Embassy: ದೆಹಲಿಯಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚಿದ ಅಫ್ಘಾನಿಸ್ತಾನ… ಇಲ್ಲಿದೆ ಕಾರಣ
Team Udayavani, Nov 24, 2023, 11:19 AM IST
ನವದೆಹಲಿ: ಅಫ್ಘಾನಿಸ್ತಾನವು ನವದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಶಾಶ್ವತವಾಗಿ ಮುಚ್ಚುವುದಾಗಿ ಘೋಷಿಸಿದೆ.
ನವದೆಹಲಿಯಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಭಾರತ ಸರ್ಕಾರದ ನಿರಂತರ ಸವಾಲುಗಳಿಂದಾಗಿ 23 ನವೆಂಬರ್ 2023 ರಿಂದ ಜಾರಿಗೆ ಬರುವಂತೆ ನವದೆಹಲಿಯಲ್ಲಿ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಶಾಶ್ವತವಾಗಿ ಮುಚ್ಚಿರುವುದನ್ನು ಘೋಷಿಸಲು ವಿಷಾದಿಸುತ್ತದೆ ಎಂದು ಅಫ್ಘಾನಿಸ್ತಾನದ ರಾಯಭಾರ ಕಚೇರಿ ತನ್ನ ಅಧಿಕೃತ ಹೇಳಿಕೆ ಹೊರಡಿಸಿದೆ.
ದೆಹಲಿಯಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚುವ ಕಾರಣದಿಂದ ಅಫ್ಘಾನಿಸ್ತಾನ ಸೆಪ್ಟೆಂಬರ್ 30 ರಂದು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂದು ಹೇಳಿದೆ.
ಕಳೆದ ಎರಡು ವರ್ಷ ಮತ್ತು ಮೂರು ತಿಂಗಳುಗಳಲ್ಲಿ, ಭಾರತದಲ್ಲಿ ಆಫ್ಘನ್ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಆಗಸ್ಟ್ 2021 ಕ್ಕೆ ಹೋಲಿಸಿದರೆ, ಈ ಅಂಕಿಅಂಶವು ಅರ್ಧದಷ್ಟು ಕಡಿಮೆಯಾಗಿದೆ ಮತ್ತು ಈ ಅವಧಿಯಲ್ಲಿ ಕಡಿಮೆ ಸಂಖ್ಯೆಯ ಹೊಸ ವೀಸಾಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು, ಉದ್ಯಮಿಗಳು ದೇಶ ತೊರೆಯುತ್ತಿದ್ದಾರೆ. ಆಗಸ್ಟ್ 2021 ರಿಂದ ಈ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Finalನಲ್ಲಿ ಭಾರತ ಗೆದ್ದಿದರೆ ಅದು ಕ್ರಿಕೆಟ್ ಆಟದ ದುಃಖದ ದಿನವಾಗಿರುತ್ತಿತ್ತು: ರಜಾಕ್
ನಿಜಕ್ಕೂ ಅಫ್ಘಾನ್ ಮಾಡಿರುವ ಆರೋಪ ಸಮಂಜಸವೇ
ಇಲ್ಲಿ ಅಫ್ಘಾನಿಸ್ತಾನ ಭಾರತದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದಂತಿದೆ ಏಕೆಂದರೆ ಅಫ್ಘಾನ್ ರಾಯಭಾರ ಕಚೇರಿಯಲ್ಲಿ ಸಿಬಂದಿಗಳ ಕೊರತೆ ಇರುವುದು ಅವರ ಆಂತರಿಕ ಸಮಸ್ಯೆ ಈ ನಡುವೆ ಅಲ್ಲಿನ ರಾಯಭಾರಿಗಳಿಗೂ, ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ನೇಮಿಸಲಾದ ಸಿಬ್ಬಂದಿಗೂ ಹೊಂದಾಣಿಕೆ ಇಲ್ಲವಾಗಿದೆ ಇದೆ ಕಾರಣದಿಂದ ಇಲ್ಲಿ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ, ಇದರ ಜೊತೆಗೆ ಹಣದ ಬಿಕ್ಕಟ್ಟೂ ಕೂಡ ಕಾರಣವಾಗಿದೆ. ಈ ಎಲ್ಲ ಅಂಶಗಳನ್ನು ತುಲನೆ ಮಾಡಿ ಅಫ್ಘಾನ್ ತನ್ನ ರಾಯಭಾರ ಕಚೇರಿಯನ್ನು ಮುಚ್ಚಲು ನಿರ್ಧರಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ವಿಚಾರ ಹಾಗಿದ್ದರೂ ಅಫ್ಘಾನ್ ಮಾತ್ರ ಭಾರತವನ್ನೇ ದೂರಿದೆ.
Press Statement
24th November, 2023The Embassy of the Islamic Republic of Afghanistan announces permanent closure in New Delhi.
The Embassy of the Islamic Republic of Afghanistan in New Delhi regrets to announce the permanent closure of its diplomatic mission in New Delhi 1/2 pic.twitter.com/VlXRSA0vZ8
— Afghan Embassy India (@AfghanistanInIN) November 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.