ಕಾಶ್ಮೀರ ದಾಳಿಗಾಗಿ ಆಫ್ಘನ್ ಉಗ್ರರ ನೇಮಕ
Team Udayavani, Oct 18, 2019, 5:00 AM IST
ಶ್ರೀನಗರ: ಕಾಶ್ಮೀರ ವಿಚಾರದಲ್ಲಿ ಪ್ರತಿ ಹಂತದಲ್ಲೂ ಮುಖಭಂಗ ಅನುಭವಿಸುತ್ತಿರುವ ಪಾಕಿಸ್ಥಾನ ಈಗ ಅಫ್ಘಾನಿಸ್ಥಾನ ಮೂಲದ ಉಗ್ರರನ್ನು ಕಾಶ್ಮೀರಕ್ಕೆ ಕಳುಹಿ ಸುವ ದುರುಳ ತಂತ್ರಕ್ಕೆ ಮೊರೆ ಹೋಗಿದೆ. ಕಳೆದ ಕೆಲವು ದಿನಗಳಿಂದ ಪಾಶೊ ಭಾಷೆ ಮಾತನಾಡುವ ಮತ್ತು ಆಫ್ಘನ್ ಮೂಲದ ಉಗ್ರರು ಕಾಶ್ಮೀರ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಗುಪ್ತಚರ ದಳಗಳು ಮಾಹಿತಿ ನೀಡಿವೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಈಗ ಹಂತ ಹಂತ ವಾಗಿ ತಿಳಿಯಾಗುತ್ತಿದೆ. ಕೆಲವೇ ದಿನಗಳ ಹಿಂದೆ ಪೋಸ್ಟ್‌ಪೇಯ್ಡ ಮೊಬೈಲ್ ಸಂಪರ್ಕಗಳನ್ನು ಸಕ್ರಿಯ ಗೊಳಿಸಲಾಗಿದೆ. 370ನೇ ವಿಧಿ ರದ್ದಾದ ಅನಂತರ ಕಾಶ್ಮೀರಿ, ಉರ್ದು ಹೊರತಾದ ಭಾಷೆ ಮಾತನಾಡುವ ಉಗ್ರರು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ನೀಡುವಂತೆ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಗೃಹ ಸಚಿವಾಲಯವು ಸೂಚನೆ ನೀಡಿದೆ.
ಸಾಮಾನ್ಯವಾಗಿ ಭದ್ರತಾ ಸಂಸ್ಥೆಗಳು ಪಾಕಿಸ್ಥಾನ ಮೂಲದ ಉಗ್ರರ ಮೇಲೆ ಕಣ್ಣಿಟ್ಟಿರುತ್ತಾರೆ. ಇದರಿಂದ ಭದ್ರತಾ ಸಂಸ್ಥೆ ಮತ್ತು ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ದಾಳಿ ನಡೆಸಲು ಅಫ್ಘಾನಿಸ್ತಾನ ಮೂಲದ ವ್ಯಕ್ತಿಗಳನ್ನು ಸುಲಭವಾಗಿ ಬಳಸಿಕೊಳ್ಳ ಬಹುದು ಎಂಬುದು ಪಾಕ್ ಉಗ್ರರ ತಂತ್ರ ಎಂದು ಹೇಳಲಾಗಿದೆ.
