳನ್ನು ಹೊಂದಿ ಸಲು ಇತರ ಮೂಲಗಳನ್ನು ಅವಲಂಬಿಸಿದ್ದರು.
31,845 ರೂ. ಸರಾಸರಿ ಖರ್ಚು
ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿಯೊಬ್ಬ ರೋಗಿಗಳ ಮೇಲೆ ಸುಮಾರು 31,845 ರೂ. ಸರಾಸರಿ ವೈದ್ಯಕೀಯ ವೆಚ್ಚವನ್ನು ವಿಧಿಸಲಾಗಿದ್ದು, ಇದರ ಪ್ರಮಾಣ ಸರಕಾರಿ ಆಸ್ಪತ್ರೆಯ ವೆಚ್ಚಕ್ಕಿಂತ (4,452 ರೂ.) ಏಳು ಪಟ್ಟು ಹೆಚ್ಚಾಗಿದೆ ಎಂದು ಎನ್‌ಎಸ್‌ಒ ವರದಿ ತಿಳಿಸಿದೆ.
ಅರ್ಧಕ್ಕಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳು
ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ.51.9ರಷ್ಟು ಮತ್ತು ನಗರದಲ್ಲಿ ಶೇ.61.4 ರಷ್ಟು ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.