ಅದರಲ್ಲೂ ದೂರವಾಣಿ ಸಂಪರ್ಕ ವನ್ನು ಸಕ್ರಿಯಗೊಳಿಸಿದ ಅನಂತರದ ಸನ್ನಿ ವೇಶವನ್ನು ಉತ್ತಮವಾಗಿ ಬಳಸಿಕೊಳ್ಳಲು ಪಾಕಿಸ್ಥಾನದ ಗುಪ್ತಚರ ದಳ ಐಎಸ್‌ಐ ನಿರ್ಧರಿಸಿದಂತಿದೆ. ಆಫ್ಘನ್ ಮೂಲದ ಉಗ್ರರ ಜತೆಗೆ ಪಾಕಿಸ್ಥಾನದ ಉಗ್ರರೂ ಕಾಶ್ಮೀರಕ್ಕೆ ನುಸುಳುವ ಎಲ್ಲ ಪ್ರಯತ್ನವನ್ನೂ ನಡೆಸಿದ್ದಾರೆ. ಗಡಿಯಲ್ಲಿರುವ ಉಗ್ರರಿಗೆ ದಾಳಿ ನಡೆಸಲು ಸಿದ್ಧರಾಗಿ ಎಂಬ ಸಂದೇಶ ವನ್ನು ಐಎಸ್‌ಐ ಈಗಾಗಲೇ ಕಳುಹಿಸಿದೆ ಎನ್ನಲಾಗಿದೆ. ಇತ್ತೀಚೆಗೆ ಪಾಕಿಸ್ಥಾನದ ಖೈಬರ್ ಪಾಖು¤ಂಖ್ವಾ ಪ್ರದೇಶದಲ್ಲಿ ಉಗ್ರ ಮುಖಂಡ ರೊಂದಿಗೆ ಪಾಕ್ ಸೇನೆ ಮತ್ತು ಐಎಸ್‌ಐ ಸಭೆ ನಡೆಸಿದೆ. ಈ ಸಭೆಯಲ್ಲಿ ದಾಳಿಯ ರೂಪರೇಖೆ ಅಂತಿಮಗೊಳಿಸ ಲಾಗಿದೆ ಎನ್ನಲಾಗಿದೆ.
ಜೀವ ಭೀತಿಯಲ್ಲಿ ಸೇಬು ವರ್ತಕರು!
ಕಾಶ್ಮೀರದ ಸೇಬು ವರ್ತಕರು ಈಗ ಜೀವ ಭೀತಿ ಎದುರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಇಬ್ಬರು ಸೇಬು ವರ್ತಕರನ್ನು ಉಗ್ರರು ಹತ್ಯೆಗೈದಿದ್ದಾರೆ. ಇದರಿಂದಾಗಿ ಕಾಶ್ಮೀರಕ್ಕೆ ಸೇಬು ಖರೀದಿಸಲು ಆಗಮಿಸುವ ಟ್ರಕ್‌ಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಾಶ್ಮೀರದ ಮುಖ್ಯ ವಹಿವಾಟು ಸೇಬು ಆಗಿದ್ದು, ಸೆಪ್ಟೆಂಬರ್‌ನಿಂದ ಡಿಸೆಂಬರ್ ಅವಧಿ ಯಲ್ಲಿ ಸೇಬು ವ್ಯಾಪಾರ ಜೋರಾಗಿ ನಡೆಯು ತ್ತದೆ. ಕಾಶ್ಮೀರದಲ್ಲಿ 2 ಸಾವಿರ ಟ್ರಕ್‌ಗಳಿದ್ದು, ಸೇಬು ಸೀಸನ್ ನಲ್ಲಿ ಸುಮಾರು 8 ಸಾವಿರ ಟ್ರಕ್‌ಗಳಿಂದ ಸೇಬುಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತದೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯದಿಂದ ಆಗಮಿಸುವ ಟ್ರಕ್‌ಗಳ ಮೇಲೆಯೇ ಸೇಬು ವ್ಯಾಪಾರ ಅವಲಂಬಿಸಿರುತ್ತದೆ. ಆದರೆ ಇಬ್ಬರು ಸೇಬು ಟ್ರಕ್ ಡ್ರೈವರುಗಳನ್ನೇ ಉಗ್ರರು ಹತ್ಯೆಗೈದಿರುವುದರಿಂದ ಸೇಬು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಸೇಬು ಸಂಸ್ಕರಣೆ ಹಾಗೂ ಪ್ಯಾಕ್ ಮಾಡಲೂ ಕೂಲಿ ಕಾರ್ಮಿಕರು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.